ಪೋಸ್ಟ್‌ಗಳು

ಮೇ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕಲಾತ್ಮಕ ಸ್ಪರ್ಶ

ಇಮೇಜ್
ಚಿತ್ರಕಲೆಯಲ್ಲಿ ನನಗೆ ಚಿಕ್ಕಂದಿನಿಂದಲೂ ಆಸಕ್ತಿ. ಆದರೆ ಆಗ ಅದರ ಬಗ್ಗೆ ಅಷ್ಟು ಗಮನ ಕೊಡಲಿಲ್ಲ. ವಿದ್ಯಾಭ್ಯಾಸದ ಬಗ್ಗೆ ನಮ್ಮ ಎಲ್ಲಾ ಶ್ರಮ. ಮನೆಯನ್ನು ಅಚ್ಚುಕಟ್ಟಾಗಿ ಇಡುವುದು, ಒಳಾಂಗಣ ಗಿಡಗಳನ್ನು ಬೆಳೆಸುವುದು ನನ್ನ ಅಚ್ಚುಮೆಚ್ಚಿನ ಹವ್ಯಾಸ. ನಿಜ ಹೇಳ್ಬೇಕು ಅಂದ್ರೆ ಹವ್ಯಾಸಕ್ಕಿಂತಲೂ ಹೆಚ್ಚು. ಮನೆಯ ಪೀಠೋಪಕರಣಗಳ ಜಾಗ ಬದಲಾಯಿಸುವುದು  ಹಾಗು ಇನ್ನಿತರ ಕಲಾತ್ಮಕ ವಸ್ತುಗಳನ್ನು ಮನ ಬಂದಂತೆ ಆಗಾಗ ಸ್ಥಳಾಂತರ ಮಾಡುವುದು ನನ್ನ ಚಟ .. ಆಗ  ನನ್ನ ತಂದೆ ತಾಯಿ ಆಗಲಿ ,ಈಗ ನನ್ನ ಪತಿ ಆಗಲಿ ಯಾವ ಆಕ್ಷೇಪಣೆ ಮಾಡುವುದಿಲ್ಲ. ಈಗ ಮತ್ತೆ ಆಹಳೆಯ ಸ್ಥಗಿತಗೊಳಿಸಿದ ಕಲೆಯನ್ನು ಪುನರುಜ್ಜೀವನ ಮಾಡಲು ಪ್ರಾರಂಬಿಸಿದ್ದೀನಿ. ಕಳೆದ ವರ್ಷ ಅಂದ್ರೆ ೨೦೧೯ನಲ್ಲಿ ವರ್ಲಿ ಚಿತ್ರಕಲೆಯಿಂದ ಶುರು ಮಾಡಿ ಈಗ ಮಧುಬನಿಯ ತನಕ ಬಂದಿದ್ದೀನಿ .. ಭಾರತೀಯ ಎಂದೆನಿಸಿಕೊಳ್ಳಲು ಮತ್ತೊಂದು ಹೆಮ್ಮೆಯ ಅವಕಾಶ.

ಚಿಗುರೊಡೆದಾಗ

ಇಮೇಜ್
ಈ ನನ್ನ ಬ್ಲಾಗ್ ಕೇವಲ ನನ್ನ ಬರಹಗಳಿಗೆ ಮಾತ್ರ ಸೀಮಿತ ಮಾಡೋಣ ಅಂತ ಶುರುಮಾಡಿದ್ದೆ ಆದ್ರೆ ಈಗ ಕಳೆದ ೨ ತಿಂಗಳಿಂದ ಜೀವನದ ಗತಿಯು ಬದಲಾದ ಕಾರಣ ನನ್ನ ಹವ್ಯಾಸಗಳು ಕೇವಲ ನನ್ನ ಬರಹಕ್ಕೆ  ಮೀಸಲಾಗಿರಲಿಲ್ಲ. ಮಕ್ಕಳೊಂದಿಗೆ ಕೆಲವು ಚಟುವಟಿಕೆಗಳು, ಅವರೊಂದಿಗೆ ಹೆಚ್ಚು ಸಮಯ ಕಳೆಯುವರಿಂದ ಬರೆಯುವ ಆಸಕ್ತಿ ಇದ್ದರೂ, ಅದಕ್ಕೆ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರೊಟ್ಟಿಗೆ ಮಾಡುವ ಕೆಲವು ಪೂರ್ವ ನಿರ್ಧಾರಿತ ಚಟುವಟಿಕೆಗಳು ಇಲ್ಲಿ  ಹಂಚಿಕೊಳ್ಳುತ್ತಿದ್ದೇನೆ. ಆ ಕೆಲವು ದಿನಗಳು ಒಳ್ಳೆಯ ಬಿಸಿಲು. ಹೀಗಿರುವಾಗ ಮಣ್ಣು ನೀರಿನ ಅಭಾವವಿಲ್ಲದ ಈ ದೇಶದಲ್ಲಿ, ವಸಂತ ಕಾಲದಿಂದ ಬೇಸಿಗೆಯ ತನಕ ಒಳ್ಳೆಯ ಕೈತೋಟ ಮಾಡಬಹುದು.ಎಲ್ಲರು ಮಾಡುವಂತೆ ನಾವು ಕೂಡ ಮನೆಯ ಹಿತ್ತಲಿನ ಅಂಗಳದಲ್ಲಿ ತೋಟಗಾರಿಕೆ ಶುರು ಮಾಡಿದ್ವಿ.ಗಿಡಮೂಲಿಕೆ ಗುಂಪಿಗೆ ಬರುವ ಮೆಂತ್ಯೆ , ಕೊತ್ತಂಬರಿ,ಪುದಿನ ಹಾಗು ಸಾಸಿವೆ. ತರಕಾರಿಗಳಾದ ಟೊಮೇಟೊ ಹಾಗು ಗಜ್ಜರಿ ಬೆಳೆಸಲು ನಿರ್ಧರಿಸಿ,ಅದಕ್ಕೆ ತಕ್ಕಂತೆ ತಯ್ಯಾರಿ ಮಾಡಿ-  ಮಕ್ಕಳಿಗೆ ಹೇಳಿದ ಮರು ನಿಮಿಷವೇ , ಅವರಲ್ಲಿನ ಹುರುಪು  ವರ್ಣಿಸಲಸಾಧ್ಯ ಮಣ್ಣು, ನೀರು ಮತ್ತು ಬಯಲು ನೋಡಿದರೆ ಎಲ್ಲರು ಮಕ್ಕಳಾಗುವರು. ಈವೆಲದಕ್ಕು ಪೂರಕವಾಗುವಂತಹ ವಾತಾವರಣ. ಇವುಗಳ ಸ್ಥಿರ ಚಿತ್ರಗಳನ್ನು ಹಾಕಲು ಪ್ರಯತ್ನಿಸುತ್ತಿದ್ದೀನಿ. ಕಳೆ ಕೀಳುವುದರಿಂದ ಹಿಡಿದು, ಮಣ್ಣುನ್ನು ಸಮ ಮಾಡಿ ಬೀಜ ಬಿತ್ತುವುದಕ್