Environ(Mental) day ವಿಶ್ವ ಪರಿಸರ ದಿನ


ಈ ದಿನದ ಪ್ರಯುಕ್ತ ಜಗತ್ತಿನ್ನೆಲ್ಲೆಡೆ ಪರಿಸರದ ಬಗ್ಗೆ ಬಹಳಷ್ಟು ಕಾರ್ಯಕ್ರಮಗಳನ್ನು ನಡೆಸುತ್ತಾರೆ.ಗಿಡ ನೆಡುವುದು, ಪರಿಸರವನ್ನು ಸಂರಕ್ಷಿಸುವುದರ ಬಗ್ಗೆ ಮಾಹಿತಿ, ಸಂಗೀತ ನೃತ್ಯದ ಮೂಲಕ ಪರಿಸರದ ಬಗ್ಗೆ ಅರಿವು ಮೂಡಿಸುವುದು ಹೀಗೆ ಹತ್ತು ಹಲವು ಬಗೆಯಲ್ಲಿ ಈಗ ವೈಯಕ್ತಿಕ ಹಾಗು ಸಂಘ ಸಂಸ್ಥೆಗಳು ಪರಿಸರವನ್ನು ಉಳಿಸಲು ಹಾಗು ಬೆಳಿಸಲು ನಿಸ್ಸ್ವಾರ್ಥವಾಗಿ ತೊಡಗಿದ್ದಾರೆ.

ಪರಿಸರ ಅಂದರೆ ಏನು? ಎಲ್ಲರು ತಿಳಿದಿರುವಂತೆ ನಮ್ಮ ಸುತ್ತಮುತ್ತಲಿನ ಪ್ರದೇಶ.ಗಿಡ ಮರಗಳು,ನದಿ ,ಭೂಮಿ ,ಆಕಾಶ ಮತ್ತು ಪಕ್ಷಿ ಪ್ರಾಣಿ  ಹೀಗೆ ನಮ್ಮನ್ನು ಆವೃತವಾದ ನೈಸರ್ಗಿಕ ಸಜೀವ ನಿರ್ಜೀವ ಅಂಶಗಳು.
ಶಬ್ದಕೋಶದಲ್ಲಿರುವ ಹಲವಾರು ವ್ಯಾಖ್ಯಾನಗಳಲ್ಲಿ ಒಂದಾದ ''
ಒಬ್ಬ ವ್ಯಕ್ತಿ, ಪ್ರಾಣಿ, ಅಥವಾ ಸಸ್ಯ ವಾಸಿಸುವ ಅಥವಾ ಕಾರ್ಯನಿರ್ವಹಿಸುವ ಸುತ್ತಮುತ್ತಲಿನ ಅಥವಾ ಪರಿಸ್ಥಿತಿಗಳು.''

ಪರಿಸ್ಥಿತಿಗಳು ಅಂದರೆ ಭೌತಿಕ ಹಾಗು ಅಸ್ಪೃಶ್ಯ ಸ್ಥಿತಿಗಳು ಹೊರಗಿನ ಅಥವಾ ಆಂತರಿಕ. ಹೊರಗಿನ ವಾತಾವರಣವನ್ನು ಶುದ್ಧವಾಗಿಡಲು ನಾವೆಲ್ಲರೂ ಸಾಕಷ್ಟು ಪಯತ್ನ ಪಡುತ್ತಿದ್ದೇವೆ. ದಿನನಿತ್ಯದ ಕೆಲಸಗಳಲ್ಲಿ ಸಾಕಷ್ಟು ಮುತುವರ್ಜಿ ವಹಿಸಿ ನಮ್ಮ ಮನೆಯನ್ನು ಹಾಗು ಸುತ್ತಮುತ್ತಲಿನ ಆವರಣವನ್ನು ತಕ್ಕಮಟ್ಟಿಗೆ ಸ್ವಚ್ಛ್ವಾಗಿ ಇಡಲು ಕಷ್ಟಪದಿತ್ತುದೇವೆ.

ಆದರೆ ಮನುಷ್ಯನ ಮನಃಸ್ಥಿತಿಯು ಈ ಪರಿಸರದ ವ್ಯಾಖ್ಯಾನದಲ್ಲಿ ಸೇರುತ್ತದೆಯೋ ಎಂಬ ಪ್ರಶ್ನೆ ನನ್ನದು? ನಮ್ಮ  ಭೌತಿಕ, ಸ್ಪೃಷ್ಜ್ಯ ವಸ್ತುಗಳನ್ನು ಕಾಪಾಡಲು ಪ್ರಯತ್ನಿಸುತ್ತಿರುವಾಗ ನಮ್ಮ ಆಲೋಚನೆ ಹಾಗು ಮಾನಸಿಕ ಸ್ಥಿತಿಯ ಬಗ್ಗೆ ನಾವು ಎಷ್ಟು ಯೋಚಿಸುತ್ತೇವೆ ? ನಾವು ಸಮತೋಲನ ಮಾನಸಿಕ ಸ್ಥಿತಿಯವರಾದರೆ ನಮ್ಮ ಮನೆಯ ಪರಿಸರ ಪರಿಶುದ್ಧವಾಗಿರಿತ್ತದೆ. ಕೇವಲ ದಿನನಿತ್ಯ ಕಸ ಗುಡಿಸಿ ,ಮನೆವರಿಸಿ ದೇವರಿಗೆ ದೀಪ ಹಚ್ಚುವುದರ ಮೂಲಕ ನಾವು ನಮ್ಮ ಮಕ್ಕಳಿಗೆ ಒಳ್ಳೆಯ ದಿನಚರಿಯನ್ನು ಕಲಿಸುತ್ತೆವೆ.ಒಳ್ಳೆಯ ಗುಣಗಳನ್ನು ಮಕ್ಕಳಲ್ಲಿ ಕಲಿಸಲು ಚಿಕ್ಕವರಿದ್ದಾಗಲೇ ಸಾಕಷ್ಟು ಪ್ರಯತ್ನ ಪಡುತ್ತೇವೆ. ನಮ್ಮ ಗುಣಗಳು ಏನೇ ಇದ್ದರು ನಮ್ಮ್ ಮಕ್ಕಳಲ್ಲಿ ಒಳ್ಳೆಯ ವರ್ತನೆಯನ್ನು ಆಶಿಶುತ್ತೇವೆ. ಹೀಗಿರುವಾಗ ಅವರ ಮಾನಸಿಕ ಶಕ್ತಿ ,ಸ್ಥಿತಿ ಹಾಗು ಅವರ ವ್ಯಕ್ತಿತ್ವದ ಸತ್ವದ ಬಗ್ಗೆ ನಾವು ಎಷ್ಟು ಕಾಳಜಿ ವಹಿಸುತ್ತೇವೆ?!.ಭಾರತೀಯ ಸಂಸೃತಿಯಲ್ಲಿ  ಮಕ್ಕಳು ಅಕ್ಕ ಪಕ್ಕದ ಮನೆಯ ಮಕ್ಕಳೆಲ್ಲ ಒಟ್ಟಿಗೆ ಆಡುವಾಗ ಜಗಳವಾಡಿದರೆ ನಾವು ಅಷ್ಟು ತಲೆ ಕೆಡಿಸಿಕೊಳ್ಳದೆ '' ಇರ್ಲಿ ಬಿಡು ನೀನೆ ಏನೋ ತಪ್ಪು ಮಾಡಿರ್ಬೇಕು'' ಅಥವಾ ನಮ್ಮ ಮಕ್ಕಳ ತಪ್ಪು ಇಲ್ಲದಿದ್ದರೆ ಹೋಗ್ಲಿ ಬಿಡು ಅವರ ಜೊತೆ ಆಡಬೇಡ '' ಅಂತ ಸಮಾಧಾನ ಮಾಡಿ ಸುಮ್ಮನಾಗುತ್ತೇವೆ .
ಹೊರಗಿನವರ  ವ್ಯವಹಾರದಿಂದ ನಮಗೆ ಹಾನಿಉಂಟಾಗಿದ್ದರೆ ಅವರ ಆ ರೀತಿಯ ವ್ಯವಹಾರಕ್ಕೆ ಒಂದು ಪಕ್ಷ ನಾವು ಕಾರಣರಾಗಿದ್ದಾರೆ ,ನಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳಬೇಕು. ಆದರೆ ನಮ್ಮಿಂದ ಯಾವುದೇ ತಪ್ಪಾಗದೇ ಅನ್ಯರ ನಡವಳಿಕೆ ನಮಗೆ ಸರಿಬರದಲ್ಲಿ ,ಆ ಪರವ್ಯಕ್ತಿಯು ಸುಧಾರಿಸಬೇಕೇ ಹೊರತು ನಾವಲ್ಲ. ಇದು ಹೇಳಿದಷ್ಟು ಸುಲಭವಲ್ಲ. ಅವರನ್ನು ಸುಧಾರಿಸುವ ಕೆಲಸ ಬೇಡ,ಅದು ನಮ್ಮ ನಿಯಂತ್ರಣದಲ್ಲೂ ಇಲ್ಲ. ನಮ್ಮನ್ನು ನಾವು ಬಲಶಾಲಿಯಾಗಿ ಮಾಡಿಕೊಂಡರೆ ಸಾಕು.ನಾವು ದಿನ ರಾತ್ರಿಯಲ್ಲ ಕಳೆಯುತ್ತೇವೆ ಕೆಲವರ ನಡವಳಿಕೆಯಿಂದ ಬೇಸತ್ತು. ಆ ವ್ಯಕ್ತಿಯೊಡನೆ ನೈಜವಾಗಿ ವ್ಯವಹರಿಸಲು ಕಷ್ಟವಾಗುತ್ತದೆ. ಆದ್ರೆ ನಮ್ಮ ಕೆಲಸಗಳಿಗೆ ಅಥವಾ ನಡವಳಿಕೆಗಳಿಗೆ  ಮಾತ್ರ ನಾವು ಕಾರಣರು ಅಂತ ನಾವು ತಿಳಿಯುವುದು ತುಂಬಾ ಅವಶ್ಯಕ. ಇದರಿಂದ ನೆಮ್ಮದಿ ಹಾಗು ಮನಃ ಶಾಂತಿ.
ಮಕ್ಕಳು ಬೆಳೆದಂಗೆ ವಿಶೇಷತಃ ಹದಿಹರೆಯ ವಯಸ್ಸಿನಲ್ಲಿ ಅವರ ಮಾನಸಿಕ ಸ್ಥಿತಿ  ಬಗ್ಗೆ ಎಷ್ಟು  ಕಾಳಜಿ ವಹಿಸಬೇಕು. ಈ ವಯಸ್ಸಿನಲ್ಲೇ ಅವರಿಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟು ಅವರ ಬೇಕು ಬೇಡಗಳು ,ಅನಿಸಿಕೆಗಳು ಜೀವನದ ಮಹತ್ವ ಅವರೊಡನೆ ಕೂತು ಚರ್ಚಿಸಬೇಕು.ಆ ವಯಸ್ಸಿನಲ್ಲಿ ತಂದೆ ತಾಯಿಯರಿಗೆ ಕೆಲವ ಮಕ್ಕಳು ಎಲ್ಲಿ ಅಡ್ಡ ದಾರಿ ಹಿಡೀತಾರೋ ,ಎಂಥ ಸ್ನೇಹಿತರನ್ನು ಮಾಡಿಕೊಳ್ಳುತ್ತಾರೋ ಎಂಬ ದಿಗಿಲೇ ಹೆಚ್ಚು. ಆ ಸಮಯದಲ್ಲಿ ವಿಧ್ಯಾಭ್ಯಾಸವೇ ಪ್ರಧಾನ ಆದರೆ ನಾವು ಮಕ್ಕಳ ಇಚ್ಛೆಗಳಿಗೆ ಎಷ್ಟು ಆಧ್ಯತೆ ಕೊಟ್ಟು ಅವುಗಳ ಮಹತ್ವನ್ನು ಅವರಿಗೆ ಅರ್ಥವಾಗುವಂತೆ ತಿಳಿಸಿ ಯಾವ ವಯಸ್ಸಿನಲ್ಲಿ ಯಾವುದು ಮುಖ್ಯ ಎಂಬುದನ್ನು ಅವರಿಗೆ ಸಮಯ ಬಂದಾಗಲೆಲ್ಲ ತಿಳಿಸುತ್ತ ಅವರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲ್ಲು ಪ್ರಯತ್ನಿಸುತ್ತಿರಬೇಕು.ಮಕ್ಕಳಿಗೆ ಕೆಲವೊಮ್ಮೆ ನಮ್ಮ ಪ್ರತಿಕ್ರಿಯೆ ಅವರ ಪರವಾಗಿ ಇಲ್ಲದಿದ್ದಾಗ  ಅಸಮಾಧಾನ  ಹುಟ್ಟಿ ನಮ್ಮೊಂಗಿದೆ ಏನನ್ನು ಹಂಚಿಕೊಳ್ಳದಿರಬಹುದು. ಅದನ್ನು ಅವರ ವ್ಯವಹಾರದಲ್ಲಿ ನಾವು ಸೂಕ್ಷ್ಮವಾಗಿ ಗಮನಿಸಿ ಅವರಿಗೆ ನಾವು ಸದಾಕಾಲ ಅವರೊಂದಿಗೆ ಇರುತ್ತೇವೆ ಎಂದು ಮನವರಿಕೆ ಮಾಡಿಕೊಡಬೇಕು. 

ಮಾನಸಿಕವಾಗಿ ಪ್ರಬಲ ಮಕ್ಕಳನ್ನು ಬೆಳೆಸುವ ಬಗ್ಗೆ ಸಾಕಷ್ಟು ಮಾನಸಿಕ ತಜ್ಞರು ಹಾಗು ಅನುಭವಿಗಳು ಪುಸ್ತಕಗಳನ್ನು ಹಾಗು ಲೇಖನಗಳನ್ನು ಬರೆದಿದ್ದರೆ. ಹೀಗಾಗಿ ನಾನು ಮನೋಬಲ ಹೆಚ್ಚಿಸುವ ಹಾಗು ಮಾನಸಿಕ ಅರೋಗ್ಯ ಕಾಪಾಡುವ ಶಿಸ್ತು ತಂತ್ರಗಳು ಮತ್ತು ಬೋಧನಾ ಸಾಧನಗಳ ಬಗ್ಗೆ ಚರ್ಚೆ ಮಾಡದೇ ಈ ವಿಷಯವು ಮಕ್ಕಳ ದೈಹಿಕ  ಹಾಗು ಜೀವನೋಪಾಯದ  ಬೆಳವಣಿಗೆ ಮಾತ್ರವಲ್ಲದೆ ಮಾನಸಿಕ ಸ್ಥಿತಿಯಬಗ್ಗೆಯು ಹೆಚ್ಚು ಗಮನ ನೀಡಿ ಅವರ ಪರಿಸರವನ್ನು ಸುಂದರವಾಗಿ ರೂಪಿಸಿದರೆ ಅವರು ದೊಡ್ಡವರಾದ ಮೇಲೆ ಎಂತಹ ವಾತಾವರದಲ್ಲೂ ಬದುಕಬಲ್ಲರು.
ಎಷ್ಟೊಂದು ಲೇಖನಗಳು ಹಾಗು ಪುಸ್ತಕಗಳು ಈ ವಿಷಯದ ಬಗ್ಗೆ ಮಾಹಿತಿ ನೀಡುತ್ತವೆ. ನಮ್ಮ ಕರ್ತವ್ಯ ಇಷ್ಟೇ .. ಮಕ್ಕಳೊಂಗಿದೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ  ಅವರಲ್ಲೇ ಅಡಗಿರುವ ಆಂತರಿಕ ಶಕ್ತಿಯ ಕನ್ನಡಿಯಾಗಿ ಸದಾ ಕಾಲ ಅವರೊಂದಿಗಿರುವುದು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸನಾತನ ''ಸುಧರ್ಮ''

E-motional !!!

ಮಲ್ಲಿಗೆಯ ಜಿಜ್ಞಾಸೆ