ಪೋಸ್ಟ್‌ಗಳು

ನವೆಂಬರ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸವಿರುಚಿಯೊಂದಿಗೆ ಸದವಕಾಶ ಸೃಷ್ಟಿಸುತ್ತಿರುವ “ಶ್ರೀರುಚಿ”

ವಿದೇಶದಲ್ಲಿ ನೆಲೆಸಿದ ನಮಗೆ ನಮ್ಮ ಸ್ವದೇಶದ ನೆನಪು ಪ್ರತಿಕ್ಷಣವೂ ಮೂಡುತ್ತಲೇ ಇರುತ್ತದೆ. ಅದರಲ್ಲೂ ನಮ್ಮ ಸಂಪ್ರದಾಯದ ಅಡುಗೆಯ ರುಚಿ ಮತ್ತು ಖಾದ್ಯ ವಸ್ತುಗಳ ಬಗೆಗಿನ ನೆನಪುಗಳು ಇನ್ನೂ ಹೆಚ್ಚು ಹೊಮ್ಮುತ್ತವೆ. ಕೆಲವರಿಗೆ ತಮ್ಮ ಊರಿನ ಅಡುಗೆಯ ಹಂಬಲ ಎಷ್ಟು ತೀವ್ರವಾಗಿರುತ್ತದೆಯೆಂದರೆ, ತಮ್ಮ ಊರಿಗೆ ಹೋದಾಗ ಅಲ್ಲಿಂದ ಸರಕುಪೆಟ್ಟಿಗೆಯಲ್ಲಿ ಆ ವಸ್ತುಗಳನ್ನು ತಂದೂ ಬಿಡುತ್ತಾರೆ ಅಥವಾ ಅಂಚೆ ಮೂಲಕ ವಿದೇಶಕ್ಕೆ ತಲುಪಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಅನಿವಾಸಿಗಳು ಭಾರತದ ಸಣ್ಣ ಕೈಗಾರಿಕೆಗಳ ಸಹಾಯದಿಂದ, ತಮ್ಮ ತವಕದ ಖಾದ್ಯ ವಸ್ತುಗಳನ್ನು ವಿದೇಶದಲ್ಲಿ ಸರಬರಾಜು ಮಾಡಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದ ನಾನಾ ಪ್ರದೇಶಗಳಲ್ಲಿ ತಿನಿಸುಗಳ ವೈಶಿಷ್ಟ್ಯತೆಯು ಕಂಡುಬರುತ್ತದೆ. ಜನಪ್ರಿಯ ಖಾದ್ಯ ವಸ್ತುಗಳನ್ನು ಆಮದು ಮಾಡುವ ಸಣ್ಣ ಪ್ರಮಾಣದ ವ್ಯಾಪಾರಗಳು ಕೋವಿಡ್ ನಂತರದ ಅವಧಿಯಲ್ಲಿ ವೇಗವಾಗಿ ಬೆಳೆಯುತ್ತಿವೆ. ಇಂಗ್ಲೆಂಡಿನಲ್ಲಿ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಖಾದ್ಯ ವಸ್ತುಗಳಿಗೆ ಸಾಕಷ್ಟು ಅಂಗಡಿಗಳು ಮತ್ತು ಉಪಹಾರ ಕೇಂದ್ರಗಳಿವೆ. ಆದರೆ, ಕರ್ನಾಟಕದ, ವಿಶೇಷವಾಗಿ ಉತ್ತರ ಕರ್ನಾಟಕದ ಜೋಳದ ರೊಟ್ಟಿ, ನಾನಾ ಚಟ್ನಿ ಪುಡಿಗಳಂತಹ ಖಾದ್ಯ ವಸ್ತುಗಳಿಗೆ ವ್ಯಾಪಕ ಅಂಗಡಿಗಳು ಇಲ್ಲ. ಮತ್ತೊಂದು ಮುಖ್ಯ ವಿಚಾರವೆಂದರೆ, ಗ್ರಾಹಕರಿಗೆ ತಮ್ಮ ಇಷ್ಟದ ಖಾದ್ಯ ವಸ್ತುಗಳ ಮಾರುಕಟ್ಟೆ ಹೆಸರು (ಬ್ರ್ಯಾಂಡ್) ತಿಳಿದಿರಬಹುದು, ಆದರೆ ಭಾರತೀಯ ಖಾದ್ಯ ಉತ್ಪಾದಕರ...

'ಭಯ ಭೀಭತ್ಸ ಕರುಣೆ ಭಕುತಿ' ಶ್ರೀ ರಾಘವೇಂದ್ರ ತೀರ್ಥರ ಹೊಸ ಆವರಣಕ್ಕೆ ಸಂಗೀತ ನೃತ್ಯ ಸೇವೆ

ಇಮೇಜ್
ಯುಕೆ ಯ ಲಂಡನಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಹೊಸದಾಗಿ ಸ್ವಾಧೀನಪಡಿಸಿಕೊಂಡಿರುವ ಆವರಣದ ನವೀಕರಣದ ಸಲುವಾಗಿ ನಿಧಿ ಸಂಗ್ರಹ ಕಾರ್ಯಕ್ರಮದ ಪ್ರಯುಕ್ತ ಒಂದು ಅದ್ದೂರಿ ಸಂಗೀತ ನೃತ್ಯ ಸಂಜೆಯನ್ನು ಭಾನುವಾರ ಭವನಿನಲ್ಲಿ ಏರ್ಪಡಿಸಲಾಗಿತ್ತು. ಭವನದ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಮತ್ತೂರ್ ನಂದಕುಮಾರ್ ಸಭೆಯನ್ನುದ್ದೇಶಿಸಿ ಇಂತಹ ದೈವಿಕ ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆತಿರಬೇಕು ಹಾಗು ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹ ಹಾಗು ಭಕ್ತರ ದೇಣಿಗೆಯಿಂದ ಯುಕೆ ಯಲ್ಲಿ ರಾಯರ ಮಠ ನಿರ್ಮಾಣವಾಗುತ್ತಿವುದು ಶುಭವೆಂದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶ್ರೀಮತಿ ಅಪರ್ಣ ರೋಹನ್ ಮೂರ್ತಿ ಆಗಮಿಸಿದ್ದರು.  'ಗುರು ವಂದನಾ' ಕಾರ್ಯಕ್ರಮವನ್ನು ಹೆಸರಾಂತ ಪಿಟೀಲು ವಾದಕರಾದ ವಿದ್ವಾನ್ ಮೈಸೂರು ಮಂಜುನಾಥ್ ಅವರ ಸುಪುತ್ರ ಸಂಗೀತ ಪ್ರವೀಣ ಹಾಗು ರಾಘವೇಂದ್ರ ತೀರ್ಥರ ಭಕ್ತರಾದ ಶ್ರೀ ಸುಮಂತ್ ಮಂಜುನಾಥ್ ಅವರಿಂದ ಪಿಟೀಲು ವಾದನ ಹಾಗು ಇವರಿಗೆ ಸಾಥ್ ಕೊಟ್ಟ ಮತ್ತೊಬ್ಬ ಅಧ್ಭುತ ಸಂಗೀತಗಾರ ಪಂಡಿತ್ ಚತುರ್ ಲಾಲ ಅವರ ಮೊಮ್ಮಗ ಹಾಗು ಪಂಡಿತ್ ಚರಂಜಿತ್ ಲಾಲ್ ಅವರ ಸುಪುತ್ರ ಶ್ರೀ ಪ್ರಾಂಶು ಚತುರ್ ಲಾಲ್ ಅವರ ತಬಲಾ ದ ಜೋಡಿ ಅಲ್ಲಿ ನೆರೆದ ಸಂಗೀತ ರಸಿಕರನ್ನು ಮಂತ್ರಮುಗ್ಧರನ್ನಾಗಿ ಮಾಡಿತು. 'ರಿಥಮ್ ರಾಗ' ಜೋಡಿ ಶ್ರೋತೃಗಳನ್ನು ಕರ್ನಾಟಕಿ ಹಾಗು ಹಿಂದೂಸ್ತಾನಿ  ಶೈಲಿಯ ಒಂದು ಹೊಸ ಲಯೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ...