ಪೋಸ್ಟ್‌ಗಳು

ಮಾರ್ಚ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಗುಟ್ಟಾಟ ಹುಡುಗಾಟ ಕೊನೆಗೆ ಬೊಬ್ಬಾಟ

ಇಮೇಜ್
 ನಾಕಂಡಂತೆ  ಬರಿ ಬಣ್ಣ ಎರಚೋದು ಮತ್ತು ಹೆಣ್ಣು ಮಕ್ಕಳು ಬೀದಿಗಿಳಿದು ಬಣ್ಣ ಆಡುವ ಸ್ವತಂತ್ರ ಇರುವುದಿಲ್ಲ ಅಷ್ಟೇ ಅಲ್ವಾ ..?  ಬರೀ ಹುಡುಗರು ಆಡೋದನ್ನು ನೋಡಿ ಹೊಟ್ಟೆ ಕಿಚ್ಚು ಪಡುತ್ತಾ , ಮತ್ತೆ ಮತ್ತೆ ಅಮ್ಮನ ಕೇಳ್ತಿದ್ದೆ ನಾನ್ಯಾಕೆ ಬಣ್ಣ ಅಡೋಹಾಗಿಲ್ಲ? ಮನೆಯೊಳಗೇ ಯಾಕೆ ಬಣ್ಣ ಎರಚೋಹಾಗಿಲ್ಲ ? ಬರಿ ಪ್ರಶ್ನೆಗಳು. ಆಗ ನನ್ನ ತಂದೆ ಅವರ ಚಿಕ್ಕವರು ಇರುವಾಗ  ಏನೆಲ್ಲಾ ಕಿಡಿಗೇಡಿ ಕೆಲಸ ಮಾಡುತ್ತಿದ್ದರು ಅಂತ ಹೇಳ್ತಾ ಇದ್ದಾಗ, ನಾನು ಅಷ್ಟು ಶಿಸ್ತೀನಿ ಮನುಷ್ಯ ,ನಾವು ಕೆಟ್ಟ ಕೆಲಸ ಮಾಡಿದ್ರೆ ಬಯ್ಯುವ ತಂದೆ ತಾವು ಮಾಡಿದನ್ನು ಎಷ್ಟು ಹೆಮ್ಮೆಯಿಂದ ಹೆಲ್ಹೋಳ್ಳುತ್ತಿದರೆ ಅಂತಾ ಆಶ್ಚರ್ಯ ಪಟ್ಟಿದ್ದೆ.  ಶಿವರಾತ್ರಿ ನಂತರ ೭-೮ ವರ್ಷದಿಂದ ಹಿಡಿದು  ದೊಡ್ಡಹುಡುಗರು (ಬೀದಿ ಕಾಮಣ್ಣ ಅಂತಾ ಅಂತಾರೆ) ಮನೆ ಮನೆ ಹೋಗಿ ''ಕಾಮಣ್ಣ ಮಕ್ಳು ಬಂದೀವಿ, ಏನಾರ ಕೊಡ್ರಿ'' ಅಂತಾ ಕಿರುಚುತ್ತಾ , ಹಳೆ ಬಟ್ಟೆ , ಕಟ್ಟಿಗೆ,  ರದ್ದಿ ಎಲ್ಲವನ್ನು ಕಲೆಹಾಕಲು ಶುರು ಮಾಡುತ್ತಾರೆ. ಆ ಗುಂಪಿನಲ್ಲಿರುವ ಪುಟಾಣಿಗಳ ಕೆಲಸ ಯಾವ ಮನೆಯ ಹಿತ್ತಲಿನಲ್ಲಿ ಏನಾದ್ರು ಸಿಗುತ್ತಾ ಅಂತಾ ನೋಡಿ ಅದನ್ನು ಕಳ್ಳತನ ಮಾಡಿ, ಒಂದು ರಹಸ್ಯವಾದ ಜಾಗ ಹುಡುಕಿ ಎಲ್ಲ ವಸ್ತುಗಳನ್ನು ಅಲ್ಲಿ ಮುಚ್ಚಿಡುವುದು. ಈ ಪಿತೂರಿಯ ಮಜಾ ಏನೆಂದರೆ ಬೇಡಿ ಪಡೆಯೋಕಿಂತ ತುಡುಗು ಮಾಡುವುದರಲ್ಲಿರುವುದು. ನನ್ನ ತಂದೆ ಸೋದರಸಂಧಿಗಳೆಲ್ಲ ಚಿಕ್ಕವರಿದ್ದಾಗ ಇಂತಹ ಘನಕಾರ್ಯ ಮಾಡಿದ್ದರಂತೆ.
 ಮುಗ್ಧತೆಯ ನಗುವನ್ನು  ಸ್ಥಬ್ಧ ಮಾಡುವ ತನಕ  ದಟ್ಟಗಾಲಿಡುವ  ಅವಳ ಕೈಹಿಡಿದು ಸಪ್ತಪದಿ ಇಡಿಸುವ ತನಕ  ಪುಟ್ಟಕಾಲಿನ ಗೆಜ್ಜೆಯ ಹೆಜ್ಜೆಯೊಂದಿಗೆ ಕಾಲುಂಗುರಿನ ತನಕ  ಶಾಲೆಯಲಿ ಗೆದ್ದ ಚಿನ್ನದ ಪದಕದಿಂದ ಮಾಂಗಲ್ಯದ ತನಕ  ಪುಸ್ತಕ ಲೇಖನಿ ಇಂದ ಸೌಟು ಕಸಬರಿಗೆ ತನಕ   ಲಂಗ ದಾವಣಿಯಿಂದ ಸೀರೆಯ ಉಡಿಸುವುದರ ತನಕ  ಬಾಲ್ಯದ ಪದ್ಯದಿಂದ ಮಮತೆಯ ಲಾಲಿಹಾಡಿನ ತನಕ  ಅಕ್ಕ ತಂಗಿಯಿಂದ ಪತ್ನಿ ತಾಯಿಯ ತನಕ  ಮಡಿವಂತಳಾಗುತ್ತಾಳೆ ಕೊನೆಯ ತನಕ 

ದಟ್ಟೆ ದಟ್ಟೆಯ ದಟ್ಟ ಕಾರ್ಮೋಡ

ದಟ್ಟಗಾಲಿಡುವ ಅವಳ ಕೈಹಿಡಿದು  ಹೆಜ್ಜೆಯನ್ನು ಇಡಿಸುವುದರಲ್ಲಿ ಆದ ಖುಷಿ  ಬೆಳೆಯುತ್ತಿದಂತೆ ಅವಳ ಪ್ರತಿ ಹೆಜ್ಜೆಯನ್ನು  ಹಿಂಬಾಲಿಸಿ ಆದ  ಕಸಿವಿಸಿ  ಆಡಲು ಬಲವಂತವಾಗಿ  ಜೋಡು ಮಾಡಿಸಿದ ಪುಟ್ಟ ಪುಟ್ಟಿಯರು  ದೊಡ್ಡವಳಾಗುತ್ತಾ ಸಂದೇಹದಿಂದ ಕಾಣುವ  ಅವಳ ಗೆಳೆಯರು  ಅವಳ ಕೈಹಿಡಿದು ಬರೆಸಿದ  ಮೊದಲನೆಯ ಅಕ್ಷರದ ಸಂತೋಷ  ಅವಳ ಉನ್ನತ ಅಧ್ಯಯನದ ತೀರ್ಮಾನದಿಂದಾದ  ಅತಿ ಕ್ಲೇಶ  ಹದಿ ವಯಸ್ಸಿನಲ್ಲಿ ಸ್ವತಂತ್ರವಾಗಿ ಶಾಲೆಗೆ ಹೋದಾಗ ಬೀಗಿದ ಮುಖ  ಹಾಸ್ಟೆಲಿನಲ್ಲಿ  ಇರುತ್ತೇನೆ ಎಂದಾಕ್ಷಣ ಎಲ್ಲರ  ಇಳಿ ಮುಖ  ಶಾಲೆಯಲ್ಲಿನ  ಉತ್ತಮ ಅಂಕಗಳು ಸಾಲಾಗಿ ಜೋಡಿಸಿದ ಪ್ರಶಸ್ತಿಗಳು  ಕಾಲೇಜಿನಲ್ಲಿ ಗೆದ್ದ ಸ್ಪರ್ಧೆಗಳು ಕೇವಲ ಹವ್ಯಾಸದ ವಸ್ತುಗಳು  ಸ್ವಂತವಾಗಿ ಸ್ವತಂತ್ರವಾಗಿ ದುಡಿಯಬೇಕೆಂದಾಗ ಎಲ್ಲರ ಪ್ರಶ್ನೆ  ಏಕೆ ಈ ಸ್ವಾತಂತ್ರ್ಯ ಸ್ವಚ್ಛಂದ ಬೀದಿ  ಜನರ ಕಣ್ಣಮೂಗಿನ ಸನ್ನೆ  ತಾಯಿಯ ಹಾಡಿಗೆ  ತೊದಲುತ್ತಾ ತಪ್ಪು ಹೆಜ್ಜೆಯಲ್ಲಿ  ಗೆಜ್ಜೆಯ ಸಪ್ಪಳದಿಂದ ನಲಿಯುತ್ತಾ ಆಗುವಳು ಇವಳು ಗಾಯಕಿ ನರ್ತಕಿ ಎಂಬ ಕನಸನ್ನು ಮನೆಯವರೆಲ್ಲರೂ ಕಾಣುತ್ತಾ ಸಮಾಜದ ಒತ್ತಡದ ರಾಗಕ್ಕೆ ಗಾಯಕಿಯಾಗಿ ಎಲ್ಲರ ತಾಳಕ್ಕೆ ನರ್ತಕಿಯಾಗಿ  ತನ್ನ ಉತ್ಸಾಹ ಆಸೆಗಳ ಸ್ವಂತತನವನ್ನು ಕಳೆದುಕೊಂಡವಳಾಗಿ  ******************************************************************** ಮಗುವಾಗಿದ್ದಾಗ  ಇಲ್ಲದ ತಾರತಮ್ಯ  ತಿಳಿಯದೆ ಹೋಯಿತೇ ಅವಳ ಗಮ್ಯ  ರಥವು ನೀನೆ ಕುದುರೆಯು ನೀನೆ  ಕಡಿವ

ಬುದ್ಧನಲ್ಲದಿದ್ದರು ಪ್ರಭುದ್ಧನಾಗಬಹುದು

ಇಮೇಜ್
ಜೀವನಲ್ಲಿ ಸುಖ ದುಃಖದ ಸಮಯ ಋತುಗಳಂತೆ  ಬಿಸಿಲಿನ ಬೇಗೆಯಲಿ ತಂಗಾಳಿ ಬಯಸುವಂತೆ   ಛಳಿಯ ತಂಪಿನಲ್ಲಿ ಬಿಸಿಲನ್ನು ಆಶಿಸುವಂತೆ   ಮನುಷ್ಯನ ಗುಣ ಇಲ್ಲದ್ದನ್ನು ಬೇಕುನ್ನಿವಂತೆ   ಸಿಕ್ಕಾಗ ಅನುಭವಿಸಲು ಸಾಧ್ಯವಾಗಂತೆ     ಚಳಿ ಮಳೆಯಲ್ಲಿ  ಬೆಚ್ಚನೆಯ  ಸೂರಿನ ಕೆಳಗೆ  ಬಿಸಿಲಲ್ಲಿ ಅಂಗಳದ ಗಿಡಮರಗಳ ತಂಗಾಳಿಗೆ  ಐಷಾರಾಮಿಗೆ ಒಗ್ಗಿದ ಈ ಬದುಕಿಗೆ  ಇನ್ನಿಷ್ಟು ಮತ್ತಿಷ್ಟು ಬೇಕೆಂಬ ಹರಕೆಗೆ  ಬೇಕೆನ್ನುವುದನ್ನೆಲ್ಲ ಸಂಗ್ರಹಿಸಿ ಶೇಖರಿಸಿದಂತೆ   ವಸ್ತುಗಳಿಗೆ ಭಾವನೆಯ ಹಗ್ಗ ಕಟ್ಟಿದಂತೆ  ಮತ್ತೊಬ್ಬರ ನೋವಿಗೆ ಸ್ಪಂದಿಸದಂತೆ ಬೇಕು ಬೇಡಗಳ ಬೇಧ ತಿಳಿಯದಂತೆ  ಸ್ಥಿತ ಪ್ರಜ್ಞನಾಗಿ ಮೈಮರೆತಂತೆ  ಪ್ರಕೃತಿಯ ನೈಜ ರೂಪ ಬದಲಾಗಿ  ಜೀವನದ ಸಮತೋಲನ ಏರುಪೇರಾಗಿ  ಸಮರ್ಥ ಅಶಕ್ತರ ನಡುವಿನ ಬೇಧ ತಿಳಿದಾಗ  ಸ್ಥಿತಿಯ ಪ್ರಜ್ಞೆ ಮರುಕಳಿಸಿದಾಗ  ಭೂತಗಳಿಂದ ಮುಕ್ತವಾಗಲು  ಬುದ್ಧನಲ್ಲದಿದ್ದರು ಪ್ರಭುದ್ಧನಾಗಬಹುದು