ಅನನ್ಯ ಅನುಭವಗಳ ಸೃಷ್ಟಿಕರ್ತೆ
(ಡಾ.ಶ್ರೀಮತಿ ರಾಗಸುಧಾ ಅವರೊಂದಿಗೆ ಹೌಸ್ ಆಫ್ ಲಾರ್ಡ್ಸ್ ನಲ್ಲಿ ) ನಾವೆಲ್ಲರೂ ಸಮಾಜದ ಒಂದು ಭಾಗ . ನಮ್ಮಂತಹ ನೂರಾರು ಜನರಿಂದ ಒಂದು ಸಮಾಜದ ಸೃಷ್ಟಿ . ಸಮಾಜದಿಂದ ನಾವು ನಿಮ್ಮಂದ ಸಮಾಜ . ಇದು ಪರಸ್ಪರ ಬೆಂಬಲಿಸಲು , ಸಂವಹನ ಮಾಡಲು , ಅನುಭವಗಳನ್ನು ಹಂಚಿಕೊಳ್ಳಲು ಮತ್ತು ನಮ್ಮ ಆಧುನಿಕ ಜೀವನ ಹೋರಾಟಗಳನ್ನು ಎದುರಿಸಲು ನೆರವಾಗುತ್ತದೆ . ಇತರರೊಂದಿಗೆ ಈ ಮುಕ್ತ ಬಾಂಧವ್ಯವು ಅಮೂಲ್ಯವಾದ ಸಂಬಂಧಗಳನ್ನು ನಿರ್ಮಿಸುತ್ತದೆ , ಮತ್ತು ನಮ್ಮ ಅಸ್ತಿತ್ವಕ್ಕೆ ಒಂದು ಆಳವಾದ ಅರ್ಥವನ್ನು ನೀಡುತ್ತದೆ . ಸಮುದಾಯಗಳು ಸಹ ಸಂಪನ್ಮೂಲಗಳಿಂದ ಸಮೃದ್ಧವಾಗಿವೆ . ಸಮಾಜದಿಂದ ಸಂಸ್ಕೃತಿಯು ಹುಟ್ಟುತ್ತದೆ . ಸಂಸ್ಕೃತಿ ಎಂದರೇನು ? ಭಾಷೆ , ಆಹಾರ ಪದ್ಧತಿ , ಉಡುಗೆ ತೊಡುಗೆ , ಸಂಗೀತ , ನೃತ್ಯ ಇನ್ನಿತರ ಕಲೆಗಳು ಒಂಒಂದಾಗಿ ಸೃಷ್ಟಿಯಾಗಿ ಬೆಳಿತಾ ಹೋಗುತ್ತವೆ . ಒಂದು ಮುಖ್ಯವಾದ ಅಂಶವೇನೆಂದರೆ ನಾವು ಬೆಳೆದು ಬಂದ ಸಮಾಜದಲ್ಲಿ ಸಮನ್ವಯತೆ , ಶಾಂತತೇ ಇದ್ದರೆ ನಮ್ಮ ಸ್ವಭಾವವು ತಕ್ಕ ಮಟ್ಟಿಗೆ ಹಾಗೆ ಇರುತ್ತದೆ . ಇಂತಹ ಸಮಾಜಕ್ಕೆ ಅವಲಂಬಿತವಾದ ...