ಪೋಸ್ಟ್‌ಗಳು

ಅಕ್ಟೋಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸ... ಪ... ಸ...

 ಸ... ಪ... ಸ...  ಮೈಸೂರು  ದಸರಾ  ಎಷ್ಟೊಂದು  ಸುಂದರ ....   ಎಂತಹ ಸುಂದರ ಹಾಡು ಅತ್ಯದ್ಭುತ ಮೈಸೂರಿನ ವರ್ಣನೆ. ದಸರಾ ಅಂದಕೂಡಲೇ ಮೈಸೂರಿನ ಅರಮನೆ,ಅಂಬಾರಿ ,ಚಾಮುಂಡಿ ಬೆಟ್ಟ ,ಆನೆಗಳು ,ನೃತ್ಯ ,ಸಂಗೀತ ,ಡೊಳ್ಳು ಕುಣಿತ ,ಸ್ತಬ್ದ ಚಿತ್ರಗಳ ಮೆರೆವಣಿಗೆ. ಇದನೆಲ್ಲಾ ನೋಡಲು ದೇಶ ವಿದೇಶಗಳಿಂದ ಜನರು ಬರುತ್ತಾರೆ.ಹುಟ್ಟಿದ್ದು ಮಾತ್ರ ಹುಬ್ಬಳ್ಳಿಯಲ್ಲಿ ಆದರೆ ಬಾಲ್ಯ ಹಾಗು ವಿದ್ಯಾಭ್ಯಾಸವೆಲ್ಲ ಮೈಸೂರಿನಲ್ಲಿ.  ನಮ್ಮ ಮನೆಗೂ ಊರಿಂದ ನೆಂಟರು ಇಷ್ಟರು ಈ ಮಹೋತ್ಸವನ್ನು ನೋಡಲು ಬರುತ್ತುದ್ದರು.  ಮೈಸೂರಿನವರಿಗೆ ದಸರಾ ಕೇವಲ ೧೦ ದಿನದ ಉತ್ಸವವಲ್ಲ. ತಿಂಗಳ ಮುಂಚಿತವಾಗಿಯೇ ಉತ್ಸವದ ತ್ಯಯಾರಿ. ಒಂದೆಡೆ ಅಂಬಾರಿಯ ಆನೆಗಳು ನಗರಕ್ಕೆ ಬಂದಿಳಿದರೆ ಮತ್ತೊಂದೆಡೆ ಸಾಲು ಸಾಲಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉತ್ಸವ. ಮನೋರಂಜನೆಯ ಕಾರ್ಯಕ್ರಮಗಳು ಅತಿರಂಜಿತವಾದಾಗ ನಮ್ಮ ಮನ್ನಸಿನ ಮೇಲೆ ಪ್ರಭಾವ ಬೀರದೆ ಇರುವುದೇ. ನಾವು ಚಿಕ್ಕವರಿದ್ದಾಗ ನಮ್ಮ ಅದೃಷ್ಟವೇನೆಂದರೆ ಅರಮನೆಯ ದರ್ಬಾರಿನ ಸಭಾಂಗಣದಲ್ಲಿ ಕುಳಿತು ಸಂಗೀತ ಕಾರ್ಯಕ್ರಮವನ್ನು ಆನಂದಿಸುವ ಅವಕಾಶ. ಇದರ ಸಂಪೂರ್ಣ ಶ್ರೇಯ ನನ್ನ ತಂದೆ ತಾಯಿಗೆ ಸೇರಬೇಕು. ನನ್ನ ತಾಯಿ ತಪ್ಪದೆ ಗಾಯನ ,ಸಂಗೀತ ವಾದ್ಯಗಳ ಕಾರ್ಯಕ್ರಮಕ್ಕೆ  ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದರು. ಅಕ್ಕಪಕ್ಕದ ಮನೆಯವರ ಜೊತೆಗೆ ಹೋದಾಗಂತೂ ನಾವೆಲ್ಲಾ ಮಕ್ಕಳ್ಳು ಗಾಯಕರ ,ವಿದ್ವಾಂಸರ ಪಾಂಡಿತ್ಯ ಆ ಕಾರ್ಯಕ್ರಮದ ಮಹತ್ವ ನಮಗೆ ಆಗ ತಿಳಿಯುತ್