ಪೋಸ್ಟ್‌ಗಳು

ಮೇ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

''ಕೌಸ್ತಭಮ್ ಕರ್ನಾಟಕಂ''

ಇಮೇಜ್
  ನಮ್ಮ ಬೇರುಗಳಿಗೆ ಸಂಪರ್ಕ ಕಲ್ಪಿಸುವ ಜಾನಪದ ಕಲಾ ಉತ್ಸವ. ಕನ್ನಡದ ಕಂಪು ಸಮುದ್ರದಾಚೆ ಪ್ರಸರಿಸಿ ಆಂಗ್ಲ ನಾಡಿನಲ್ಲಿಯಷ್ಟೇ ಅಲ್ಲದೆ ಭಾರತದಲ್ಲೂ ಕಲಾ ರಸಿಕರನ್ನು ರಂಜಿಸಿತು. ಕರ್ನಾಟಕದ ಸಾಂಪ್ರದಾಯಿಕ ಹಾಗು ಐತಿಹಾಸಿಕ ಜಾನಪದ ಸಂಗೀತ ಹಾಗು ನೃತ್ಯ ಕಲೆಗಳನ್ನು ಮೇ 8 ರಂದು ವರ್ಚುವಲ್ ಪ್ಲಾಟ್‌ಫಾರ್ಮ್‌ನಲ್ಲಿ   ಪ್ರದರ್ಶಿಸಲಾಯಿತು. ಭಾರತೀಯ ವಿದ್ಯಾ ಭವನ-ಲಂಡನ್ ಸಹಯೋಗದೊಂದಿಗೆ ಸಂಸ್ಕೃತಿ ಸೆಂಟರ್ ಓಫ್ ಕಲ್ಚರಲ್ ಎಕ್ಸೆಲೆನ್ಸ್ಯಿಂದ ಕಲ್ಪಿಸಲ್ಪಟ್ಟ ಮತ್ತು ಆಯೋಜಿಸಲ್ಪಟ್ಟ ''ಕೌಸ್ತಭಮ್ ಕರ್ನಾಟಕಂ'' ಎಂಬ ಕಾರ್ಯಕ್ರಮವು ಅಪಾರ ಮೆಚ್ಚುಗೆಯನ್ನು ಗಳಿಸಿ ಮತ್ತು ಗಡಿಯಾಚೆ ನೆಲಸಿದ ಪ್ರೇಕ್ಷಕರನ್ನು ಮನೋರಂಜಿಸಿತು. ಲಂಡನ್‌ನ ಭವನದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಮತ್ತೂರು ನಂದಕುಮಾರ ಈ ಸಂದರ್ಭದಲ್ಲಿ ಆರಂಭಿಕ ಮಾತುಗಳನ್ನು ನೀಡಿದರು. ಭಾಗವತದ ಆಯ್ದ ಭಾಗದಿಂದ ಆರಂಭಗೊಂಡು ಡಾ.ನಂದಾಅವರು ವಿಶೇಷವಾಗಿ ಪುರಂದರ ದಾಸ ಕುರಿತು ಮಾತನಾಡುತ್ತಾ ಅವರ   ಕೃತಿಗಳ ಮಹತ್ವ ರಾಮಾಯಣ ಮಹಾಭಾರತದಂತಹ ಸಂಸ್ಕೃತ ಭಾಷೆಯ   ಕಥೆಯನ್ನು ಸರಳ ಶಬ್ದಗಳಲ್ಲಿ ಸಾಮಾನ್ಯ ಜನರಿಗೆ ತಿಳಿಸಿ ಸಮಾಜದ ಉದ್ಧಾರದ ಬಗ್ಗೆ ಅವರಿಗಿದ್ದ ಶ್ರದ್ದೆ ಭಕ್ತಿಯನ್ನು ಹೊಗಳುತ್ತಾ ‘ಹರಿ ಕುನಿದ ನಮ್ಮ ’ ಹಾಡನ್ನು ಸಂಕ್ಷಿಪ್ತವಾಗಿ   ಪ್ರಸ್ತುತಪಡಿಸಿದ್ದು ಈ ಸಂದರ್ಭಕ್ಕೆ ಮೆರುಗು ನೀಡಿತು. ನಂತರ   ಯೋಗೀಂದ್ರ ಮರವಂತೆ ಅವರು 500 ವರ್ಷಗಳ ಹಳೆಯ ಸಾಂಪ್ರದಾಯಿಕ