Posts

ಪವರ್ ಕಟ್

ಕಳೆದ ವಾರದಿಂದ ನಮ್ಮಲ್ಲಿ ವಿದ್ಯುತ್ ಸರಬರಾಜಿನ ಅಡಚಣೆ ಆದ್ದರಿಂದ ನಮಗೆ ನಮ್ಮೋರು, ನಮ್ಮದ ದೇಶದ ನೆನಪು ಹಸಿರಾಗಿತು.ಪವರ್ಕಟ್ ಕೆಲನಿಮಿಷದಲ್ಲ ..ಮೊದಲನೆಯ ದಿನ ಸುಮಾರು ೭ ಘಂಟೆಗಳ ಕಾಲ  ಮತ್ತೆ ಎರಡನೇಯ ಬಾರಿಯು  ಸುಮಾರು ಅಷ್ಟೇ ಹೊತ್ತು. ಮೊದಲಸಲವಂತೂ ಸಂಜೆಯ ಹೊತ್ತು ೫ ಹೊಡೆದಿತ್ತು. ಇನ್ನು ಬೇಸಿಗೆಯ ಕಡೆಯ ದಿನಗಳು. ಹೀಗಾಗಿ ಸಂಜೆ ಸುಮಾರು ೭ರ ತನತ ಬೆಳೆಕಿರುವುದರಿಂದ ಮಕ್ಕಳು ಹೀಗೋ ಅಲ್ಲಿಯ ತನಕ ಹೊರಗೆ ಗಾರ್ಡನ್ ಪಾರ್ಕ್ ಅಂತ ಕಾಲ ಕಳಿದರು.ನಮಗೆ ಈ ಅನುಭವ ಮರೆತಂತಾಗಿತ್ತು.ಇನ್ನು ಎರಡು ವಾರಗಳು ಆಗಬಹುದು ಅಂದಿದಾರೆ .. ೧೦ ವರ್ಷಗಳಲ್ಲಿ  ಪವರ್ಕಟ್ ಆಗಿದ್ದರು ಕೆಲ ನಿಮಿಷಗಳು ಕಾಲ ಮಾತ್ರ. ನನ್ನ ಸುಮಾರು ಎಲ್ಲಾ ಲೇಖನಗಳಲ್ಲಿ ಪೀಳಿಗೆಯ ಬಗ್ಗೆ ಉಲ್ಲೇಖವಿರುತ್ತದೆ.ಈಗಲೂ ನನಗೆ ತೋಚಿದ್ದು ಅದೇ. ನಮ್ಮ ಕಾಲದಲ್ಲಿ ನಮ್ಮ ಊರಿನಲ್ಲಿ  ಪವರ್ ಕಟ್ ಬಹಳ ಸಾಮಾನ್ಯ. ಬೇಸಿಗೆ ಕಾಲದಲ್ಲಂತೂ ವಿದ್ಯುತ್ತಿನ ಅವಶ್ಯಕತೆ ಹೆಚ್ಚು, ಆಗಲೇ ಹೆಚ್ಚಿನ ಅಡಚಣೆ .ಮಾರ್ಚ್ ತಿಂಗಳಿನಲ್ಲಿ ನಮ್ಮೆಲ್ಲರ ಪರೀಕ್ಷೆ, ಎಲ್ಲರ ಪಾಡು ಈಗ ನೆನಸಿಕೊಂಡರೆ ನಗು ಬರುತ್ತದೆ. ಚಿಕ್ಕಂದಿನಲ್ಲಿ ಮೇಣಬತ್ತಿಗಳು, ನಂತರ ಪೆಟ್ರೋಮ್ಯಾಕ್ಸ್ , ಆಮೇಲೆ ಎಮರ್ಜೆನ್ಸಿ ಟುಬೆಲೈಟ್ಗಳು. ನಮ್ಮ ತಂದೆಯ ಡೈಲಾಗ್  ಮಾತ್ರ ವರ್ಷಾನು ವರ್ಷಗಳಿಂದ ಅದೇ .."ಬೆಳ್ಳಿಗ್ಗೆ ಬೇಗ ಏಳಬೇಕು ,ಹಿಂದಿನ ದಿನ ತುಂಬಾ ಓದುವುದು ಇಟ್ಟುಕೊಳ್ಳಬಾರದು,ಮುಂಚಿತವಾಗಿಯೇ ತಯ್ಯಾರಿ ಮಾಡಬೇಕು ".ಅವರೆ…

ಬಾಲ್ಯದ ಬೆಳದಿಂಗಳು

ಬಾಲ್ಯದ ಬಗ್ಗೆ ನೆನಪುಗಳು ನನ್ನ ಜೀವನದ ಉತ್ತಮವಾದ ಹಾಗು ಈಗಿನ ಜೀವನ ಶೈಲಿಯನ್ನು ರೂಪಿಸುವಲ್ಲಿ ಮಹತ್ತಾದ ಪಾತ್ರ ವಹಿಸಿವೆ. ಎಲ್ಲರಂತೆ ನನ್ನ ಬಾಲ್ಯವೂ ಹಿತಕರವಾಗಿ ಹಾಗು ಆರೋಗ್ಯಕರವಾಗಿ ಇತ್ತು. ಟಿವಿ, ಮೊಬೈಲ್ ಫೋನ್, ಕಂಪ್ಯೂಟ ಇಲ್ಲದ ಜಗತ್ತು ನಮ್ಮ ಮಕ್ಕಳ ಬಾಲ್ಯದ ಜೀವನಕ್ಕಿಂತ ಉತ್ತಮವೆಂದು ದಿನನಿತ್ಯ ಅನಿಸುತ್ತದೆ. ಆದರೆ ಕೆಲವೊಂದು ವಿಷಯಗಳು ಪೀಳಿಗೆಯಿಂದ ಪೀಳಿಗೆಗೆ ಬದಲಾಗುವಂತೆ, ಬದಲಾವಣೆ ನಮ್ಮಲ್ಲಿ ಉತ್ತಮ ವ್ಯಕ್ತಿತ್ವ ಮೂಡಿಸುವಲ್ಲಿ ಸಹಾಯ ಮಾಡುತ್ತದೆ.ಹುಟ್ಟಿದ್ದು ಹುಬ್ಬಳ್ಳಿಯಲ್ಲಾದರೂ, ನನ್ನ ಸಂಪೂರ್ಣ ಬಾಲ್ಯ ಹಾಗು ವಿದ್ಯಾಭ್ಯಾಸ ಎಲ್ಲವು ವೈಭವಯುತ ಮೈಸೂರಿನಲ್ಲಿ. ನನ್ನ ಅದೃಷ್ಟವೋ ಅವಕಾಶವೋ ಗೊತ್ತಿಲ್ಲ, ಮೈಸೂರಿನಂತಹ ಸಾಂಪ್ರದಾಯಿಕ ಹಾಗು ಪ್ರಗತಿಶೀಲ ನಗರಲ್ಲಿ ನನ್ನ ಬೆಳೆವಣಿಗೆಯ ೨೩ ವರ್ಷಗಳು ಇದ್ದದ್ದು ಒಂದು ಅಮೂಲ್ಯವಾದ ಅಂಶ.ತಂದೆಯದು ಸರ್ಕಾರೀ ನೌಕರಿ. ಮಧ್ಯಮ ವರ್ಗದ ಪರಿವಾರದಲ್ಲಿ ಇದ್ದ ನಮಗೆ ಮೈಸೂರಿನಲ್ಲಿ ನಮ್ಮ ಸಂಬಂಧಿಕರು ಅಂತ ಯಾರೂ ಇರದಿದ್ದ ಕಾರಣ, ನಮ್ಮ ಅಕ್ಕ ಪಕ್ಕದ ಮನೆಯವರು ಮತ್ತು ನಮ್ಮ ತಂದೆ ವರ್ಷಗಳಿಂದ ಸಂಪಾದಿಸಿದ ಸ್ನೇಹಿತರ ಗುಂಪೇ ನಮ್ಮ ನೆಂಟರಿಷ್ಟರು. ಮನೆಯೊಳಗೆ ಉತ್ತರ ಕರ್ನಾಟಕ ಭಾಷೆ ಹಾಗು ಅಡುಗೆ. ಹೊರಗೆ ಕಾಲಿಟ್ಟ ತಕ್ಷಣ ಮೈಸೂರಿನ ಸೊಗಸಾದ ಕನ್ನಡ ಹಾಗೂ ಅಕ್ಕ-ಪಕ್ಕದ ಮನೆಯವರ ರುಚಿಯಾದ ಬಿಟ್ಟಿ ಕವಳದ (ನನ್ನ ತಾಯಿ ನನ್ನ ಆಡಿಕೊಳ್ಳತಾಯಿದ್ರು ‘ನೀನು ಹೊರಗೆ ಆಟಕ್ಕೆ ಹ…

ಸ್ವಂತವಾಗದ ಸ್ವಾತಂತ್ರ

ಗಡಿಯಾಚೆ ಗೆ ಅಟ್ಟಿದರು ಸ್ಥಬ್ದವಾಗಿದೆ ಗಡಿಯಾರ ಘುಲಾಮ ಆಗಿಹುದು ಇನ್ನೂ ಹೆಣ್ಣಿನ ಅಧಿಕಾರ   ಬಡವರ ಕೂಗು ಮುಗುಲಿಗೇರಿ ಮಾಡುತಿಹುದು ಹಾಹಾಕಾರತರಳರು  ಅನಾಥರಾಗಿ ಮಾಡಲಿಲ್ಲಹರು ಅಂತಿಮ ಸಂಸ್ಕಾರಕುಲ ಮತ ಭೇಧಗಳು ಮಾಡಿವೆ ಮಾನವೀಯತೆಯ ಸಂಹಾರಸ್ವಂತವಾಗದ  ಸ್ವಾತಂತ್ರ ತಂತ್ರ ಕುತಂತ್ರಗಳ ನಡುವೆ ಸಂಚಾರ ಭರತನ  ಭಾರತದಲ್ಲಿ  ಇದ್ದರೂ ಸಿರಿತನ ಅಪಾರ ಅರಿವಿನ ಬಡತನದ  ಗೊಡ್ಡು ಸಂಪ್ರದಾಯದ  ಪ್ರಚಾರ ದೇಶ ಪ್ರೇಮ ಕೇವಲ ಸ್ವಾತಂತ್ರ ದಿನಕ್ಕೆ ಸೀಮಿತವಾದ ಆಚಾರಹೆಣ್ಣನ್ನ ಗೌರವಿಸೀ ದೇಶದ ಹೊನ್ನನ್ನು  ರಕ್ಷಿಸಿ ಮಣ್ಣನ್ನು ಸ್ವಚ್ಛವಿಟ್ಟು ಕಾಪಾಡೀ ಭವ್ಯ  ದೇಶದ ವಿಚಾರ 

ಅವಿಸ್ಮರಣೀಯ ಸಂಸ್ಕೃತ

ಸಂಸ್ಕೃತ ಎಂದೊಡನೆ ಗೌರವ ಅಭಿಮಾನ ನಮ್ಮ ಸ್ವತ್ತು ಎನ್ನುವ ಭಾವ. ಆದರೆ ಕಲಿಕೆ ಬಂದಾಗ ಭೀತಿ. ಶಾಸ್ತ್ರ,ಪುರಾಣಗಳ ಪ್ರಸ್ತಾವವಾದರೆ  ನಾವು ಸಂಸ್ಕೃತ ಭಾಷೆಯಲ್ಲಿರುವ ಗ್ರಂಥಗಳನ್ನು ನಮ್ಮ ಸ್ಥಳೀಯ ಭಾಷೆಗೆ ಅನುವಾದಿಸಿದ ಗ್ರಂಥದ ಕೆಲವೇ ಪಂಗ್ತಿಯನ್ನು ತ್ವರಿತ ಪರಿಹಾರಕ್ಕಾಗಿ   ಓದಿತಿಳಿದುಕೊಳ್ಳಲು ಪ್ರಯತ್ನಿಸುತ್ತೇವೆ.ಇಲ್ಲವೇ ಪಂಡಿತರಲ್ಲಿ ಮೊರೆ ಹೋಗುತ್ತೇವೆ.ಸಂಸ್ಕೃತ ಅಧ್ಯಯನ ಮಾಡುವುದು ಸುಲಭವಲ್ಲ ಆದರೆ ಆಸಕ್ತಿಯಿದ್ದರೆ ಅಸಾಧ್ಯವೇನಲ್ಲ.  ಇಂದು ವಿಶ್ವ ಸಂಸ್ಕೃತ ದಿನ. ನನ್ನ ಕಾಲೇಜಿನ ದಿನಗಳು ನೆನಪಾಯಿತು. ಕಾಳಿದಾಸ ,ಬಾಣ ,ಭಾಸ ಹಾಗು ಮತ್ತಿತರು ಮಹಾಕವಿಗಳೆಲ್ಲರ ಒಂದು ತುಣುಕು ನಮ್ಮ ಪಠ್ಯದಲ್ಲಿ. ಎಷ್ಟು ವೈಭವಯುತ ಭಾಷೆ, ಅಷ್ಟೇ ಸೊಗಸಾದ ಬರಹಗಳು.  ಸಂಸ್ಕೃತದಲ್ಲಿರುವ ಎಲ್ಲಾ ಸಾಹಿತ್ಯ ದಾಖಲೆಗಳನ್ನುಹಾಗು  ಮಹಾ ಗ್ರಂಥಗಳನ್ನು  ಓದಿ ಅರಿತುಕೊಳ್ಳುಲು ಒಂದು ಜನುಮದಲ್ಲಿ  ಬಹುಷಃ  ಸಾಧ್ಯವಾಗುವುದಿಲ್ಲ. ಹಿಂದೂ ಧರ್ಮದ ತತ್ವಜ್ಞಾನ ,ಶಾಸ್ತ್ರಗಳು ,ಕಲೆಗಳು ,ವಿದ್ಯೆ ,ಅರ್ಥಶಾಸ್ತ್ರ ಹೀಗೆ ೧೩ನೆ ಶತಕದ ತನಕ ಎಲ್ಲಾ ವಿಷಯಗಳ ಬಗ್ಗೆ ದೀರ್ಘವಾದ ಉಲ್ಲೇಖವಿರುವ  ಸಾಹಿತ್ಯ ಸಂಸ್ಕೃತ ಭಾಷೆಯಲ್ಲಿದೆ.
ಸಂಸ್ಕೃತ ಎಷ್ಟು ಸಾವಿರ ವರ್ಷ ಪುರಾತನದ್ದು,ಯಾವ ಯಾವ ಭಾಷೆಯನ್ನು ಆಧಾರಿಸಿ ತನ್ನ ಸ್ವರೂಪವನ್ನು ಪಡೆದು, ಭ್ರಹ್ಮೀ,ನಾಗರಿ ಹೀಗೆ ತನ್ನ ಲಿಪಿ ಪೀಳಿಗೆಗಳು ಕಳೆದಂತೆ ಪರಿವರ್ತನೆಗೊಂಡು ಈಗಿನ  ವೈದಿಕ ಸ್ವರೂಪವನ್ನು ಹೊಂದಿತು ಎಂದೆನ್ನುವ ಎಲ್ಲಾ ಮಾ…

ಗುಟ್ಟಿನ ಗಂಟಿನೊಂದಿಗೆ ನಿನಗೇಕೆ ನಂಟು

ಗುಟ್ಟಿನ ಗಂಟಿನೊಂದಿಗೆ ನಿನಗೇಕೆ ನಂಟು  ಗಂಟಿನೊಂದಿಗೆ ನೀ ಬಿಡಿಸು ಸಂಬಂಧಗಳ ನಿಘಂಟು 
ಗಂಟಿನಲ್ಲಿ ಏನಿದೆಯೋ ಅದು ನಿನಗಷ್ಟೆ ಗೊತ್ತು  ಬೇರೆಯವರಿಗೆ ಅದು ತಿಳಿಯದಿರಲು ನಿನಗೇಕೆ ಗತ್ತು ದುಃಖದ ಗಂಟು ಭಾರ, ಇಳಿಸು ಅದನ್ನು ಆಗುವುದು ಮನಸ್ಸು ಹಗುರ  ಸುಖದ ಗಂಟು ಉತ್ಸಾಹ ಭರಿತ, ಗಂಟು ಬಿಚ್ಚದೆ ನೀ ಆಗಬೇಡ ನರಿತ 
ಹಂಚಿಕೊಂಡರೆ ನೀ ಈ ಬುತ್ತಿಯ ಗಂಟು, ಒಗ್ಗಟ್ಟಿನ ಒಗಟು ಬಿಡಿಸಿ ನೀ ಬೆಸೆವೆ ಜನುಮದ ನಂಟು 

ಜೂಲೈ ೫ನೇ ಅನುಭವ 
ನುರಿತ ಅರಿತ ನಿಪುಣರೊಂದಿಗೆ(ಸಹ ಸ್ಪರ್ಧಿಗಳು) ಕಳೆದ ಕ್ಷಣ  ದಿಗ್ಗಜರು(ಡಾ .ಸೋಮೇಶ್ವರ್) ಮಾಡಿಸಿದರು ದಿಗಂತದ ದರ್ಶನ  
ಮಾತ್ರವಲ್ಲ ಇದು ರಸಪ್ರಶ್ನೆಯ ಆಟ ಕನ್ನಡವೆಂಬ ಮಹಾಸಾಗರದ ವಿಹಂಗಮ ನೋಟ 
ಸುತ್ತಿನ ಸುಳಿಯೊಳಗೆ ಮುಳುಗಿ ಉತ್ತರಿಸದೆ ತಬ್ಬಿಬಾಗಿ  ಚಿತ್ರಕವನಗಳ ಸಾಲುಗಳ  ಉತ್ಸಾಹದಿಂದ  ಬೀಗಿ  ಸೋಲು ಗೆಲುವಿಗೂ ಮೀರಿದ ಅನುಭವ ವಿಶ್ವದಾದ್ಯಂತ ಬೀರಿತು  ಥಟ್ಟತೆ ಪ್ರಭಾವ

ಸೌದಾಮಿನಿ

ಇದ್ದರೆ ಕಮಲದಂತಿರಬೇಕು  ಕೆಸರಲ್ಲೂ ಕಂಗೊಳಿಸಬೇಕು ಇಬ್ಬನಿಯ ಕಾಂತಿ ಇದ್ದರು ಅದು ಜಾರಿದರೆ 
ದೇವರ ಪಾದ ಸೇರಬೇಕು  ಮುಟ್ಟಿದರೆ ಮುನಿಯಾಗದೆ 
ಸಿಟ್ಟಿಗೆ ಅಣಿಯಾಗದೆ  ಸದ್ದಿಲ್ಲದೇ ಗದ್ದಲದ ನಡುವೆ 
ದಟ್ಟ ಕಾರ್ಮೋಡದ ಮಧ್ಯೆ  ಮಿಂಚುವುದು ಸೌದಾಮಿನಿ 
ಗುಡುಗಿನಕಿಂತ ಮಿಂಚಿನ ವೇಗವೇ  ಹೆಚ್ಚು ಎಂದು ತಿಳಿದಿರಬೇಕುEnviron(Mental) day ವಿಶ್ವ ಪರಿಸರ ದಿನ

ಈ ದಿನದ ಪ್ರಯುಕ್ತ ಜಗತ್ತಿನ್ನೆಲ್ಲೆಡೆ ಪರಿಸರದ ಬಗ್ಗೆ ಬಹಳಷ್ಟು ಕಾರ್ಯಕ್ರಮಗಳನ್ನು ನಡೆಸುತ್ತಾರೆ.ಗಿಡ ನೆಡುವುದು, ಪರಿಸರವನ್ನು ಸಂರಕ್ಷಿಸುವುದರ ಬಗ್ಗೆ ಮಾಹಿತಿ, ಸಂಗೀತ ನೃತ್ಯದ ಮೂಲಕ ಪರಿಸರದ ಬಗ್ಗೆ ಅರಿವು ಮೂಡಿಸುವುದು ಹೀಗೆ ಹತ್ತು ಹಲವು ಬಗೆಯಲ್ಲಿ ಈಗ ವೈಯಕ್ತಿಕ ಹಾಗು ಸಂಘ ಸಂಸ್ಥೆಗಳು ಪರಿಸರವನ್ನು ಉಳಿಸಲು ಹಾಗು ಬೆಳಿಸಲು ನಿಸ್ಸ್ವಾರ್ಥವಾಗಿ ತೊಡಗಿದ್ದಾರೆ.
ಪರಿಸರ ಅಂದರೆ ಏನು? ಎಲ್ಲರು ತಿಳಿದಿರುವಂತೆ ನಮ್ಮ ಸುತ್ತಮುತ್ತಲಿನ ಪ್ರದೇಶ.ಗಿಡ ಮರಗಳು,ನದಿ ,ಭೂಮಿ ,ಆಕಾಶ ಮತ್ತು ಪಕ್ಷಿ ಪ್ರಾಣಿ  ಹೀಗೆ ನಮ್ಮನ್ನು ಆವೃತವಾದ ನೈಸರ್ಗಿಕ ಸಜೀವ ನಿರ್ಜೀವ ಅಂಶಗಳು. ಶಬ್ದಕೋಶದಲ್ಲಿರುವ ಹಲವಾರು ವ್ಯಾಖ್ಯಾನಗಳಲ್ಲಿ ಒಂದಾದ '' ಒಬ್ಬ ವ್ಯಕ್ತಿ, ಪ್ರಾಣಿ, ಅಥವಾ ಸಸ್ಯ ವಾಸಿಸುವ ಅಥವಾ ಕಾರ್ಯನಿರ್ವಹಿಸುವ ಸುತ್ತಮುತ್ತಲಿನ ಅಥವಾ ಪರಿಸ್ಥಿತಿಗಳು.''
ಪರಿಸ್ಥಿತಿಗಳು ಅಂದರೆ ಭೌತಿಕ ಹಾಗು ಅಸ್ಪೃಶ್ಯ ಸ್ಥಿತಿಗಳು ಹೊರಗಿನ ಅಥವಾ ಆಂತರಿಕ. ಹೊರಗಿನ ವಾತಾವರಣವನ್ನು ಶುದ್ಧವಾಗಿಡಲು ನಾವೆಲ್ಲರೂ ಸಾಕಷ್ಟು ಪಯತ್ನ ಪಡುತ್ತಿದ್ದೇವೆ. ದಿನನಿತ್ಯದ ಕೆಲಸಗಳಲ್ಲಿ ಸಾಕಷ್ಟು ಮುತುವರ್ಜಿ ವಹಿಸಿ ನಮ್ಮ ಮನೆಯನ್ನು ಹಾಗು ಸುತ್ತಮುತ್ತಲಿನ ಆವರಣವನ್ನು ತಕ್ಕಮಟ್ಟಿಗೆ ಸ್ವಚ್ಛ್ವಾಗಿ ಇಡಲು ಕಷ್ಟಪದಿತ್ತುದೇವೆ.
ಆದರೆ ಮನುಷ್ಯನ ಮನಃಸ್ಥಿತಿಯು ಈ ಪರಿಸರದ ವ್ಯಾಖ್ಯಾನದಲ್ಲಿ ಸೇರುತ್ತದೆಯೋ ಎಂಬ ಪ್ರಶ್ನೆ ನನ್ನದು? ನಮ್ಮ  ಭೌತಿಕ, ಸ್ಪೃಷ್ಜ್ಯ ವಸ್ತು…