ಸರ್ವ ಪ್ರಥಮ ಗಣಪತಿಯ ಅಷ್ಟ ಅವತಾರಗಳ ಒಂದು ವಿಭಿನ್ನ ಮನಮೋಹಕ ಪ್ರಸ್ತುತಿ

ನಮ್ಮ ಧರ್ಮ ನಮ್ಮ ಸಂಸ್ಕೃತಿಯಲ್ಲಿ ಏನೇ ಕಾರ್ಯ ಪ್ರಾರಂಭಿಸುವ ಮುನ್ನ ಶ್ರೀ ಗಣೇಶ ಎನ್ನುವುದು ಪದ್ಧತಿ. ಅವನು ''ಆದ್ಯ ಪೂಜ್ಯ''. ೭೦೦ ವರ್ಷಗಳ ಪ್ರಾಚೀನ ಮುದ್ಗಲ ಪುರಾಣದ ಬಗ್ಗೆ ಜನ ಸಾಮಾನ್ಯರಿಗೆ ಪರಿಚಯಿಸಲು ಸಂಸ್ಕೃತಿ ಸೆಂಟರ್ ಒಫ್ ಕಲ್ಚರಲ್ ಎಕ್ಸೆಲೆನ್ಸ್ ಗಣಪತಿಯ ಅಷ್ಟ ಅವತಾರಗಳ ಕಿರು ಪರಿಚಯ ನೃತ್ಯ ರೂಪಕದ ಮೂಲಕ ಭಾರತೀಯ ವಿದ್ಯಾ ಭವನದಲ್ಲಿ ೨೮ನೆ ಜೂಲೈ ಸಂಜೆ ಆಯೋಜಿಸಿತು.


ವರ್ಷಗಳ ಸಂಶೋಧನೆ ಹಾಗು ಪರಿಶ್ರಮದ ಪ್ರತಿಫಲವೇ ''ಆದ್ಯ ಪೂಜ್ಯ'' ನೃತ್ಯ ರೂಪಕ ಎಂದು ಸಂಸ್ಕೃತಿ ಸೆಂಟರ್ ನ ಸಂಸ್ಥಾಪಕಿ  ಡಾ.ರಾಗಸುಧಾ ವಿಂಜಮೂರಿ ಪ್ರೇಕ್ಷಕರಿಗೆ ತಿಳಿಸಿದರು. 

ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯ ಅತಿಥಿಗಳಾದ  ಡಾ ನಂದಕುಮಾರ,ಡಾ ರಿಷಿ ಹಂಡಾ,ತೇಜೇಂದ್ರ ಶರ್ಮಾ ಎಂಬಿಇ ,Cllr ಕಾರ್ತಿಕ್ ಬೊಂಕೂರ್,Cllr ಶರದ್ ಕುಮಾರ್ ಝಾ  ದೀಪ ಬೆಳಗಿಸುವ ಮೂಲಕ ಶುಭ ಸಂಜೆಗೆ ನಾಂದಿ ಹಾಡಿದರು. ವಿಷ್ಣುವಿನ ದಶಾವತಾರ ಜನಪ್ರಿಯ ಆದರೆ ಗಣಪತಿಯ ಅವರತಗಳ ಬಗ್ಗೆ ಎಂತರ ಒಂದು ಕಾರ್ಯಕ್ರಮ 

ಪ್ರಶಂಸನೀಯ ಎಂದು ಹೊಗಳಿದರು ಭವನದ ಕಾರ್ಯನಿರ್ವಾಹಕ ನಿರ್ದೇಶಕ ಡಾ ನಂದಕುಮಾರ್ ಅವರು.


ಮುತ್ತುಸ್ವಾಮಿ ದೀಕ್ಷಿತಾರ್ ಅವರ ವಾತಾಪಿ ಗಣಪತಿ ಕೃತಿಯನ್ನು ವೀಣೆಯಿಂದ ಹಂಸಧ್ವನಿ ರಾಗ ಮೊಳಗಿಸಿದ ಪ್ರಸಿದ್ಧ ವೀಣಾ ವಾದರಕಾರದ ಶ್ರೀ ಪ್ರಮೋದ್ ರುದ್ರಪಟ್ಣ ಅವರು ಹಾಗು ಸತೀಶ್ ಗುಮ್ಮಡವೆಲ್ಲಿ ಅವರ ಮೃದಂಗದ ಸಾಥ್   ಭಕ್ತಿ ಭಾವವನ್ನು ಮೂಡಿಸಿತು.

ಗಣೇಶ ಕೌತ್ವಂ ಕೃತಿಯನ್ನು  ಶ್ರೇಯಾ ಮತ್ತು ಕೃತಿಕಾ ಹಾಗು ಗಣೇಶ ಅಂಜಲಿ ಕೃತಿಯನ್ನು  ದೀಕ್ಷಾಗ ಸರವಣನ್, ಜನನಿ ರಾಜೇಶ್,ಜನನ್ಯಶ್ರೀ ಕಾರ್ತಿಕ್, ಮಧುಶ್ರೀ ಪ್ರಸನ್ನ, ಸಾನ್ವಿ ಕುಮಾರ್ ಮತ್ತು ಸಾನ್ವಿ ಪವನ್ಅವರಿಂದ ನೃತ್ಯ ರೂಪಕದಿಂದ  ಪ್ರಕ್ಷಕರನ್ನು ಮನೋರಂಜಿಸಿದರು.

ಗಜಾನನ ಅಷ್ಟ ಅವತಾರಗಳ ಅವಾಹನ ಪ್ರಸ್ತುತಿಯನ್ನು ಸಂಸ್ಕೃತಿ ಸೆಂಟರ್ ನ ವಿದ್ಯಾರ್ಥಿಯರಾದ ಅದಿತಿ ಮೋಟೆ, ಅಹನಾ ಹೆಗ್ಡೆ, ಅನನ್ಯಾ, ಅನುಜಾ ತಿರುಮಲಶೆಟ್ಟಿ, ಆಯತಿ ಯುವರಾಜ್, ದೇವಾಂಶಿ ಉಪ್ಪುಲ,

ದಿಯಾ ವಿಶ್ವನಾಥ್, ದಿಯಾ ಷಣ್ಮುಗಂ, ಮೀರಾ ಶಾಜಿ, ಸಂವಿತಾ ಗುಂಡ, ಸಾಯಿ ಸಮೃದ್ಧಿ ವುತ್ಪಾಲ, ಶ್ರಾವಣಿ ಶಿವಶಂಕರ್, ಸುಚೇತಾ ಮಂಗಳಗಿರಿ, ಸ್ವೆಚ್ಚಾ ಮಾಣಿಕಿರೆಡ್ಡಿ, ವನಮಾಲಾ ಆಚಾ, ವಿನ್ಮಾಯಿ ಗೋಪತಿ ಮತ್ತು ಯೋಶಿತಾ ಚಾಮರ್ಥಿ ಪ್ರಸ್ತುತ ಪಡಿಸಿದರು.

ವಕ್ರತುಂಡ ಮತ್ಸರಾಸುರನ ಮರ್ದನ ಮಾಡುವಾಗ  ಆಶ್ಚರ್ಯಕರವಾಗಿ ಈ 

ರೂಪದಲ್ಲಿ ಇದು ಸಿಂಹ ವಾಹನಾಗಿದ್ದಾನೆ. ಏಕದಂತನು ಮದಾಸುರನನ್ನು ನಾಶಪಡಿಸುತ್ತಾನೆ.ಮಹೋದರನು ಮೋಹಾಸುರನನ್ನು ನಾಶಪಡಿಸುತ್ತಾನೆ.ಗಜಾನನನು ಲೋಭಾಸುರನನ್ನು ನಾಶಪಡಿಸುತ್ತಾನೆ.ಈ ಅವತಾರಗಳನ್ನು ಅನ್ವಿ ಪ್ರಭು, ಹೃಷಿಕೇಶ್ ಕಿಝಿಕ್ಕಿಯಿಲ್, ಲಕ್ಷ್ಮಿ ಪಿಳ್ಳೈ, ಮಂಜು ಸುನಿಲ್, ಮೊನಿದೀಪ ಸೀಲ್, ಸಾನ್ವಿಕಾ ಕೊಮ್ಮಿನೇನಿ, ಶ್ರೀ ಲಲಿತಾ ಕೋಟ್ಲ , ರಾಗಸುಧಾ ವಿಂಜಮುರಿ ಮತ್ತು ಡಾ ಶ್ರೀನಿವಾಸ ಪ್ರಸ್ತುತಪಡಿಸಿದರು.

 ಅಸ್ತಿತ್ವದಲ್ಲಿರುವ ಪಾತ್ರದಲ್ಲಿನ ದುರ್ಗುಣಗಳು ಮತ್ತು ದೋಷಗಳು ಇಂದಿಗೂ ನಮ್ಮಲ್ಲಿ ಕೋಪ, ದುರಾಸೆ, ದುರಹಂಕಾರ, ಅಸೂಯೆ, ಗೊಂದಲ, ಅಹಂಕಾರ ಇವುಗಳಿಂದ ಬಾಂಧವ್ಯ ನಾಶವಾಗುತ್ತವೆ . ನಮ್ಮ ಗ್ರಂಥಗಳಲ್ಲಿ ಗಣೇಶನ ಎಂಟು ರೂಪಗಳನ್ನು ನಾವು ಉತ್ತಮವಾಗಿ ನಿಯಂತ್ರಿಸಬಹುದು ಮತ್ತು ಸಮಾಜದಲ್ಲಿ ಜವಾಬ್ದಾರಿಯುತ ಜೀವಿಗಳಾಗಿ ನೈತಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಸೌಂದರ್ಯವನ್ನು ನಮ್ಮ ಗ್ರಂಥಗಳ ಸಾರವನ್ನು ಉಳಿಸಿ ಬೆಳಸಬಹುದು ಎಂದು ಡಾ ರಾಗಸುಧಾ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿಯಾದರು. ಪ್ರಪಂಚದಲ್ಲೇ ಪ್ರಪ್ರಥಮ ಬಾರಿ ಮುದ್ಗಲ ಪುರಾಣದ ಬಗ್ಗೆ ಈ ರೀತಿಯ ಪ್ರಸ್ತುತಿ ಎಂದು ಹೆಮ್ಮ ಪಟ್ಟರು.

ಕಾರ್ಯಕ್ರಮದ  ಪ್ರಸ್ತುತಿ ರಾಧಿಕಾ ಜೋಶಿ ಹಾಗು ವಂದನಾರ್ಪಣೆ ಸುಶೀಲ್  ರಾಪಾತ್ವಾರ್ ಮಾಡಿದರು.


https://kpepaper.asianetnews.com/edition/NRIEDITION/KANPRABHA_NRI/page/10
https://bit.ly/DesiSwara131

In hard copy of Vijayavani paper 4/7/24

World’s first dance performance on Ganesha Avataras’ Story | Read the full article: https://tinyurl.com/28hrvufs

https://www.vijayavani.net/an-innovative-program-called-adya-pujya-was-recently-organized-at-bharatiya-vidya-bhavan-london-by-the-sankhurthi-center-for-cultural-excellence
https://kpepaper.asianetnews.com/edition/NRIEDITION/KANPRABHA_NRI/page/10











ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸನಾತನ ''ಸುಧರ್ಮ''

ಮಲ್ಲಿಗೆಯ ಜಿಜ್ಞಾಸೆ