ಪೋಸ್ಟ್‌ಗಳು

ಸೆಪ್ಟೆಂಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪವರ್ ಕಟ್

 ಕಳೆದ ವಾರದಿಂದ ನಮ್ಮಲ್ಲಿ ವಿದ್ಯುತ್ ಸರಬರಾಜಿನ ಅಡಚಣೆ ಆದ್ದರಿಂದ ನಮಗೆ ನಮ್ಮೋರು, ನಮ್ಮದ ದೇಶದ ನೆನಪು ಹಸಿರಾಗಿತು.ಪವರ್ಕಟ್ ಕೆಲನಿಮಿಷದಲ್ಲ ..ಮೊದಲನೆಯ ದಿನ ಸುಮಾರು ೭ ಘಂಟೆಗಳ ಕಾಲ  ಮತ್ತೆ ಎರಡನೇಯ ಬಾರಿಯು  ಸುಮಾರು ಅಷ್ಟೇ ಹೊತ್ತು. ಮೊದಲಸಲವಂತೂ ಸಂಜೆಯ ಹೊತ್ತು ೫ ಹೊಡೆದಿತ್ತು. ಇನ್ನು ಬೇಸಿಗೆಯ ಕಡೆಯ ದಿನಗಳು. ಹೀಗಾಗಿ ಸಂಜೆ ಸುಮಾರು ೭ರ ತನತ ಬೆಳೆಕಿರುವುದರಿಂದ ಮಕ್ಕಳು ಹೆಗೋ ಅಲ್ಲಿಯ ತನಕ ಹೊರಗೆ ಗಾರ್ಡನ್ ಪಾರ್ಕ್ ಅಂತ ಕಾಲ ಕಳಿದರು.ನಮಗೆ ಈ ಅನುಭವ ಮರೆತಂತಾಗಿತ್ತು.ಇನ್ನು ಎರಡು ವಾರಗಳು ಆಗಬಹುದು ಅಂದಿದಾರೆ .. ೧೦ ವರ್ಷಗಳಲ್ಲಿ  ಪವರ್ಕಟ್ ಆಗಿದ್ದರು ಕೆಲ ನಿಮಿಷಗಳು ಕಾಲ ಮಾತ್ರ. ನನ್ನ ಸುಮಾರು ಎಲ್ಲಾ ಲೇಖನಗಳಲ್ಲಿ ಪೀಳಿಗೆಯ ಬಗ್ಗೆ ಉಲ್ಲೇಖವಿರುತ್ತದೆ.ಈಗಲೂ ನನಗೆ ತೋಚಿದ್ದು ಅದೇ. ನಮ್ಮ ಕಾಲದಲ್ಲಿ ನಮ್ಮ ಊರಿನಲ್ಲಿ  ಪವರ್ ಕಟ್ ಬಹಳ ಸಾಮಾನ್ಯ. ಬೇಸಿಗೆ ಕಾಲದಲ್ಲಂತೂ ವಿದ್ಯುತ್ತಿನ ಅವಶ್ಯಕತೆ ಹೆಚ್ಚು, ಆಗಲೇ ಹೆಚ್ಚಿನ ಅಡಚಣೆ .ಮಾರ್ಚ್ ತಿಂಗಳಿನಲ್ಲಿ ನಮ್ಮೆಲ್ಲರ ಪರೀಕ್ಷೆ, ಎಲ್ಲರ ಪಾಡು ಈಗ ನೆನಸಿಕೊಂಡರೆ ನಗು ಬರುತ್ತದೆ. ಚಿಕ್ಕಂದಿನಲ್ಲಿ ಮೇಣಬತ್ತಿಗಳು, ನಂತರ ಪೆಟ್ರೋಮ್ಯಾಕ್ಸ್ , ಆಮೇಲೆ ಎಮರ್ಜೆನ್ಸಿ ಟುಬೆಲೈಟ್ಗಳು. ನಮ್ಮ ತಂದೆಯ ಡೈಲಾಗ್  ಮಾತ್ರ ವರ್ಷಾನು ವರ್ಷಗಳಿಂದ ಅದೇ .."ಬೆಳ್ಳಿಗ್ಗೆ ಬೇಗ ಏಳಬೇಕು ,ಹಿಂದಿನ ದಿನ ತುಂಬಾ ಓದುವುದು ಇಟ್ಟುಕೊಳ್ಳಬಾರದು,ಮುಂಚಿತವಾಗಿಯೇ ತಯ್ಯಾರಿ ಮಾಡಬೇಕು ".ಅವರೆಲ

ಬಾಲ್ಯದ ಬೆಳದಿಂಗಳು

 ಬಾಲ್ಯದ ಬಗ್ಗೆ ನೆನಪುಗಳು ನನ್ನ ಜೀವನದ ಉತ್ತಮವಾದ ಹಾಗು ಈಗಿನ ಜೀವನ ಶೈಲಿಯನ್ನು ರೂಪಿಸುವಲ್ಲಿ ಮಹತ್ತಾದ ಪಾತ್ರ ವಹಿಸಿವೆ. ಎಲ್ಲರಂತೆ ನನ್ನ ಬಾಲ್ಯವೂ ಹಿತಕರವಾಗಿ ಹಾಗು ಆರೋಗ್ಯಕರವಾಗಿ ಇತ್ತು. ಟಿವಿ, ಮೊಬೈಲ್ ಫೋನ್, ಕಂಪ್ಯೂಟ ಇಲ್ಲದ ಜಗತ್ತು ನಮ್ಮ ಮಕ್ಕಳ ಬಾಲ್ಯದ ಜೀವನಕ್ಕಿಂತ ಉತ್ತಮವೆಂದು ದಿನನಿತ್ಯ ಅನಿಸುತ್ತದೆ. ಆದರೆ ಕೆಲವೊಂದು ವಿಷಯಗಳು ಪೀಳಿಗೆಯಿಂದ ಪೀಳಿಗೆಗೆ ಬದಲಾಗುವಂತೆ, ಬದಲಾವಣೆ ನಮ್ಮಲ್ಲಿ ಉತ್ತಮ ವ್ಯಕ್ತಿತ್ವ ಮೂಡಿಸುವಲ್ಲಿ ಸಹಾಯ ಮಾಡುತ್ತದೆ. ಹುಟ್ಟಿದ್ದು ಹುಬ್ಬಳ್ಳಿಯಲ್ಲಾದರೂ, ನನ್ನ ಸಂಪೂರ್ಣ ಬಾಲ್ಯ ಹಾಗು ವಿದ್ಯಾಭ್ಯಾಸ ಎಲ್ಲವು ವೈಭವಯುತ ಮೈಸೂರಿನಲ್ಲಿ. ನನ್ನ ಅದೃಷ್ಟವೋ ಅವಕಾಶವೋ ಗೊತ್ತಿಲ್ಲ, ಮೈಸೂರಿನಂತಹ ಸಾಂಪ್ರದಾಯಿಕ ಹಾಗು ಪ್ರಗತಿಶೀಲ ನಗರಲ್ಲಿ ನನ್ನ ಬೆಳೆವಣಿಗೆಯ ೨೩ ವರ್ಷಗಳು ಇದ್ದದ್ದು ಒಂದು ಅಮೂಲ್ಯವಾದ ಅಂಶ. ತಂದೆಯದು ಸರ್ಕಾರೀ ನೌಕರಿ. ಮಧ್ಯಮ ವರ್ಗದ ಪರಿವಾರದಲ್ಲಿ ಇದ್ದ ನಮಗೆ ಮೈಸೂರಿನಲ್ಲಿ ನಮ್ಮ ಸಂಬಂಧಿಕರು ಅಂತ ಯಾರೂ ಇರದಿದ್ದ ಕಾರಣ, ನಮ್ಮ ಅಕ್ಕ ಪಕ್ಕದ ಮನೆಯವರು ಮತ್ತು ನಮ್ಮ ತಂದೆ ವರ್ಷಗಳಿಂದ ಸಂಪಾದಿಸಿದ ಸ್ನೇಹಿತರ ಗುಂಪೇ ನಮ್ಮ ನೆಂಟರಿಷ್ಟರು. ಮನೆಯೊಳಗೆ ಉತ್ತರ ಕರ್ನಾಟಕ ಭಾಷೆ ಹಾಗು ಅಡುಗೆ. ಹೊರಗೆ ಕಾಲಿಟ್ಟ ತಕ್ಷಣ ಮೈಸೂರಿನ ಸೊಗಸಾದ ಕನ್ನಡ ಹಾಗೂ ಅಕ್ಕ-ಪಕ್ಕದ ಮನೆಯವರ ರುಚಿಯಾದ ಬಿಟ್ಟಿ ಕವಳದ (ನನ್ನ ತಾಯಿ ನನ್ನ ಆಡಿಕೊಳ್ಳತಾಯಿದ್ರು ‘ನೀನು ಹೊರಗೆ