ಅನನ್ಯ ಅನುಭವಗಳ ಸೃಷ್ಟಿಕರ್ತೆ
(ಡಾ.ಶ್ರೀಮತಿ ರಾಗಸುಧಾ ಅವರೊಂದಿಗೆ ಹೌಸ್ ಆಫ್ ಲಾರ್ಡ್ಸ್ ನಲ್ಲಿ )
ನಾವೆಲ್ಲರೂ ಸಮಾಜದ ಒಂದು ಭಾಗ. ನಮ್ಮಂತಹ ನೂರಾರು ಜನರಿಂದ ಒಂದು ಸಮಾಜದ ಸೃಷ್ಟಿ. ಸಮಾಜದಿಂದ ನಾವು ನಿಮ್ಮಂದ ಸಮಾಜ.ಇದು ಪರಸ್ಪರ ಬೆಂಬಲಿಸಲು, ಸಂವಹನ ಮಾಡಲು, ಅನುಭವಗಳನ್ನು ಹಂಚಿಕೊಳ್ಳಲು ಮತ್ತು ನಮ್ಮ ಆಧುನಿಕ ಜೀವನ ಹೋರಾಟಗಳನ್ನು ಎದುರಿಸಲು ನೆರವಾಗುತ್ತದೆ.ಇತರರೊಂದಿಗೆ ಈ ಮುಕ್ತ ಬಾಂಧವ್ಯವು ಅಮೂಲ್ಯವಾದ ಸಂಬಂಧಗಳನ್ನು ನಿರ್ಮಿಸುತ್ತದೆ, ಮತ್ತು ನಮ್ಮ ಅಸ್ತಿತ್ವಕ್ಕೆ ಒಂದು ಆಳವಾದ ಅರ್ಥವನ್ನು ನೀಡುತ್ತದೆ.
ಸಮುದಾಯಗಳು ಸಹ ಸಂಪನ್ಮೂಲಗಳಿಂದ ಸಮೃದ್ಧವಾಗಿವೆ. ಸಮಾಜದಿಂದ ಸಂಸ್ಕೃತಿಯು ಹುಟ್ಟುತ್ತದೆ. ಸಂಸ್ಕೃತಿ ಎಂದರೇನು? ಭಾಷೆ ,ಆಹಾರ ಪದ್ಧತಿ ,ಉಡುಗೆ ತೊಡುಗೆ ,ಸಂಗೀತ ,ನೃತ್ಯ ಇನ್ನಿತರ ಕಲೆಗಳು ಒಂಒಂದಾಗಿ ಸೃಷ್ಟಿಯಾಗಿ ಬೆಳಿತಾ ಹೋಗುತ್ತವೆ. ಒಂದು ಮುಖ್ಯವಾದ ಅಂಶವೇನೆಂದರೆ ನಾವು ಬೆಳೆದು ಬಂದ ಸಮಾಜದಲ್ಲಿ ಸಮನ್ವಯತೆ , ಶಾಂತತೇ ಇದ್ದರೆ ನಮ್ಮ ಸ್ವಭಾವವು ತಕ್ಕ ಮಟ್ಟಿಗೆ ಹಾಗೆ ಇರುತ್ತದೆ. ಇಂತಹ ಸಮಾಜಕ್ಕೆ ಅವಲಂಬಿತವಾದ ನಾವು , ನಮ್ಮ ಭಾಷೆ ನಮ್ಮ ಅಡುಗೆ ತೊಡುಗೆ ನಮ್ಮ ಸ್ವಭಾವ ಅದರಂತೆ ಇರುತ್ತದೆ . ಒಮ್ಮೊಮ್ಮೆ ಕೇವಲ ನಮ್ಮ ಹೆಸರಿನಿಂದ ಜನರು ನಾವು ಯಾವ ಊರಿನವರು ಇರಬಹುದೆಂದು ಊಹಿಸುತ್ತಾರೆ.
ನಮ್ಮ ಹುಟ್ಟ ಊರು ,ನಾವು ಬೆಳೆದ
ಊರು ಹೀಗೆ ಹತ್ತೂರು ತಿರುಗುತ್ತಾ ಜೀವನದ
ಒಂದು ಮುಖ್ಯವಾದ ಘಟ್ಟ ಬಂದಾಗ ನಾವು ಬೇರೆ ಊರಿಗೆ ಅಥವಾ ಬೇರೆ ದೇಶಕ್ಕೆ ಹೋಗಿ ನೆಲಸುವ ಸಂದರ್ಭ ಬರುತ್ತದೆ.ಸಾಮಾನ್ಯವಾಗಿ ಮದುವೆಯಾದ ನಂತರ ಪತಿಯ ಕೆಲಸ ಎಲ್ಲೋ ,ಅಲ್ಲೇ ಹೋಗಿ ಪತ್ನಿಯೂ ನೆಲಸುವುದು ಸಮಾಜದ ಪದ್ಧತಿ. ನನ್ನದು ಅದೇ ಕಥೆ. ಈಗ ನಾನು ಹೇಳ ಬಯಸುವ ಒಬ್ಬ ವ್ಯಕ್ತಿಯ ಕಥೆಯೂ ಅದೇ. ಆದರೆ ನನ್ನ ಮತ್ತು ಅವರ ಜೀವನ ಧ್ರುವಾಂತರ.
ಹೀಗೆ ನಾವು ದೇಶ ಬಿಟ್ಟು ಪರದೇಶಿ ಆದಾಗ ಅಲ್ಲಿನ ಸಮಾಜಕ್ಕೆ ಹೊಂದುಕೊಳ್ಳಲು ದಿನ ನಿತ್ಯವೂ ಹೋರಾಡುತ್ತೇವೆ. ಹೊಸದರಲ್ಲಿ ಎಲ್ಲವನ್ನು ಕಲಿಯುವ ಉತ್ಸಾಹ.ಹೀಗಾಗಿ ಹೊಸ ಭಾಷೆ ,ಅಲ್ಲಿನ ಪದ್ಧತಿಗಳಿಗೆ ಕಾಲಕ್ರಮೇಣ ಹೊಂದುಕೊಳ್ಳುವಾಗ ನಮ್ಮ ದೇಶ ನಮ್ಮ ಊರಿನ ಬಗ್ಗೆ ಹೆಚ್ಚು ಅಭಿಮಾನ ಹುಟ್ಟುತ್ತದೆ. ನಮ್ಮ ಸ್ವಭಾವ ಸಹನಶೀಲತೆಯಿಂದ ಕೂಡಿದ್ದರೆ ಎಲ್ಲಿ ಹೋದರು ಹೊಂದುಕೊಳ್ಳಬಹುದು. ನಮ್ಮ ಊರಿನ ನಮ್ಮ ಜನರ ನೆನಪು ದಿನೇ ದಿನೇ ನಮ್ಮನ್ನು ನಮ್ಮ ಸಂಸ್ಕೃತಿಗೆ ಹತ್ತಿರ ಮಾಡುತ್ತದೆ. ನಾವು ಚಿಕ್ಕಂದಿನಲ್ಲಿ ಯಾವುದಾರೂ ಹವ್ಯಾಸವನ್ನು ಇಟ್ಟುಕೊಂಡಿದ್ದಾರೆ ಉದಾಹರಣೆಗೆ ಸಂಗೀತ ನೃತ್ಯ ಹೀಗೆ ಅವುಗಳಂತೂ ಬಹಳ ನೆನಪಾಗಿ ಮತ್ತೆ ಆ ಹವ್ಯಾಸವನ್ನು ಮುಂದುವರೆಸಬೇಕೆಂಬ ಹಂಬಲ ಶುರುವಾಗುತ್ತದೆ. ನಾವು ಬಿಟ್ಟು ಬಂದ ಸಮಾಜದಿಂದ ಎಷ್ಟೆಲ್ಲಾ ಅಮೂರ್ತ ಆಸ್ತಿಯನ್ನು ನಮ್ಮೊಡನೆ ತಂದು ಅವೆಲ್ಲ ನಮ್ಮಿಂದ ಬೇರ್ಪಡಿಸಲಾಗದ ಅಂಗವಾಗುತ್ತವೆ. ನಮ್ಮ ಆಸಕ್ತಿಗೆ ಹಾಗು ತೃಪ್ತಿಗೆ ಕಲಿತ ಕಲೆಯನ್ನು ಮುಂದುವರೆಸಲು ಪ್ರಯತ್ನ ಪಡುತ್ತೇವೆ. ಇದು ಒಂದು ರೀತಿ ನಮ್ಮ ಸಮಾಜದ ಪ್ರತಿ ಪುಟ್ಟ ಕೊಡುಗೆ. ಆದರೆ ನಮ್ಮಲ್ಲಿ ಎಷ್ಟು ಜನ ಇಂತಹ ಸಾಂಪ್ರದಾಯಿಕ ಸಾಂಸ್ಕೃತಿಕ ಜಾನಪದ ಕಲೆಯ ಬೆಳೆವಣಿಗೆಗೆ ಭಾರತ ದೇಶದಿಂದ ಸಾವಿರಾರು ಮೈಲಿ ದೂರದಲ್ಲಿದ್ದು ಶ್ರಮಪಡುತ್ತಾರೆ!
ಅಂತಹ ಒಬ್ಬ ವ್ಯಕ್ತಿಯ ಪರಿಚಯ ನನಗಾಯಿತು.2016 ರಲ್ಲಿ ಫೇಸ್ ಬುಕ್ಕಿನ ಒಂದು ಗುಂಪಿನಲ್ಲಿ ಮುಕ್ತ ಅಹ್ವಾನ. ಸಂಗೀತ ನೃತ್ಯದಲ್ಲಿ ಆಸಕ್ತಿ ಇದ್ದರೆ ನನ್ನನ್ನು ಸಂಪರ್ಕಿಸಿ ಎಂದು. ನಾನು ಹಾಗೆ ಅದು ಯಾವ ಸಂಸ್ಥೆ ,ವ್ಯಕ್ತಿಯ ಹಿನ್ನೆಲೆ ಎಲ್ಲವನ್ನು ಇಂಟರ್ನೆಟ್ನಲ್ಲಿ ಹುಡುಕಿ ಅವರನ್ನು ಸಂಪರ್ಕಿಸಿದೆ. ಮೊದಲು ನನಗೆ ಅವರು ಭರತನಾಟ್ಯ ಗುರುಗಳೆಂದಷ್ಟೇ ಪರಿಚಯ. ಹೀಗಾಗಿ ನನಗೂ ನೃತ್ಯಕ್ಕೂ ಯಾವ ಸಂಬಂಧ ಅಂತ ಸುಮ್ಮನಿದ್ದೆ. ಆದರೆ ಅವರು Mothers ' Day ಅಂಗವಾಗಿ ಲಂಡನ್ನಿನ ನೆಹರು ಸೆಂಟರ್ ಹಾಗು ಬ್ರಿಟಿಷ್ ಪಾರ್ಲಿಮೆಂಟ್ ನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಒಂದು ಗ್ರೂಪ್ ಸಾಂಗಿಗೆ ಕನ್ನಡದವರು ಬೇಕಿತ್ತು ಅಂತ ನನ್ನ ಹೆಸರು ಕೊಟ್ಟೆ. ಆದ್ರೆ ಕಡೆಗೆ ಕಾರಣಾಂತರಗಳಿಂದ ನನಗೆ ಆ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಹೀಗೆ ಡಾ I ಶ್ರೀಮತಿ ರಾಗಸುಧಾ ವಿಂಜಮೂರಿ ಅವರ ಪರಿಚಯವಾಯಿತು.
ನಮ್ಮೆಲ್ಲರ ಹಾಗೆ ಅವರೂ,ತಮ್ಮ ಊರನ್ನು ಬಿಟ್ಟು ಇಲ್ಲಿ
ಬಂದು ನೆಲಸಿದ್ದಾರೆ. ಮೂಲತಃ ಹೈದರಾಬಾದ್ ನವರು ,ಇಲ್ಲಿ ಯೂನಿವರ್ಸಿಟಿ ಆಫ್ ಸ0ಡರ್ಲ್ಯಾಂಡ್ ಲಂಡನ್
ಅಲ್ಲಿ ಕಳೆದ ೭ ವರ್ಷಗಳಿಂದ ಉಪನ್ಯಾಸಕಿಯಾಗಿ ಕಾರ್ಯನಿರ್ವಸುತ್ತಿದ್ದಾರೆ. ಅವರು ಅತ್ಯಂತ ಪ್ರತಿಭಾನ್ವಿತ ಭರತನಾಟ್ಯ ನೃತ್ಯಗಾರ್ತಿ. ಯುಕೆ ಗೆ ಬಂದಾಗ ಇಲ್ಲಿ ಅವರು ಗಮನಿಸಿದ್ದು ಭಾರತೀಯ ಶಾಸ್ತ್ರೀಯ ಸಂಗೀತ ನೃತ್ಯಕ್ಕೆ ಬೇಡಿಕೆ ಹಾಗು ಕಲಿಯುವ ಆಸಕ್ತಿ ಜನರಲ್ಲಿ ಬಹಳ ಇದೆ ಆದರೆ, ಕಲಿತವರ ಕಲೆಯ ಪ್ರಸ್ತುತಿಗೆ ಒಂದು ವೇದಿಕೆ ನೀಡುವ ಆಸೆಯಿಂದ ರಾಗಸುಧಾ ಅವರು ಒಂದು ಸಂಸ್ಥೆ ಶುರು ಮಾಡಿದ್ರೆ ಹೇಗೆ ಇಲ್ಲಿ ಕಲಿಯಲು ಕಲಿಸಲು ಹಾಗು ಪ್ರಸ್ತುತ ಪಡಿಸಲು ಒಂದು ಅದ್ಭುತ ಅವಕಾಶ. ಈ ಪ್ರಯೋಗದಲ್ಲಿ ಅವರಿಗೆ ಅಳಿದು ಹೋಗುತ್ತಿರುವ ಭಾರತದ ಗುಪ್ತ ನಿಧಿಗಳಾದ ಜಾನಪದ ಹಾಗು ಬುಡಕಟ್ಟು ಜನಾಂಗದ ಸಂಗೀತ ನೃತ್ಯ ಶೈಲಿ ಹಾಗು ನೂರಾರು ಭಾಷೆ ಹಾಗು ಉಪಭಾಷೆಗಳು ಬಗ್ಗೆ ಕುತೂಹಲ ಮೂಡಿ ಅವುಗಳನ್ನೆಲ್ಲಾ ಪುನರುಜ್ಜೀವನಗೊಳಿಸಿ ಬೆಳೆಸಬೇಕೆಂಬ ಆಸೆ ಹುಟ್ಟಿತು. ಭಾರತವು ಉಪಖಂಡೆವೆಂದೇ ಪ್ರಸಿದ್ಧ . ಎಲ್ಲರಿಗು ತಿಳಿದ ಹಾಗೆ ನಮ್ಮ ದೇಶದಲ್ಲಿ ಭಾಷೆಗಳ ಸಂಭ್ರಮ. ನಗರೀಕರಣದಿಂದ ಜನಪದ ಮತ್ತು ಬುಡಕಟ್ಟು ಜನಾಂಗಳು ನಶಿಸಿ ಹೋಗುತ್ತಿವೆ. ಅವರ ಭಾಷೆ, ಸಂಸ್ಕೃತಿ ,ಉಡುಗೆ ,ನೃತ್ಯ ,ಸಂಗೀತ ಎಲ್ಲವು ನಮ್ಮ ಹಾಗು ಮುಂದಿನ ಪೀಳಿಗೆಗೆ ಬಹುಷಃ ನೋಡಲೂ ಸಿಗಲಿಕ್ಕಿಲ್ಲ. ಇದನ್ನು ಗಮನಿಸಿ, ಕಲೆಯನ್ನು ಉತ್ತೇಜಿಸುವ ಬಗ್ಗೆ ಅಪಾರ ಉತ್ಸಾಹ ಇರುವ ಅವರು ಇಂತಹ ಅವಸಾನವಾಗುತ್ತಿರುವ ಸಂಸ್ಕೃತಿಯನ್ನು ಉಳಿಸಲು ಸಂಸ್ಕೃತಿ ಸೆಂಟರ್ ಫಾರ್ ಕಲ್ಚರಲ್ ಎಕ್ಸೆಲೆನ್ಸ್ ಅನ್ನುವ ಸಂಸ್ಥೆಯನ್ನು ಪ್ರಾರಂಭಿಸಿದರು. ಈ ಸಂಸ್ಥೆಯಲ್ಲಿ ಎಲ್ಲಾ ಕಲಾ ಆಸಕ್ತರು ಹಾಗು ರಸಿಕರಿಗೆ ಮುಕ್ತ ಅವಕಾಶ. ರಾಗಸುಧಾ ನಮ್ಮ ಆಸಕ್ತಿಯನ್ನಷ್ಟೇ ನೋಡುತ್ತಾರೆ ಹೊರತು ನಮ್ಮ ಹಿನ್ನೆಲೆ ,ಯಾವ ರಾಜ್ಯ ಯಾವ ದೇಶ ಎಂದೆಲ್ಲ ಏನನ್ನು ಪ್ರಶ್ನಿಸುವುದಿಲ್ಲ. ಸುಮಾರು ನಾಕೈದು ವರ್ಷಗಳಿಂದ ವಿವಿಧ
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬಹಳ ಅದ್ದೂರಿಯಾಗಿ ದೇಶ ವಿದೇಶದಿಂದ ಕಲಾಕಾರರನ್ನು ಕರೆಸಿ ನಮ್ಮ ಸಂಸ್ಕೃತಿಯ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ನೀಡಿದ್ದಾರೆ. ಇವೆಲ್ಲವೂ ಅವರು ಯಾವುದೇ ಪ್ರಶಂಸೆ ಹಾಗು ಪ್ರತ್ಯೋಪಕರಾದ ನೀರಿಕ್ಷೆಯಿಲ್ಲದೆ ಮತ್ತು ಕೆಲವೊಮ್ಮೆ ಯಾವುದೇ ಧನ ಸಹಾಯವಿಲ್ಲದೆ ಇಂತಹ ಕಾರ್ಯಕ್ರಮವನ್ನು ನಡೆಸುತ್ತಾರೆ. ಬ್ರಿಟಿಷ್ ಪಾರ್ಲಿಮೆಂಟ್ (ಹೌಸ್ ಆಫ್ ಲಾರ್ಡ್ಸ್ ಮತ್ತು ಹೌಸ್ ಆಫ್ ಕಾಮನ್ಸ್) ನಲ್ಲಿ ಅತಿ ಹೆಚ್ಚು ಭಾರತೀಯ ಸಾಂಸ್ಕೃತಿಕ ಕಾರ್ಯಕ್ರಮ (೨೪) ನಡೆಸಿಕೊಟ್ಟ ಹಿರಿಮೆಯ ಜೊತೆ (ಗಿನಿಸ್ಸ್) ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಇವರ ಹೆಸರು ಇದೆ.ಅಷ್ಟೇ ಅಲ್ಲ ಬೆಲ್ಜಿಯಂನ ಯುರೋಪಿಯನ್ ಪಾರ್ಲಿಮೆಂಟ್ನಲ್ಲಿ ಎರಡು ಬಾರಿ ಮತ್ತು ಬಹಳಷ್ಟು ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರಶಂಸೆಗಳ ಮಹಾಪೂರವೇ ಇದೆ. ದೇವತಾಶಾಸ್ತ್ರಜ್ಞ ಮತ್ತು ತತ್ವಜ್ಞಾನಿ ಆಚಾರ್ಯ ಶ್ರೀ ರಾಮಾನುಜ ಬರೆದ 300 ವರ್ಷಗಳ ಹಳೆಯ ತೆಲುಗು ತಾಳೆ ಎಲೆ ಫೋಲಿಯೊಗಳನ್ನು (1942 ರಿಂದ ಬ್ರಿಟಿಷ್ ಗ್ರಂಥಾಲಯದ ವಶದಲ್ಲಿದೆ) ಲಿಪ್ಯಂತರಿಸುವ ಕಠಿಣ ಕಾರ್ಯ.
ರಾಮಾನುಜ. ಈ ಮಹತ್ತರವಾದ ಕಾರ್ಯವು ಪೂರ್ಣಗೊಳ್ಳಲು ಮೂರು ವರ್ಷಗಳನ್ನು ತೆಗೆದುಕೊಂಡಿತು ಮತ್ತು, ಬ್ರಿಟಿಷ್ ಸಂಸತ್ತಿನಲ್ಲಿ ಆಚಾರ್ಯರ 999 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಅವರ ಪುಸ್ತಕವನ್ನು ಪ್ರಕಟಿಸಲಾಯಿತು.
ಅವರಲ್ಲಿನ ಎಷ್ಟೊಂದು ಅನುಕರಣೀಯ ಸದ್ಗುಣಗಳಲ್ಲಿ ಅವರ ಸರಳತೆ ಹಾಗು ಆಸಕ್ತರೆಲ್ಲರಿಗೂ ಅವಕಾಶ ಲಭಿಸಬೇಕೆಂಬ ಅವರ ಉದ್ದೇಶ ನನ್ನ ಮೇಲೆ ಪ್ರಭಾವ ಬೀರಿತು. 2019 ರಲ್ಲಿ
ನಾನು ಒಮ್ಮೆ ಕನ್ನಡದ ಮತ್ತೊಬ್ಬ ಕವಯಿತ್ರಿ ಬರೆದ ಕವಿತೆಯ ವಾಚನ ಮಾಡುವ ಸದವಕಾಶ ದೊರಕಿತು. ರಾಗಸುಧಾರನ್ನು ಕಾರ್ಯಕ್ರಮದ ಮಾಹಿತಿಯ
ಬಗ್ಗೆ ಕೇಳಿದಾಗ ಅವರು ಬ್ರಿಟಿಷ್ ಪರ್ಲಿಯಮೆಂಟಿನಲ್ಲಿ ಅಂದಾಗ ನನಗೆ ಎಲ್ಲಿಲ್ಲದ ಖುಷಿ ಮತ್ತು ಉತ್ಸಾಹ. ಕನಸಿನಲ್ಲೂ ಯೋಚಿಸದ ಅವಕಾಶ. ಇದಕ್ಕೆ ಮುಂಚೆ ನಾನು ವ್ಯಯಕ್ತಿಕವಾಗಿ ಅವರನ್ನು ಭೇಟಿಯಾಗಿರಲಿಲ್ಲ. ನನಗೆ ಸಾರ್ವಜನಿಕ ಗ್ಯಾಲರಿಗಳಿಂದ ಉಭಯ ಸದನಗಳಲ್ಲಿ ಚರ್ಚೆಗಳನ್ನು ವೀಕ್ಷಿಸಲು ಯುಕೆ ನಿವಾಸಿಗಳು ಮತ್ತು ಸಾಗರೋತ್ತರ ಪ್ರವಾಸಿಗರಿಗೆ ಸುಲಭವಾಗಿ ಪ್ರವೇಶವಿದೇ ಎಂಬ ವಿಷ್ಯ ತಿಳಿದಿತ್ತು ಆದರೆ ಅಲ್ಲಿನ ಹೌಸ್ ಆಫ್ ಲಾರ್ಡ್ಸ್ ನ ಥೇಮ್ಸ್ ನದಿಯ ತೀರದ ಸುಂದರವಾದ ಪ್ರೈವೇಟ್ ಕೊಠಡಿಯಲ್ಲಿ ಸಂಜೆಯ ಚಹಾ ಹಾಗು ಇಂಗ್ಲಿಷ್ ಸಾಂಪ್ರದಾಯಿಕ ತಿಂಡಿ ತಿನಿಸುಗಳು ತುಂಬಿದ ಮೇಜು ಮುಂದೆ ಕುಳಿತುಕೊಳ್ಳುವ ಸಂಗತಿ ತಿಳಿದಿರಲಿಲ್ಲ. ಅಷ್ಟೇ ಅಲ್ಲ ದೇಶ ವಿದೇಶಗಳಿಂದ ಬಂದಿದ್ದ ಪ್ರತಿಷ್ಠಿತ ವ್ಯಕ್ತಿಗಳು ಹಾಗು MPಗಳ ಸಮಕ್ಷದಲ್ಲಿ ನಡೆದ ಮಾತೃ ಭಾಷಾ ಕಾರ್ಯಕ್ರಮ. ಸುಮಾರು ೨೦ ಭಾರತೀಯ ಭಾಷೆಯಲ್ಲಿ ಬರೆದ ಕವನ ,ಕವಿತೆ
,ಹಾಡು ಕೇಳುವ ಅದೃಷ್ಟ ಮತ್ತು ವಿಭಿನ್ನ ಸಂಸ್ಕೃತಿಂದ ಬಂದ ಜನರ ಪರಿಚಯ. ಹೊರದೇಶದಲ್ಲಿ ಅದೂ ಪಾರ್ಲಿಮೆಂಟ್ ಅಂತಹ ಸ್ಥಳದಲ್ಲಿ ನಿಂತು ಕನ್ನಡಲ್ಲಿ ಮಾತಾಡಿದ್ದು ಮತ್ತು ಅದಕ್ಕೆ ಅಷ್ಟು ಗೌರವ ಲಭಿಸಿದ್ದು ನನಗೆ ಒಂದುರೀತಿಯ ಕನಸೇ ಅನಿಸಿತು. ಆ ಸಂದರ್ಭದಲ್ಲಿ ರಾಗಸುಧಾ ಅವರು ಮುಂದಿನ ಕಾರ್ಯಕ್ರಮದಲ್ಲಿ ನಿನ್ನದೇ ಕವಿತೆ ಬರಿ ಎಂದರು . ನಾನು ಹಾಗೆ ಸುಮ್ಮ್ನೆ ನಕ್ಕು
ಹಾಗೆ ಆಗಲಿ ಅಂದೇ. 2020 ರಲ್ಲಿ ನಾನೇ ಕವಿತೆ ಬರೆಯಲು ಪ್ರಯತ್ನಿಸಿದೆ. ಆ ಕವಿತೆ ಎಲ್ಲರಿಗು ಮೆಚ್ಚಿಗೆಯಾಗಿ ಹೌಸ್ ಆಫ್ ಕಾಮನ್ಸ್ ನಲ್ಲಿ ಆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಎಷ್ಟು ಸರಾಗವಾಗಿ ನಡೆಯಿತು ಅಂದರೆ ಅದರ ಹಿಂದಿನ ಪರಿಶ್ರಮ ರಾಗಸುಧಾ ಅವರ ಮುಖದಲ್ಲಿ ಸ್ವಲ್ಪವೂ ಕಾಣಿಸಲಿಲ್ಲ . ಒಮ್ಮೆಯೂ ಸಹ ಅವರ ಬಾಯಿಂದ ತುಂಬಾ ಸಮಯ ತುಗೊಂಡೆ ,ಎಷ್ಟು ಜನರನ್ನು ಸಂಪರ್ಕಿಸಿದೆ ಅನ್ನುವ ಮಾತು ಬರಲಿಲ್ಲ. ಎಲ್ಲ ಟೀಮ್ ವರ್ಕ್ ಅನ್ನುತ್ತಾರೆ. ಹೀಗೆ ವರ್ಷ ಪೂರ್ತಿ ಒಂದಲ್ಲ ಒಂದು ಅವಕಾಶವನ್ನು ಸೃಷ್ಟಿಸಿ ಸಂಗೀತ, ನೃತ್ಯ, ಪ್ರೇರೇಪಿಸುವ ಪ್ರತಿಭಾನ್ವಿತ ವ್ಯಕ್ತಿಗಳೊಂದಿಗೆ ಕಾರ್ಯಕ್ರಮಗಳನ್ನು ಶ್ರಮವಿಲ್ಲದೆ ನಡೆಸಿಕುತ್ತಾರೆ.ನಮ್ಮ ಸಂಸ್ಕೃತಿ ನಮ್ಮ ಭಾಷೆ ನಮ್ಮತನ ಉಳಿಸಿಕೊಳ್ಳಲು ಹಾಗು ಸಮಾಜಕ್ಕೆ ಪ್ರತಿಯಾಗಿ ನಮ್ಮ ಕೊಡುಗೆ ಮತ್ತು ನಿಸ್ಸ್ವಾರ್ಥ ಕಾರ್ಯದ ನಿದರ್ಶನ ರಾಗಸುಧಾ ಅವರು. ನಂತಹ ನೂರಾರು ಜನರಿಗೆ, ಕಲಾ ಆಸಕ್ತರಿಗೆ ಅವಕಾಶ ಕಲ್ಪಿಸಿಕೊಡುವ ಅವರು ಸಮಾಜದ ಸಂಸ್ಕೃತಿಯ ಬೆಳೆವಣಿಗೆಗೆ ಹಾಗು ಉಳಿಯುವಿಕೆಗೆ ಅಮೂಲ್ಯ ಹಾಗು ಆವಶ್ಯಕ.
2021 ರಲ್ಲೂ ನನ್ನ ಬರವಣಿಗೆಗೆ ಪ್ರೋತ್ಸಾಹ ನೀಡಿ ಮತ್ತಷ್ಟು ಬರೆಯುವ ಅವಕಾಶ ಮಾಡಿಕೊಟ್ಟರು. ವಿಶ್ವ ಮಾತೃಭಾಷಾ ದಿನವಾದ ಫೆಬ್ರುವರಿಯ 21ನೇ ಭಾನುವಾರದ ಸಂಜೆ ನಡೆದ ವರ್ಚುಯಲ್ ಕಾರ್ಯಕ್ರಮದಲ್ಲಿ ೨೭ ಭಾರತೀಯ ಹಾಗು ದಕ್ಷಿಣ ಏಷ್ಯಾದ ಭಾಷೆಗಳ ಜೊತೆ ಕನ್ನಡ ಮತ್ತು
ಕನ್ನಡ ನಾಡಿನ ಶ್ರೇಷ್ಠತೆ ಬಗ್ಗೆ ಬರೆಯುವ ಮತ್ತು ಹೇಳುವ ನನ್ನ ಚಿಕ್ಕ ಪ್ರಯತ್ನ . ಖ್ಯಾತ ಲೇಖಕರು,ವಿದ್ವಾನ್ಸರು ,ರಾಜತಾಂತ್ರಿಕರು,ಗಾಯಕರು ೫ ವಿವಿಧ ದೇಶಗಳಿಂದ ಸೇರಿದ್ದರು.
ಅಲ್ಲಿ ಪ್ರಸ್ತುತ ಪಡಿಸಿದ ಕನ್ನಡ ಕವನ ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ.
ನಾಡೊ ನುಡಿಯೋ
ತಿಳಿಯದು ಸಾವಿರಾರು ವರ್ಷಗಳ ಇತಿಹಾಸದ ಬಗ್ಗೆಯೋ
ಆಧುನಿಕತೆಯ
ಕೇಂದ್ರವೋ, ಸಂಪ್ರದಾಯದ ಬಿಂದುವೋ ಯಾವುದು ತಿಳಿಯದು?!
ನಾಡಿನ
ಉದ್ದಗಲಕ್ಕೂ ವಿವಿಧ ಕಲೆ ,ಸಂಸ್ಕೃತಿ ಹಾಗು ಸಂಗೀತದ ಅಲೆ
ಪ್ರಕೃತಿಯ
ಸೌಂದರ್ಯ ಬಣ್ಣಿಸಲೋ ವೈವಿಧ್ಯತೆಯಲ್ಲಿರುವ ಸೌಹಾರ್ದತೆಯನ್ನೋ
ಕೊಡಗಿನ ಬೆಡಗು
ಸಿದ್ದಿ ಯಕ್ಷಗಾನದ ಮೆರಗು ಜಲಪಾತಗಳ ಸೊಬಗು
ಹೇಗೆ ವಿವರಿಸಲಿ? ನನಗೆ ತಿಳಿಯದು?!
ನಯನ ಮನೋಹರ ಪಶ್ಚಿಮ ಘಟ್ಟಕ್ಕೆ ಅಪ್ಪುವ ಸಮುದ್ರದ ಅಲೆಗಳೋ
ಗುಡಿ
ಗೋಪುರಗಳಿಂದ ಶೋಭಿಸುವ ಹಳೇಬೀಡು ಬೇಲುರೋ
ವಾಸ್ತುಶಿಲ್ಪಅದ್ಭುತಗಳಾದ
ಗುಮ್ಮಟ ಕೋಟೆ ಹಂಪಿಯ ಇತಿಹಾಸವೋ
ಅರಸರ ಮೈಸೂರಿನ
ವೈಭವವನ್ನೋ, ಏನನ್ನು ವರ್ಣಿಸಲಿ ?
ಹೇಗೆ ಕೊಂಡಾಡಲಿ ನಾನು ಕನ್ನಡತನವನ್ನ ...
ಕೆಚ್ಚದೆಯ ರಾಣಿ
ಚೆನ್ನಮ್ಮ, ದುರ್ಗದ ಓಬ್ಬವ್ವರ ಕುರಿತೋ
ನುಡಿಯೊಂದಿಗೆ
ನಾಡ ಮೆರೆಸಿದ ಪುರಂದರ ಕನಕ ದಾಸರೊ
ಸಾಹಸವೋ
ಹಿರಿಮೆಯೋ ನನಗೆ ತಿಳಿಯದು
ಸಾಹಿತ್ಯದ
ಲಾಲಿತ್ಯ ಹೊರಹೊಮ್ಮಿಸಿದ ಪಂಪ ರನ್ನ ಪೊನ್ನರನ್ನೂ
ಶತಮಾನದ ಶ್ರೇಷ್ಠ ಕವಿಗಳಾದ ಕುವೆಂಪು ಬೇಂದ್ರೆ ಮಾಸ್ತಿಯೋ
ಅನಂತ
ಅವಕಾಶಗಳನ್ನು ಒದಗಿಸಿ ವಿಜ್ಞಾನಿಗಳು ಸೃಷ್ಟಿಸಿರುವ
ಆಸ್ತಿಯೋ
ಬಣ್ಣ ಬಣ್ಣದ
ಆಟಿಕೆಯ ಮೇಳ ಎಲ್ಲೆಲ್ಲೂ ಮಲ್ಲಿಗೆಯ ಶ್ರೀಗಂಧದ ಪರಿಮಳ
!
ಈ ಸುಗಂಧದೊಂದಿಗೆ
ಬೆರೆತ ಕನ್ನಡಿಗರ ವಿಶಾಲ ಹೃದಯದಲ್ಲಿರುವ ಸ್ನೇಹದ ಭಾವವೋ
ಸಂಪ್ರದಾಯದ
ತೋಳಿನಿಂದ ಆಧುನಿಕತೆಯನ್ನು ಆಲಿಂಗಿಸುವ
ಸ್ವಭಾವವೋ
ಕನ್ನಡಿಗರು
ಎಲ್ಲೇ ಇದ್ದರು ಕನ್ನಡತನವನ್ನು ಸಾರುತ
ಅದು ಎಷ್ಟು ಆಳವೋ
ಅಷ್ಟೇ ಉನ್ನತ ಎಂದೆಂದಿಗೂ ಉತ್ತುಂಗದಲ್ಲಿ
ವಿಜೃಂಭಣೆಯಿಂದ
ರಾರಾಜಿಸುವ ಕಸ್ತೂರಿ, ನಮ್ಮ ಕನ್ನಡ ಸಿರಿ
ಕಾಮೆಂಟ್‌ಗಳು