''ಕೌಸ್ತಭಮ್ ಕರ್ನಾಟಕಂ''
ನಮ್ಮ ಬೇರುಗಳಿಗೆ
ಸಂಪರ್ಕ ಕಲ್ಪಿಸುವ ಜಾನಪದ ಕಲಾ ಉತ್ಸವ.
ಕನ್ನಡದ ಕಂಪು ಸಮುದ್ರದಾಚೆ ಪ್ರಸರಿಸಿ ಆಂಗ್ಲ ನಾಡಿನಲ್ಲಿಯಷ್ಟೇ
ಅಲ್ಲದೆ ಭಾರತದಲ್ಲೂ ಕಲಾ ರಸಿಕರನ್ನು ರಂಜಿಸಿತು.
ಕರ್ನಾಟಕದ ಸಾಂಪ್ರದಾಯಿಕ ಹಾಗು ಐತಿಹಾಸಿಕ ಜಾನಪದ ಸಂಗೀತ ಹಾಗು
ನೃತ್ಯ ಕಲೆಗಳನ್ನು ಮೇ 8 ರಂದು ವರ್ಚುವಲ್ ಪ್ಲಾಟ್‌ಫಾರ್ಮ್‌ನಲ್ಲಿ ಪ್ರದರ್ಶಿಸಲಾಯಿತು. ಭಾರತೀಯ ವಿದ್ಯಾ ಭವನ-ಲಂಡನ್ ಸಹಯೋಗದೊಂದಿಗೆ
ಸಂಸ್ಕೃತಿ ಸೆಂಟರ್ ಓಫ್ ಕಲ್ಚರಲ್ ಎಕ್ಸೆಲೆನ್ಸ್ಯಿಂದ ಕಲ್ಪಿಸಲ್ಪಟ್ಟ ಮತ್ತು ಆಯೋಜಿಸಲ್ಪಟ್ಟ ''ಕೌಸ್ತಭಮ್
ಕರ್ನಾಟಕಂ'' ಎಂಬ ಕಾರ್ಯಕ್ರಮವು ಅಪಾರ ಮೆಚ್ಚುಗೆಯನ್ನು ಗಳಿಸಿ ಮತ್ತು ಗಡಿಯಾಚೆ ನೆಲಸಿದ ಪ್ರೇಕ್ಷಕರನ್ನು
ಮನೋರಂಜಿಸಿತು.
ಲಂಡನ್‌ನ ಭವನದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಮತ್ತೂರು ನಂದಕುಮಾರ
ಈ ಸಂದರ್ಭದಲ್ಲಿ ಆರಂಭಿಕ ಮಾತುಗಳನ್ನು ನೀಡಿದರು. ಭಾಗವತದ ಆಯ್ದ ಭಾಗದಿಂದ ಆರಂಭಗೊಂಡು ಡಾ.ನಂದಾಅವರು
ವಿಶೇಷವಾಗಿ ಪುರಂದರ ದಾಸ ಕುರಿತು ಮಾತನಾಡುತ್ತಾ ಅವರ
ಕೃತಿಗಳ ಮಹತ್ವ ರಾಮಾಯಣ ಮಹಾಭಾರತದಂತಹ ಸಂಸ್ಕೃತ ಭಾಷೆಯ ಕಥೆಯನ್ನು ಸರಳ ಶಬ್ದಗಳಲ್ಲಿ ಸಾಮಾನ್ಯ ಜನರಿಗೆ ತಿಳಿಸಿ
ಸಮಾಜದ ಉದ್ಧಾರದ ಬಗ್ಗೆ ಅವರಿಗಿದ್ದ ಶ್ರದ್ದೆ ಭಕ್ತಿಯನ್ನು ಹೊಗಳುತ್ತಾ ‘ಹರಿ ಕುನಿದ ನಮ್ಮ’ ಹಾಡನ್ನು ಸಂಕ್ಷಿಪ್ತವಾಗಿ ಪ್ರಸ್ತುತಪಡಿಸಿದ್ದು
ಈ ಸಂದರ್ಭಕ್ಕೆ ಮೆರುಗು ನೀಡಿತು.
ನಂತರ ಯೋಗೀಂದ್ರ
ಮರವಂತೆ ಅವರು 500 ವರ್ಷಗಳ ಹಳೆಯ ಸಾಂಪ್ರದಾಯಿಕ ಭಾರತೀಯ ರಂಗಭೂಮಿ ಕಲಾ ಪ್ರಕಾರವಾದ ‘’ಯಕ್ಷಗಾನ’’
ದೀರ್ಘವಾಗಿ ತಾಂತ್ರಿಕ ವಿವರಣೆಯೊಂದಿಗೆ ಪ್ರಸ್ತುತಪಡಿಸಿದರು.
ಶಿಮೊಗ್ಗದಿಂದ zoom ಮೀಟಿಂಗ್ ಮೂಲಕ ಸೇರಿಕೊಂಡ ಅಂಜನೇಯ ಕಲಾ ಡೊಲ್ಲಿನ ಸಂಘದ ಮುಖ್ಯಸ್ಥ ಶ್ರೀ ರಾಘವೇಂದ್ರ ಗಾಮ ಅವರಿಂದ ‘’ಡೊಳ್ಳು ಕುಣಿತದ’’ ಬಗ್ಗೆ ವಿವರಣೆಯೊಂದಿಗೆ ಅವರ ತಂಡದಿಂದ ನೃತ್ಯ
ಪ್ರದರ್ಶನ, ತಿಪಟೂರ್ ಮೂಲದ ಸದ್ಯಕ್ಕೆ ಲಂಡನಿಲ್ಲಿ ನೆಲಸಿದ ಹರ್ಷರಾಣಿ ಅವರಿಂದ ‘’ಕಂಸಾಳೆಯ’’ ಬಗ್ಗೆ
ವಿವರಣೆ ಹಾಗು ಈಗಿನ ಪೀಳಿಗೆಯ ಮಹಿಳೆಯರು ಹೇಗೆ ಈ ಪುರುಷ ಪ್ರಾಬಲ್ಯ ಕಲೆಯನ್ನು ಕಲೆತು ಪ್ರದರ್ಶಿಸುತ್ತಿರುವ
ವಿಚಾರ ತಿಳಿಸಿದರು.ಮುಂದಿನ ಜನಾಂಗಕ್ಕೆ ಈ ಪರಂಪರೆಯನ್ನು ದಾಟಿಸುವಂತೆ ಕೇಳಿಕೊಂಡರು . ಹರ್ಷ ಅವರೇ
ನೃತ್ಯ ಸಂಯೋಜಿಸಿ ಕಲಿಸಿಕೊಟ್ಟ ಇಬ್ಬರು ಪುಟ್ಟ ಮಕ್ಕಳಾದ
ಪ್ರತೀಕ್ ದೇಶಪಾಂಡೆ ಮತ್ತು ಶರದ್ ಶ್ರೀನಿವಾಸ್ ಅವರಿಂದ ಕಂಸಾಳೆ ಪ್ರಸ್ತುತಪಡಿಸಿದರು.ಗದುಗಿನಿಂದ
ವೀರಭದ್ರ ಪುರವಂತಿಕೆ ಜನಪದ ಕಲಾ ಮೇಳದ ಹಿರಿಯರು ಹಾಗು ಮುಖ್ಯಸ್ಥರು ಆದ ಶ್ರೀ ಬಸವರಾಜ್ ಹರ್ಲಾಪುರ್
ಅವರಿಂದ ‘’ವೀರಗಾಸೆ’’ ಪ್ರಸ್ತುತಿ ನೋಡುಗರನ್ನು ಮಂತ್ರಮುಗ್ಧ ಮಾಡಿತು.
ಅಮಿತಾ ರವಿಕಿರಣ ಅವರು ಕರ್ನಾಟಕದ ಅದ್ಭುತ ಜಾನಪದ ಕಥೆಯಾದ
ಎಲ್ಲಮ್ಮ ಪದ (ಚೌಡಿಕೆ ಪದ) ಕೇಳುಗರಲ್ಲಿ ರೋಮಾಂಚನ ಉಂಟು ಮಾಡಿತು.
ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸ ಸಂಯೋಜನೆಯನ್ನು ಪ್ರಸ್ತುತಪಡಿಸಿದ
ಸ್ನೇಹಾ ತಯೂರ್, ಶ್ರೇಷ್ಠ ಗೀತರಚನೆಕಾರರು ಮತ್ತು ಸಂಯೋಜಕರ ಸಂಗೀತ ಹಾಗು ಸಾಹಿತ್ಯ ಶ್ರೇಷತೆಯನ್ನು
ಎತ್ತಿ ಹಿಡಿಯುವ ಹೆಲವನಕಟ್ಟೆ ಗಿರಿಯಮ್ಮ ಸಂಯೋಜನೆಯನ್ನು
ಪೂಜಾ ತಯೂರ್ ಸುಮಧುರವಾದ ಗಾಯನದಿಂದ ಪ್ರೇಕ್ಷಕರನ್ನು ಮೋಡಿ ಮಾಡಿದರು ಮತ್ತು ಗುರು ಶಿಷ್ಯ ಕೃತಜ್ಞತಾ
ಭಾವ ತುಂಬಿದ ಗೋಪಾಲದಾಸ ಅವರ ಸಂಯೋಜನೆಯನ್ನು ಸುಮನಾ
ಧ್ರುವ ಅವರು ಅತ್ಯುತ್ತಮವಾಗಿ ಹಾಡಿದರು.
ಸಂಸ್ಕೃತಿ ಸೆಂಟರ್
ಓಫ್ ಕಲ್ಚರಲ್ ಎಕ್ಸೆಲೆನ್ಸ್ ಸಂಸ್ಥಾಪಕರಾದ ಡಾ.ರಾಗಸುಧಾ ವಿನಿಜಮೂರಿ ಅವರಿಂದ ವಂದನಾರ್ಪಣೆ
ಮತ್ತು ಕಾರ್ಯಕ್ರಮವನ್ನು ರಾಧಿಕಾ ಜೋಶಿ ಸಹ-ನಿರೂಪಿಸಿದರು. ಶೋಭಾ ಸಾಗರ್ ಭಾರತದಲ್ಲಿ ಸಮನ್ವಯ ತಂಡದಲ್ಲಿದ್ದರು.
ಈವೆಂಟ್ ಅನ್ನು ಫೇಸ್‌ಬುಕ್‌ನಲ್ಲಿ ನೇರಪ್ರಸಾರ ಮಾಡಲಾಗಿದ್ದು, ವಿವಿಡ್ಲಿಪಿ ಇದನ್ನು ಯೂಟ್ಯೂಬ್‌ನಲ್ಲಿ
ಸ್ಟ್ರೀಮ್ ಮಾಡಿದೆ.
ಗಡಿಯಾಚೆ ಕಲಾವಿದರು ಕರ್ನಾಟಕದ ಈ ದುಃಖದ ಸಮಯದಲ್ಲೂ ಭಾಗವಹಿಸಿ
ಪ್ರದರ್ಶನ ನೀಡಿದರು. ಚೈತನ್ಯವು ಉತ್ತುಂಗದಲ್ಲಿದ್ದು
ಮತ್ತು ಭರವಸೆ ಶಾಶ್ವತವಾಗಿ ಮೂಡಿದ್ದು ಈ
ಸಂದರ್ಭದಲ್ಲಿ ಕಲಾವಿದರೆಲ್ಲಾ ಈ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪ್ರದರ್ಶಿಸುವ,ಹಂಚಿಕೊಳ್ಳುವ ಮತ್ತು
ರವಾನಿಸುವ ಪ್ರಜ್ಞೆಯನ್ನು ಮೂಡಿಸಿದರು.
https://www.youtube.com/watch?v=SOeK-9MyPcI&t=926s
https://eshadoot.com/2021/05/11/kaustubham-karnatakam-spotlights-distinct-arts-of-karnataka/
https://www.asian-voice.com/Culture/Art/Unique-Art-and-Culture-of-Karnataka-highlighted-in-the-UK
https://kpepaper.asianetnews.com/3093371/NRI-EDITION/NRI-EDITION#page/1/2
ಕಾಮೆಂಟ್‌ಗಳು