ಪೋಸ್ಟ್‌ಗಳು

ಜುಲೈ, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸರ್ವ ಪ್ರಥಮ ಗಣಪತಿಯ ಅಷ್ಟ ಅವತಾರಗಳ ಒಂದು ವಿಭಿನ್ನ ಮನಮೋಹಕ ಪ್ರಸ್ತುತಿ

ಇಮೇಜ್
ನಮ್ಮ ಧರ್ಮ ನಮ್ಮ ಸಂಸ್ಕೃತಿಯಲ್ಲಿ ಏನೇ ಕಾರ್ಯ ಪ್ರಾರಂಭಿಸುವ ಮುನ್ನ ಶ್ರೀ ಗಣೇಶ ಎನ್ನುವುದು ಪದ್ಧತಿ. ಅವನು ''ಆದ್ಯ ಪೂಜ್ಯ''. ೭೦೦ ವರ್ಷಗಳ ಪ್ರಾಚೀನ ಮುದ್ಗಲ ಪುರಾಣದ ಬಗ್ಗೆ ಜನ ಸಾಮಾನ್ಯರಿಗೆ ಪರಿಚಯಿಸಲು ಸಂಸ್ಕೃತಿ ಸೆಂಟರ್ ಒಫ್ ಕಲ್ಚರಲ್ ಎಕ್ಸೆಲೆನ್ಸ್ ಗಣಪತಿಯ ಅಷ್ಟ ಅವತಾರಗಳ ಕಿರು ಪರಿಚಯ ನೃತ್ಯ ರೂಪಕದ ಮೂಲಕ ಭಾರತೀಯ ವಿದ್ಯಾ ಭವನದಲ್ಲಿ ೨೮ನೆ ಜೂಲೈ ಸಂಜೆ ಆಯೋಜಿಸಿತು. ವರ್ಷಗಳ ಸಂಶೋಧನೆ ಹಾಗು ಪರಿಶ್ರಮದ ಪ್ರತಿಫಲವೇ ''ಆದ್ಯ ಪೂಜ್ಯ'' ನೃತ್ಯ ರೂಪಕ ಎಂದು ಸಂಸ್ಕೃತಿ ಸೆಂಟರ್ ನ ಸಂಸ್ಥಾಪಕಿ  ಡಾ.ರಾಗಸುಧಾ ವಿಂಜಮೂರಿ ಪ್ರೇಕ್ಷಕರಿಗೆ ತಿಳಿಸಿದರು.  ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯ ಅತಿಥಿಗಳಾದ  ಡಾ ನಂದಕುಮಾರ,ಡಾ ರಿಷಿ ಹಂಡಾ,ತೇಜೇಂದ್ರ ಶರ್ಮಾ ಎಂಬಿಇ ,Cllr ಕಾರ್ತಿಕ್ ಬೊಂಕೂರ್,Cllr ಶರದ್ ಕುಮಾರ್ ಝಾ  ದೀಪ ಬೆಳಗಿಸುವ ಮೂಲಕ ಶುಭ ಸಂಜೆಗೆ ನಾಂದಿ ಹಾಡಿದರು. ವಿಷ್ಣುವಿನ ದಶಾವತಾರ ಜನಪ್ರಿಯ ಆದರೆ ಗಣಪತಿಯ ಅವರತಗಳ ಬಗ್ಗೆ ಎಂತರ ಒಂದು ಕಾರ್ಯಕ್ರಮ  ಪ್ರಶಂಸನೀಯ ಎಂದು ಹೊಗಳಿದರು ಭವನದ ಕಾರ್ಯನಿರ್ವಾಹಕ ನಿರ್ದೇಶಕ ಡಾ ನಂದಕುಮಾರ್ ಅವರು. ಮುತ್ತುಸ್ವಾಮಿ ದೀಕ್ಷಿತಾರ್ ಅವರ ವಾತಾಪಿ ಗಣಪತಿ ಕೃತಿಯನ್ನು ವೀಣೆಯಿಂದ ಹಂಸಧ್ವನಿ ರಾಗ ಮೊಳಗಿಸಿದ ಪ್ರಸಿದ್ಧ ವೀಣಾ ವಾದರಕಾರದ ಶ್ರೀ ಪ್ರಮೋದ್ ರುದ್ರಪಟ್ಣ ಅವರು ಹಾಗು ಸತೀಶ್ ಗುಮ್ಮಡವೆಲ್ಲಿ ಅವರ ಮೃದಂಗದ ಸಾಥ್   ಭಕ್ತಿ ಭಾವವನ್ನು ಮೂಡಿಸಿತು. ಗ