ಪೋಸ್ಟ್‌ಗಳು

ಫೆಬ್ರವರಿ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕ್ಷಣಗಳ ಅನಾವರಣ

ಭಾವಾನುವಾದ - ರುಮಿ( 🌹Unfolding  Roses🌹 ) ದೇವರು  ಸೃಷ್ಟಿಸಿದ ಸುಂದರ ಸೂಕ್ಷ್ಮ ಈ ಮುಗ್ಧ ಗುಲಾಬಿಯ ಮೊಗ್ಗು  ಈ ಮೊಗ್ಗಿನ ದಳವನ್ನು ಈ ನನ್ನ ನಯವಿಲ್ಲದ ಕೈಗಳಿಂದ ಹೇಗೆ ಬಿಡಿಸಲಿ  ನನ್ನಂತಹ ಅನರ್ಹನಿಗೆ ತಿಳಿಯದ ಈ ರಹಸ್ಯ  ದೇವ ಎಷ್ಟು ಮೃದುವಾಗಿ ನಾಜೂಕಾಗಿ ಅರಳಿಸಿದ  ಈ ಇನಿದಾದ ಹೂ ನನ್ನ ಕರದಲ್ಲಿ ಬಾಡಿಹೋಗುತ್ತದೆ  ಆ ಭಗವಂತನು  ಕಲ್ಪಿಸಿದ  ಗುಲಾಬಿಯ ಮೊಗ್ಗನ್ನು  ನನ್ನಿಂದ ಅರಳಿಸಲಾಗಲಿಲ್ಲ  ಈ ನನ್ನ ಜೀವನವನ್ನು ವಿಕಸಿತ ಗೊಳಿಸಲು  ನನ್ನಲಿ ಯಾವ ವಿವೇಕವು ಇದೆ  ಅವನ ಮೇಲೆ ಭರವಸೆ ಇರಿಸಿ  ಅವನನ್ನೇ ಅರಿಸಿ  ದಿನದ ಪ್ರತಿ ಕ್ಷಣವೂ ನಾನು ಅವನ ಮೊರೆ ಹೋಗುವೆ  ಅವನ ದರ್ಶನದ  ಹಾದಿಯಲಿ ಈ ಯಾತ್ರಿಕನು  ಅವನ ಮಾರ್ಗದರ್ಶನದಿಂದ ಪ್ರತಿ ಹೆಜ್ಜೆ ಇಡುವೆ ಆ ದಿವ್ಯ ತೇಜಸ್ವಿಯೇ  ಬಲ್ಲ  ನನ್ನ ಮುಂದಿರುವ ಹಾದಿ  ಸಾಗುತ್ತಿರುವೆ  ನಾನು ಅವನನ್ನೇ ನಂಬಿ   ಆ ಮುಗ್ಧ ಗುಲಾಬಿಯ ಪ್ರತಿಯೊಂದು  ಪಕಳೆಯನ್ನು ಅರಳಿಸುವಂತೆ  ನನ್ನ ಜೀವನದ ಪ್ರತಿಯೊಂದು ಕ್ಷಣವನ್ನು ಪದರುಪದರಾಗಿ ಮುಂದಿಡುತ್ತಾನೆ  Sharing a poem by 13th Century Sufi poet - Jalāl ad-Dīn Muhammad Rūmī   UNFOLDING  THE ROSE 🌷 It is only a tiny rosebud, A flower of God's design; But I cannot unfold the petals With these clumsy hands of mine. The secret of unfolding flowers Is not known to such as I. GOD ope

ರಾಜಸ್ಥಾನಿ ಚಿತ್ರಕಲೆ "ಪಿಚ್ಚವಾಯಿ"

ಇಮೇಜ್
ನಮ್ಮ ವಿಶಾಲ ದೇಶದ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಚೈತನ್ಯವನ್ನು ಕಲೆ ಮತ್ತು ವಿವಿಧ ರೀತಿಯ ಕರಕುಶಲ ವಸ್ತುಗಳು ಮೂಲಕವೂ ಚಿತ್ರಿಸಲಾಗುತ್ತದೆ.ಪುರಾಣದ ಸನ್ನಿವೇಶಗಳನ್ನು ಹಾಗು ನಂಬಿಕೆ, ಭಕ್ತಿ ,ಶ್ರದ್ದೆ ,ಜೀವನ ಶೈಲಿ ಎಲ್ಲವು  ಚಿತ್ರಗಳ ,ಬಣ್ಣಗಳ  ಹಾಗು  ಕಥೆಗಳ ಮೂಲಕ ಜನರಿಂದ ಜನಕ್ಕೆ ,ಪೀಳಿಗೆಯಿಂದ ಪೀಳಿಗೆಗೆ ಮುಂದುವರೆಸಲಾಗುತ್ತದೆ. ಜಾನಪದ ಹಾಡುಗಳು ಬಾಯಿಂದ ಬಾಯಿಗೆ ತಲಪುವಂತೆ, ಜಾನಪದ ಚಿತ್ರಕಲೆ ಹಾಗು ಬುಡಕಟ್ಟು ಜನಾಂಗದ ಕಲೆಗಳು ಕೈಯಿಂದ ಕೈಯಿಗೆ ಸಂಚರಿಸಿ ವಿವಿದೆಡೆ ಹರಡುತ್ತದೆ. ಕೆಲ ಬಾರಿ ಸಾಂಪ್ರದಾಯಿಕ ಚಿತ್ರಕಲೆಗಳ ಬಣ್ಣ ಹಾಗು ಮತ್ತಿತರ ಸಾಮಗ್ರಿಗಳ ಎಲ್ಲೆಡೆ ಸಿಗದ ಕಾರಣ, ಸಂಶ್ಲೇಷಿತ ವಸ್ತುಗಳ ಉಪಯೊಗವಾಗಿತ್ತಿವೆ.  ನಮ್ಮ ದೈತ್ಯ ರಾಷ್ಟ್ರದ  ಉದ್ದಗಲಕ್ಕೂ, ಪ್ರತಿ ಪ್ರದೇಶದಲ್ಲೂ ಅದರದೇ ಆದ ಜಾನಪದ ಮತ್ತು ಬುಡಕಟ್ಟು ಸಮುದಾಯದ ಕಲೆ ವೈಶಿಷ್ಟ್ಯತೆ ಇರುವುದು ಒಂದು ಅದ್ಭುತವೇ . ಭಾಷೆಯೇ ಶ್ರೀಮಂತಿಕೆ ಇದ್ದರು ಒಮ್ಮೊಮ್ಮೆ ಅದು ಜನರ ಜೀವನ  ಶೈಲಿಯನ್ನು ಹೊರದೇಶಕ್ಕೆ ತಲುಪಿಸುವುದರಲ್ಲಿ ಸಫಲವಾದರೂ ಜನರ ಮೆಚ್ಚುಗೆಗೆ ಪಾತ್ರವಾಗುವುದರಲ್ಲಿ  ಸಾಫಲ್ಯತೆ ಪಡೆಯದಿರಬಹುದು .ಏಕೆಂದರೆ ಅದರ  ಅನುವಾದವಾಗಬೇಕು. ಆದರೆ ಚಿತ್ರಕಲೆ, ಸಂಗೀತ ,ನೃತ್ಯ ಇವುಗಳಿಗೆ ಭಾಷೆಯ ತಡೆಗೋಡೆ ಇಲ್ಲ. ಯಾರು ಬೇಕಾದರೂ ನೋಡಿ ಆನಂದಿಸಿ ಪ್ರೋತ್ಸಾಹಿಸಬಹುದು.  ಕೆಲವು ದಶಕಗಳ ಹಿಂದೆ ಕೇವಲ ಸಿನೆಮಾ ಟಿವಿ ಹಾಗು ಪುಸ್ತಕಗಳ ಮೂಲಕವಷ್ಟೇ ಬೇರೆ ಜನಾ0ಗಳ ಬೆಗ

ಸಮಯ ವ್ಯರ್ಥವೇ?

ಕ್ಷಣ ಕ್ಷಣವೂ ಬಯಕೆಗಳ ಕನಸು ಕಾಣುತ್ತಾ  ಮರು ಕ್ಷಣವೇ  ನನಸು ಭಾಸವಾಗುತ್ತಾ  ಬಯಸಿದ್ದು ಪಡೆಯುವುದರಲ್ಲಿ ಇದ್ದದ್ದು ಕಳೆದುಕೊಳ್ಳುವುದರಲ್ಲಿ ಸಮಯ ವ್ಯರ್ಥವೇ?  ಆಸೆಗಳ ಜಲಪಾತದಿಂದ ಹತಾಶೆಗಳ ಪ್ರಪಾತದಲ್ಲಿ  ಮುಳುಗಿದಾಗ ಅಗೋಚರ ಮನಸ್ಸು ಏನನ್ನು ಹುಡುಕುತ್ತಿದೆ  ನೆಮ್ಮದಿಯೇ ಸಹಚರ ಅಲ್ಲವೇ ? ವಾಸ್ತವಿಕತೆಯ ಕನಸುಕಾಣುವುದರಲ್ಲಿ  ಸಮಯ ವ್ಯರ್ಥವೇ ? ಗಳಿಸಿದ್ದನ್ನು ಚಿತ್ರಿಸಿ ಸೋತದ್ದನ್ನು ಅಲಕ್ಷಿಸಿ  ಬಂದಿದ್ದನ್ನು  ಆನಂದಿಸಿ ಹೋಗಿದ್ದನ್ನು ಮರೆಸಿ  ಇರುವುದನ್ನು ಅನುಭವಿಸಿ ಸಮಯ ಸಾಧಿಸುವಲ್ಲಿ  ಸಮಯ ವ್ಯರ್ಥವೇ ? ಮುಂದೆ ಬರುವ ಹಾದಿ ನೋಡುತ್ತಾ ಕಳೆದು ಹೋದದನ್ನ ಚಿಂತಿಸುತ್ತಾ    ವರ್ತಮಾನದ ಪ್ರಸ್ತುತಿಯನ್ನು ಕಡೆಗಣಿಸಿ ಜೀವ ಹೋಗುವ ಕಾಲ ಬಂದಂತೆ  ಎಲ್ಲವು ನಿಶಬ್ದವಾದಾಗ ಉಳಿವುದು ಕೇವಲ ಉತ್ಕಂಠತೆ ಈಗೂ ಸಮಯ ವ್ಯರ್ಥವೇ ? ಬಿಟ್ಟು ಹೋಗಿದ್ದು ಹೋಗುವುದು ಇದ್ದದ್ದು  ಉಳಿಯುವುದು  ತಣಿದ ಜೀವ ಕಳೆವುದು ನೆನಪುಗಳು ಮಾತ್ರ  ಬದುಕಿಸುವುದು  ಸಾಧಿಸ ಹೊರಟಿದ್ದು ಕೇವಲ  ಪ್ರಾಪಂಚಿಕ  ಆದರೆ ಸ್ನೇಹ ಸಹನೆಯ ಸಂಪಾದನೆಯಲ್ಲಿ ಸಮಯ ವ್ಯರ್ಥವೇ ?

ಸಿರಿಗಂಧವೋ ಗಂಧರ್ವಲೋಕವೋ

ಇಮೇಜ್
 ಹೇಗೆ ವರ್ಣಿಸಲಿ ನಾನು ಕನ್ನಡತನವನ್ನ ...  ನಾಡೊ ನುಡಿಯೋ ತಿಳಿಯದು ಸಾವಿರಾರು ವರ್ಷಗಳ ಇತಿಹಾಸದ  ಬಗ್ಗೆಯೋ  ಆಧುನಿಕತೆಯ ಕೇಂದ್ರವೋ, ಸಂಪ್ರದಾಯದ ಬಿಂದುವೋ ಯಾವುದು ತಿಳಿಯದು ?! ನಾಡಿನ ಉದ್ದಗಲಕ್ಕೂ ವಿವಿಧ ಕಲೆ ,ಸಂಸ್ಕೃತಿ ಹಾಗು  ಸಂಗೀತದ ಅಲೆ  ಹೇಗೆ ವರ್ಣಿಸಲಿ ನಾನು ಕನ್ನಡತನವನ್ನ ...  ಪ್ರಕೃತಿಯ ಸೌಂದರ್ಯ ಬಣ್ಣಿಸಲೋ ವೈವಿಧ್ಯತೆಯಲ್ಲಿರುವ  ಸೌಹಾರ್ದತೆಯನ್ನೋ    ಕೊಡಗಿನ ಬೆಡಗು ಯಕ್ಷಗಾನದ ಮೆರಗು  ಜಲಪಾತಗಳ ಸೊಬಗು  ಹೇಗೆ ವಿವರಿಸಲಿ ? ನನಗೆ ತಿಳಿಯದು?!    ನಯನ ಮನೋಹರ ಪಶ್ಚಿಮ ಘಟ್ಟಕ್ಕೆ ಅಪ್ಪುವ ಸಮುದ್ರದ ಅಲೆಗಳೋ   ಗುಡಿ ಗೋಪುರಗಳಿಂದ ಶೋಭಿಸುವ ಹಳೇಬೀಡು ಬೇಲುರೋ  ವಾಸ್ತುಶಿಲ್ಪಅದ್ಭುತಗಳಾದ ಗುಮ್ಮಟ ಕೋಟೆ ಹಂಪಿಯ ಇತಿಹಾಸವೋ  ಅರಸರ ಮೈಸೂರಿನ ವೈಭವವನ್ನೋ, ಏನನ್ನು ವರ್ಣಿಸಲಿ ?    ಹೇಗೆ ಕೊಂಡಾಡಲಿ  ನಾನು ಕನ್ನಡತನವನ್ನ ...  ಕೆಚ್ಚದೆಯ ರಾಣಿ ಚೆನ್ನಮ್ಮ, ದುರ್ಗದ ಓಬ್ಬವ್ವರ ಕುರಿತೋ  ನುಡಿಯೊಂದಿಗೆ ನಾಡ ಮೆರೆಸಿದ ಪುರಂದರ ಕನಕ ದಾಸರೊ   ಸಾಹಸವೋ ಹಿರಿಮೆಯೋ ನನಗೆ ತಿಳಿಯದು ಹೇಗೆ ವರ್ಣಿಸಲಿ ನಾನು ಕನ್ನಡತನವನ್ನ ...  ಸಾಹಿತ್ಯದ ಲಾಲಿತ್ಯ ಹೊರಹೊಮ್ಮಿಸಿದ ಪಂಪ ರನ್ನ ಪೊನ್ನರನ್ನೂ ಶತಮಾನದ  ಶ್ರೇಷ್ಠ ಕವಿಗಳಾದ ಕುವೆಂಪು ಬೇಂದ್ರೆ ಮಾಸ್ತಿಯೋ     ಅನಂತ ಅವಕಾಶಗಳನ್ನು ಒದಗಿಸಿ ವಿಜ್ಞಾನಿಗಳು ಸೃಷ್ಟಿಸಿರುವ  ಆಸ್ತಿಯೋ ಹೇಗೆ ವರ್ಣಿಸಲಿ ನಾನು ಕನ್ನಡತನವನ್ನ ...  ಬಣ್ಣ ಬಣ್ಣದ ಆಟಿಕೆಯ ಮೇಳ ಎಲ್ಲೆಲ್ಲೂ ಮಲ್ಲಿಗೆಯ ಶ್ರೀಗಂ

ಪುರಂದರ ದಾಸರ ಆರಾಧನೆ

ನನ್ನ ಪ್ರಥಮ ಪ್ರಯತ್ನ. ಪುರಂದರ ದಾಸರ ಆರಾಧನೆ ಪ್ರಯುಕ್ತ ಬಹಳ ಗಡಿಬಿಡಿಯಲ್ಲಿ ರೆಕಾರ್ಡ್ ಮಾಡಿದೆ. ಗುರುಗಳಾದ ಶ್ರೀಮತಿ ಪ್ರಾರ್ಥನಾ ಅವರಿಗೆ ನನ್ನ ಪ್ರಣಾಮಗಳು. ಪಕ್ವವಲ್ಲದ ನನ್ನ ಧ್ವನಿ ಹಾಗು ಸಂಗೀತ ಜ್ಞಾನ ಪಕ್ಕವಾದ್ಯವಿಲ್ಲದ (ಶ್ರುತಿ ಪೆಟ್ಟಿಗೆ ಕೂಡ ಇಲ್ಲ) ಕಿರು ಪ್ರಯತ್ನ. ದೇಶ ರಾಗದಲ್ಲಿ ನನ್ನ ಪ್ರಥಮ ಪ್ರಸ್ತುತಿ .