ಪೋಸ್ಟ್‌ಗಳು

ಜೂನ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Environ(Mental) day ವಿಶ್ವ ಪರಿಸರ ದಿನ

ಈ ದಿನದ ಪ್ರಯುಕ್ತ ಜಗತ್ತಿನ್ನೆಲ್ಲೆಡೆ ಪರಿಸರದ ಬಗ್ಗೆ ಬಹಳಷ್ಟು ಕಾರ್ಯಕ್ರಮಗಳನ್ನು ನಡೆಸುತ್ತಾರೆ.ಗಿಡ ನೆಡುವುದು, ಪರಿಸರವನ್ನು ಸಂರಕ್ಷಿಸುವುದರ ಬಗ್ಗೆ ಮಾಹಿತಿ, ಸಂಗೀತ ನೃತ್ಯದ ಮೂಲಕ ಪರಿಸರದ ಬಗ್ಗೆ ಅರಿವು ಮೂಡಿಸುವುದು ಹೀಗೆ ಹತ್ತು ಹಲವು ಬಗೆಯಲ್ಲಿ ಈಗ ವೈಯಕ್ತಿಕ ಹಾಗು ಸಂಘ ಸಂಸ್ಥೆಗಳು ಪರಿಸರವನ್ನು ಉಳಿಸಲು ಹಾಗು ಬೆಳಿಸಲು ನಿಸ್ಸ್ವಾರ್ಥವಾಗಿ ತೊಡಗಿದ್ದಾರೆ. ಪರಿಸರ ಅಂದರೆ ಏನು? ಎಲ್ಲರು ತಿಳಿದಿರುವಂತೆ ನಮ್ಮ ಸುತ್ತಮುತ್ತಲಿನ ಪ್ರದೇಶ.ಗಿಡ ಮರಗಳು,ನದಿ ,ಭೂಮಿ ,ಆಕಾಶ ಮತ್ತು ಪಕ್ಷಿ ಪ್ರಾಣಿ  ಹೀಗೆ ನಮ್ಮನ್ನು ಆವೃತವಾದ ನೈಸರ್ಗಿಕ ಸಜೀವ ನಿರ್ಜೀವ ಅಂಶಗಳು. ಶಬ್ದಕೋಶದಲ್ಲಿರುವ ಹಲವಾರು ವ್ಯಾಖ್ಯಾನಗಳಲ್ಲಿ ಒಂದಾದ '' ಒಬ್ಬ ವ್ಯಕ್ತಿ, ಪ್ರಾಣಿ, ಅಥವಾ ಸಸ್ಯ ವಾಸಿಸುವ ಅಥವಾ ಕಾರ್ಯನಿರ್ವಹಿಸುವ ಸುತ್ತಮುತ್ತಲಿನ ಅಥವಾ ಪರಿಸ್ಥಿತಿಗಳು.'' ಪರಿಸ್ಥಿತಿಗಳು ಅಂದರೆ ಭೌತಿಕ ಹಾಗು ಅಸ್ಪೃಶ್ಯ ಸ್ಥಿತಿಗಳು ಹೊರಗಿನ ಅಥವಾ ಆಂತರಿಕ. ಹೊರಗಿನ ವಾತಾವರಣವನ್ನು ಶುದ್ಧವಾಗಿಡಲು ನಾವೆಲ್ಲರೂ ಸಾಕಷ್ಟು ಪಯತ್ನ ಪಡುತ್ತಿದ್ದೇವೆ. ದಿನನಿತ್ಯದ ಕೆಲಸಗಳಲ್ಲಿ ಸಾಕಷ್ಟು ಮುತುವರ್ಜಿ ವಹಿಸಿ ನಮ್ಮ ಮನೆಯನ್ನು ಹಾಗು ಸುತ್ತಮುತ್ತಲಿನ ಆವರಣವನ್ನು ತಕ್ಕಮಟ್ಟಿಗೆ ಸ್ವಚ್ಛ್ವಾಗಿ ಇಡಲು ಕಷ್ಟಪದಿತ್ತುದೇವೆ. ಆದರೆ ಮನುಷ್ಯನ ಮನಃಸ್ಥಿತಿಯು ಈ ಪರಿಸರದ ವ್ಯಾಖ್ಯಾನದಲ್ಲಿ ಸೇರುತ್ತದೆಯೋ ಎಂಬ ಪ್ರಶ್ನೆ ನನ್ನದು? ನಮ್ಮ  ಭೌತಿಕ, ಸ್ಪೃಷ್ಜ್ಯ ವ...