'ಭಯ ಭೀಭತ್ಸ ಕರುಣೆ ಭಕುತಿ' ಶ್ರೀ ರಾಘವೇಂದ್ರ ತೀರ್ಥರ ಹೊಸ ಆವರಣಕ್ಕೆ ಸಂಗೀತ ನೃತ್ಯ ಸೇವೆ
ಯುಕೆ ಯ ಲಂಡನಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಹೊಸದಾಗಿ ಸ್ವಾಧೀನಪಡಿಸಿಕೊಂಡಿರುವ ಆವರಣದ ನವೀಕರಣದ ಸಲುವಾಗಿ ನಿಧಿ ಸಂಗ್ರಹ ಕಾರ್ಯಕ್ರಮದ ಪ್ರಯುಕ್ತ ಒಂದು ಅದ್ದೂರಿ ಸಂಗೀತ ನೃತ್ಯ ಸಂಜೆಯನ್ನು ಭಾನುವಾರ ಭವನಿನಲ್ಲಿ ಏರ್ಪಡಿಸಲಾಗಿತ್ತು.
ಭವನದ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಮತ್ತೂರ್ ನಂದಕುಮಾರ್ ಸಭೆಯನ್ನುದ್ದೇಶಿಸಿ ಇಂತಹ ದೈವಿಕ ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆತಿರಬೇಕು ಹಾಗು ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹ ಹಾಗು ಭಕ್ತರ ದೇಣಿಗೆಯಿಂದ ಯುಕೆ ಯಲ್ಲಿ ರಾಯರ ಮಠ ನಿರ್ಮಾಣವಾಗುತ್ತಿವುದು ಶುಭವೆಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶ್ರೀಮತಿ ಅಪರ್ಣ ರೋಹನ್ ಮೂರ್ತಿ ಆಗಮಿಸಿದ್ದರು.
'ಗುರು ವಂದನಾ' ಕಾರ್ಯಕ್ರಮವನ್ನು ಹೆಸರಾಂತ ಪಿಟೀಲು ವಾದಕರಾದ ವಿದ್ವಾನ್ ಮೈಸೂರು ಮಂಜುನಾಥ್ ಅವರ ಸುಪುತ್ರ ಸಂಗೀತ ಪ್ರವೀಣ ಹಾಗು ರಾಘವೇಂದ್ರ ತೀರ್ಥರ ಭಕ್ತರಾದ ಶ್ರೀ ಸುಮಂತ್ ಮಂಜುನಾಥ್ ಅವರಿಂದ ಪಿಟೀಲು ವಾದನ ಹಾಗು ಇವರಿಗೆ ಸಾಥ್ ಕೊಟ್ಟ ಮತ್ತೊಬ್ಬ ಅಧ್ಭುತ ಸಂಗೀತಗಾರ ಪಂಡಿತ್ ಚತುರ್ ಲಾಲ ಅವರ ಮೊಮ್ಮಗ ಹಾಗು ಪಂಡಿತ್ ಚರಂಜಿತ್ ಲಾಲ್ ಅವರ ಸುಪುತ್ರ ಶ್ರೀ ಪ್ರಾಂಶು ಚತುರ್ ಲಾಲ್ ಅವರ ತಬಲಾ ದ ಜೋಡಿ ಅಲ್ಲಿ ನೆರೆದ ಸಂಗೀತ ರಸಿಕರನ್ನು ಮಂತ್ರಮುಗ್ಧರನ್ನಾಗಿ ಮಾಡಿತು. 'ರಿಥಮ್ ರಾಗ' ಜೋಡಿ ಶ್ರೋತೃಗಳನ್ನು ಕರ್ನಾಟಕಿ ಹಾಗು ಹಿಂದೂಸ್ತಾನಿ ಶೈಲಿಯ ಒಂದು ಹೊಸ ಲಯೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರಿಬ್ಬರು ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.
ನಂತರ 'ನೃತ್ಯ ತರಂಗ' ತಂಡದಿಂದ ಗುರು ರಾಯರ ಜೀವನ ಕಥೆ ಹಾಗು ಕೆಲ ಪವಾಡಗಳನ್ನು ನೃತ್ಯ ರೂಪಕದ ಮೂಲಕ ಪ್ರೇಕ್ಷಕರನ್ನು ಭಕ್ತಿಯ ಅಲೆಯಲ್ಲಿ ತೇಲಿಸಿದರು.
ಒಂದು ಅತ್ಯುನತ ಅಧ್ಭುತ ದೃಶ್ಯಾವಳಿ ಸೃಷ್ಟಿಸಲು ಹಾಗು ಸಂಪ್ರದಾಯವನ್ನು ಎತ್ತಿಹಿಡಿಯುವ ಪರಮ ಉದ್ದೇಶವನ್ನಾಗಿ ಇಟ್ಟುಕೊಂಡು ಹಿನ್ನೆಲೆ ಗಾಯನ ನಟುವಾಂಗ ಮೃದಂಗ ಮೋರ್ಸಿಂಗ್ ಹಾಗು ವೀಣಾ ವಾದನದೊಂದಿಗೆ ಈ ತಂಡ ಮೂಲ ಉದ್ದೇಶವನ್ನು ಸಾಧಿಸುವಲ್ಲಿ ಯಶಸ್ವಿಯಾಯಿತು.
ಶ್ರೀ ರಾಘವೇಂದ್ರ ತೀರ್ಥರು ಪ್ರಹಲ್ಲಾದನ ಅವತಾರ ಹಾಗು ಶ್ರೀಹರಿಯ ಪರಮ ಭಕ್ತ ಎಂದು ದರ್ಶಿಸಿಸಲು ಹಿರಣ್ಯಕಷಪು ಸಿಟ್ಟಿನಲ್ಲಿ ಕಂಭ ಒಡೆದಾಗ ಆ ಶ್ರೀಹರಿಯೇ ನರಸಿಂಹ ಸ್ವರೂಪವಾಗಿ ಹಿರಣ್ಯಕಷಪುವಿನ ಸಂಹಾರ ಮಾಡುವ ಕಥೆಯನ್ನು ಕ್ರೋಧ ಭೀಭತ್ಸ ಭಕ್ತಿ ರಸಗಳನ್ನು ಅಧ್ಭುತವಾಗಿ ಪ್ರದರ್ಶಿಸಿದ ತಂಡ ಜನರ ಚಪ್ಪಾಳೆಗೆ ಪಾತ್ರವಾಯಿತು.
ಶ್ರೀ ರಾಘವೇಂದ್ರ ತೀರ್ಥರ ಜೀವನಕಾಲದಲ್ಲಿ ಬಹಳಷ್ಟು ಘಟನೆಗಳು ನಡೆದಿದ್ದವು ಅವುಗಳಲ್ಲಿ ಶ್ರೀ ಗಂಧ ಹಾಗು ಅಗ್ನಿ ಮಂತ್ರದ ಪ್ರಸಂಗ ಹಾಗು ವೆಂಕಟ ದೇಸಾಯಿಯ ಮನೆಯಲ್ಲಿ ಅವರ ಮಗು ಪಾಯಸದ ಹಂಡೆಯಲ್ಲಿ ಬಿದ್ದು ಅಸುನೀಗಿ ನಂತರ ರಾಯರ ಅನುಗ್ರಹದಿಂದ ಪುನರ್ಜನುಮ ಪಡೆದ ಪ್ರಸಂಗಳನ್ನು ಭಾಳ ಭಾವುಕ ರೀತಿಯಲ್ಲಿ ಪ್ರದರ್ಶಿಸಿದರು.
ಶ್ರೀ ರಾಘವೇಂದ್ರ ತೀರ್ಥರು ತಿರುಪತಿಯ ಕಡೆ ಪ್ರಯಾಣವನ್ನು ನಡೆಸಿ ಅಲ್ಲಿ ಗೋವಿಂದನ ಪರಮ ಅನುಗ್ರಹದಿಂದ ಮಂತ್ರಾಯಲದ ಕಡೆ ನಡೆಯುತ್ತಾ ಬೃಂದಾವನ ಸೇರುವ ದೃಶ್ಯ ನೋಡುಗರಲ್ಲಿ ನೋವು ಹಾಗು ದುಃಖದ ಭಾವನೆಗಳ್ನು ಮೂಡಿಸಿತು.
ಸುಪ್ರಸಿದ್ಧ ಸಂಗೀತಗಾರರಾದ ವೈಣಿಕ ಪ್ರವೀಣ ಶ್ರೀ ಆರ್ ಕೇಶವಮೂರ್ತಿಯ ಅವರ ಮೊಮ್ಮಗ ಆರ್ ಕೆ.ಪ್ರಸನ್ನ ಕುಮಾರ್ ಅವರ ಸುಪುತ್ರ ಶ್ರೀ ಪ್ರಮೋದ್ ರುದ್ರಪಟ್ಣ ಅವರು ಇಡೀ ನೃತ್ಯ ರೂಪಕಕ್ಕೆ ಸಂಗೀತ ಸಂಯೋಜನೆ ಮಾತ್ರವಲ್ಲದೆ ತಮ್ಮ ಸುಶ್ರಾವ್ಯ ವೀಣಾ ವಾದನದೊಂದಿಗೆ ಪ್ರತಿ ಪಾತ್ರಕ್ಕೂ ಜೀವ ತುಂಬಿದ್ದಾರೆ. ಪ್ರತಿಯೊಂದು ರಾಗವನ್ನು ಸೂಕ್ಷ್ಮವಾಗಿ ಹಾಗು ಸುಂದರವಾಗಿ ಸಂದರ್ಭಕ್ಕೆ ತಕ್ಕಂತೆ ಸೃಷ್ಟಿಸಿ ನೃತ್ಯಕ್ಕೆ ಮೆರುಗು ನೀಡಿದ್ದಾರೆ.
ತೀಕ್ಷ್ಣವಾದ ಧ್ವನಿಯ ಕುಮಾರಿ ವೇದ ವೆಂಕಟೇಶ್ ಭಟ್ ತಮ್ಮ ಹಿನ್ನೆಲೆ ಗಾಯನ ಹಾಗು ನಟುವಾಂಗದಿಂದ ನೃತ್ಯರೂಪಕವನ್ನು ಒಂದು ಚನಲಚಿತ್ರದ ಪ್ರಭಾವ ಬೀರುವಂತೆ ಮಾಡಿದರು.ಇವರಿಬ್ಬರ ಸಾಮರ್ಥ್ಯಕ್ಕೆ ಸಹಗಾಯಕಿಯಾಗಿ ಕುಮಾರಿ ಅನನ್ಯ ಕದಡಿ, ಮೃದಂಗದಲ್ಲಿ ಮಧುನನ್ ಉಥಯಕುಮಾರ್ ಹಾಗು ಮೋರ್ಸಿಂಗ್ ಮತ್ತು ವಿಶೇಷ ಪರಿಣಾಮಗಳನ್ನು (ಸ್ಪೆಷಲ್ ಎಫೆಕ್ಟ್ಸ್) ಶ್ರೀ ಶೈ ಕುಗಣೇಶನ್ ಅದ್ಭುತವಾಗಿ ಸಂಗೀತ ಪ್ರದರ್ಶನ ಮಾಡಿದ್ದಾರೆ.
ಕುಮಾರಿ ಅಖಿಲ ರಾವ್ ಅವರು ಈ ನೃತ್ಯ ರೂಪಕಕ್ಕೆ ನೃತ್ಯ ಸಂಯೋಜಿಸಿ ಹಾಗು ನೃತ್ಯ ಪಾತ್ರಾಭಿನಯ ಕೂಡ ಮಾಡಿದರು. ಅವರೊಂದಿಗೆ ಭರತನಾಟ್ಯ ಕಲಾವಿದರಾದ ಶ್ರೀಮತಿ ಅಕ್ಷತಾ ಭಟ್, ಶ್ರೀಮತಿ ಪದ್ಮಾವತಿ ಕೃಷ್ಣನ್, ಕು. ಧನ್ಯಾ ಮೈಸೂರು ರಾಜಶೇಖರ್, ಕು. ವೈಷ್ಣವಿ ಪ್ರಶಾಂತ್ ಹಾಗು ಕು. ಪ್ರಣವಿ ವಸಿ ರೆಡ್ಡಿ ತಮ್ಮ ಸುಂದರ ಲಾಸ್ಯ ಅಭಿನಯದ ಮೂಲಕ ಎಲ್ಲಾ ಪಾತ್ರಕ್ಕೆ ಜೀವ ತುಂಬಿದರು.
ಕೃಷ್ಣ ಶಿಲೆಯ ರಾಯರ ಬೃಂದಾವನವನ್ನು ನಿಜರೂಪದಂತೆ ಚಿತ್ರಿಸಿದ ಶ್ರೀಮತಿ ಸ್ವಾತಿ ಪ್ರಮೋದ್ ಅವರು ಈ ನೃತ್ಯಕ್ಕೆ ಒಂದು ದೈವಿಕ ಮೆರುಗನ್ನು ಕೊಟ್ಟರು.
ಶ್ರೀಮತಿ ರಾಧಿಕಾ ಜೋಶಿ ಕಾರ್ಯಕ್ರಮದ ಕಥಾನಿರೂಪಕಿಯಾಗಿ ಜನರ ಉತ್ಸಾಹವನ್ನು ಕಾಯ್ದಿರಿಸುವಲ್ಲಿ ಯಶಸ್ವಿಯಾದರು.
ಈ ಕಾರ್ಯಕ್ರಮ ಭಕ್ತರ, ಕಲಾ ರಸಿಕರ ಹಾಗು ಪ್ರಾಯೋಜಕರ ಔದಾರ್ಯತೆಯ ಫಲಸ್ವರೂಪ. ಅವರ ದೇಣಿಗೆ ಒಂದು ಶುಭ ಕಾರ್ಯಕ್ಕೆ ವಿನಿಯೋಗವಾಗುವಂತೆ ಆಶ್ವಾಸನೆ ಕೊಟ್ಟ ಯುಕೆ ಬೃಂದಾವನ ಮಠದ ಟ್ರಸ್ಟೀ ಹಾಗು ನಿರ್ದೇಶಕರಾದ ಶ್ರೀ ಶ್ರೀಹರಿಯವರು ಅಲ್ಲಿ ನೆರೆದ ಜನರನ್ನು ಉದ್ದೇಶಿಸಿ ಮಾತನಾಡಿದರು. ಅವರು ಈಡಿ ಕಾರ್ಯಕ್ರಮದ ರೂವಾರಿಯಾಗಿ ಈ ಮಟ್ಟಿಗೆ ಯಶಸ್ವೀಯಾಗಲು ಬಹಳ ಶ್ರಮಿಸಿದ್ದಾರೆ.
https://kpepaper.asianetnews.com/edition/NRIEDITION/KANPRABHA_NRI/page/5
https://bit.ly/DesiSwara147
ಕಾಮೆಂಟ್‌ಗಳು