ಕಲಾತ್ಮಕ ಸ್ಪರ್ಶ

ಚಿತ್ರಕಲೆಯಲ್ಲಿ ನನಗೆ ಚಿಕ್ಕಂದಿನಿಂದಲೂ ಆಸಕ್ತಿ. ಆದರೆ ಆಗ ಅದರ ಬಗ್ಗೆ ಅಷ್ಟು ಗಮನ ಕೊಡಲಿಲ್ಲ. ವಿದ್ಯಾಭ್ಯಾಸದ ಬಗ್ಗೆ ನಮ್ಮ ಎಲ್ಲಾ ಶ್ರಮ. ಮನೆಯನ್ನು ಅಚ್ಚುಕಟ್ಟಾಗಿ ಇಡುವುದು, ಒಳಾಂಗಣ ಗಿಡಗಳನ್ನು ಬೆಳೆಸುವುದು ನನ್ನ ಅಚ್ಚುಮೆಚ್ಚಿನ ಹವ್ಯಾಸ. ನಿಜ ಹೇಳ್ಬೇಕು ಅಂದ್ರೆ ಹವ್ಯಾಸಕ್ಕಿಂತಲೂ ಹೆಚ್ಚು. ಮನೆಯ ಪೀಠೋಪಕರಣಗಳ ಜಾಗ ಬದಲಾಯಿಸುವುದು  ಹಾಗು ಇನ್ನಿತರ ಕಲಾತ್ಮಕ ವಸ್ತುಗಳನ್ನು ಮನ ಬಂದಂತೆ ಆಗಾಗ ಸ್ಥಳಾಂತರ ಮಾಡುವುದು ನನ್ನ ಚಟ .. ಆಗ  ನನ್ನ ತಂದೆ ತಾಯಿ ಆಗಲಿ ,ಈಗ ನನ್ನ ಪತಿ ಆಗಲಿ ಯಾವ ಆಕ್ಷೇಪಣೆ ಮಾಡುವುದಿಲ್ಲ. ಈಗ ಮತ್ತೆ ಆಹಳೆಯ ಸ್ಥಗಿತಗೊಳಿಸಿದ ಕಲೆಯನ್ನು ಪುನರುಜ್ಜೀವನ ಮಾಡಲು ಪ್ರಾರಂಬಿಸಿದ್ದೀನಿ. ಕಳೆದ ವರ್ಷ ಅಂದ್ರೆ ೨೦೧೯ನಲ್ಲಿ ವರ್ಲಿ ಚಿತ್ರಕಲೆಯಿಂದ ಶುರು ಮಾಡಿ ಈಗ ಮಧುಬನಿಯ ತನಕ ಬಂದಿದ್ದೀನಿ .. ಭಾರತೀಯ ಎಂದೆನಿಸಿಕೊಳ್ಳಲು ಮತ್ತೊಂದು ಹೆಮ್ಮೆಯ ಅವಕಾಶ.





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸನಾತನ ''ಸುಧರ್ಮ''

Quantitative Easing!!!

ಮಲ್ಲಿಗೆಯ ಜಿಜ್ಞಾಸೆ