ಚಿಗುರೊಡೆದಾಗ

ಈ ನನ್ನ ಬ್ಲಾಗ್ ಕೇವಲ ನನ್ನ ಬರಹಗಳಿಗೆ ಮಾತ್ರ ಸೀಮಿತ ಮಾಡೋಣ ಅಂತ ಶುರುಮಾಡಿದ್ದೆ ಆದ್ರೆ ಈಗ ಕಳೆದ ೨ ತಿಂಗಳಿಂದ ಜೀವನದ ಗತಿಯು ಬದಲಾದ ಕಾರಣ ನನ್ನ ಹವ್ಯಾಸಗಳು ಕೇವಲ ನನ್ನ ಬರಹಕ್ಕೆ  ಮೀಸಲಾಗಿರಲಿಲ್ಲ. ಮಕ್ಕಳೊಂದಿಗೆ ಕೆಲವು ಚಟುವಟಿಕೆಗಳು, ಅವರೊಂದಿಗೆ ಹೆಚ್ಚು ಸಮಯ ಕಳೆಯುವರಿಂದ ಬರೆಯುವ ಆಸಕ್ತಿ ಇದ್ದರೂ, ಅದಕ್ಕೆ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರೊಟ್ಟಿಗೆ ಮಾಡುವ ಕೆಲವು ಪೂರ್ವ ನಿರ್ಧಾರಿತ ಚಟುವಟಿಕೆಗಳು ಇಲ್ಲಿ  ಹಂಚಿಕೊಳ್ಳುತ್ತಿದ್ದೇನೆ.





ಆ ಕೆಲವು ದಿನಗಳು ಒಳ್ಳೆಯ ಬಿಸಿಲು. ಹೀಗಿರುವಾಗ ಮಣ್ಣು ನೀರಿನ ಅಭಾವವಿಲ್ಲದ ಈ ದೇಶದಲ್ಲಿ, ವಸಂತ ಕಾಲದಿಂದ ಬೇಸಿಗೆಯ ತನಕ ಒಳ್ಳೆಯ ಕೈತೋಟ ಮಾಡಬಹುದು.ಎಲ್ಲರು ಮಾಡುವಂತೆ ನಾವು ಕೂಡ ಮನೆಯ ಹಿತ್ತಲಿನ ಅಂಗಳದಲ್ಲಿ ತೋಟಗಾರಿಕೆ ಶುರು ಮಾಡಿದ್ವಿ.ಗಿಡಮೂಲಿಕೆ ಗುಂಪಿಗೆ ಬರುವ ಮೆಂತ್ಯೆ , ಕೊತ್ತಂಬರಿ,ಪುದಿನ ಹಾಗು ಸಾಸಿವೆ. ತರಕಾರಿಗಳಾದ ಟೊಮೇಟೊ ಹಾಗು ಗಜ್ಜರಿ ಬೆಳೆಸಲು ನಿರ್ಧರಿಸಿ,ಅದಕ್ಕೆ ತಕ್ಕಂತೆ ತಯ್ಯಾರಿ ಮಾಡಿ-  ಮಕ್ಕಳಿಗೆ ಹೇಳಿದ ಮರು ನಿಮಿಷವೇ , ಅವರಲ್ಲಿನ ಹುರುಪು  ವರ್ಣಿಸಲಸಾಧ್ಯ ಮಣ್ಣು, ನೀರು ಮತ್ತು ಬಯಲು ನೋಡಿದರೆ ಎಲ್ಲರು ಮಕ್ಕಳಾಗುವರು. ಈವೆಲದಕ್ಕು ಪೂರಕವಾಗುವಂತಹ ವಾತಾವರಣ. ಇವುಗಳ ಸ್ಥಿರ ಚಿತ್ರಗಳನ್ನು ಹಾಕಲು ಪ್ರಯತ್ನಿಸುತ್ತಿದ್ದೀನಿ.









ಕಳೆ ಕೀಳುವುದರಿಂದ ಹಿಡಿದು, ಮಣ್ಣುನ್ನು ಸಮ ಮಾಡಿ ಬೀಜ ಬಿತ್ತುವುದಕ್ಕೆ ಅಣಿಮಾಡಿಕೊಡುವವರೆಗೂ ,ಪ್ರತಿಯೊಂದು ಹಂತದಲ್ಲೂ ಅಷ್ಟೇ ಉತ್ಸಾಹ ಹಾಗು ತಾವೇ ಎಲ್ಲವನ್ನು ಮಾಡಬೇಕೆಂಬ ಹಠ.ಒಟ್ಟಿನಲ್ಲಿ ಮಕ್ಕಳನ್ನು ಕಾರ್ಯನಿರತರನ್ನಾಗಿರಿಸಲು ನನಗೆ ಒಳ್ಳೆಯ ಅವಕಾಶ.
ಪ್ರತಿದಿನ ಅವುಗಳಿಗಿಗೆ ನೀರು ಹಾಕುವುದು ,ಅವುಗಳ ಮುಂದೆ ಸಮಯದ ಪರಿವಿಲ್ಲದೆ ನೋಡುತ್ತಾ ಕೂಡುವುಯು. ಮತ್ತೆ ಮತ್ತೆ ತಲೆ ಚಿಟ್ಟು ಹಿಡಿಯುವ ತನಕ ಅದೇ ಆತುರತೆಯ ಪ್ರಶ್ನೆಗಳನ್ನು ಕೇಳುವುದು ಒಂದು ದಿನಚರಿ ಆಗಿದೆ.ಯಾವಾಗ ಬೀಜಗಳು ಮೊಳಕೆ ಓಡುಯುತ್ತವೆ, ಯಾವಾಗ ಅವುಗಳಿಗೆ  ದೊಡ್ಡ ಎಲೆ ಬರುತ್ತವೆ, ಯಾವಾಗ ಹಣ್ಣು ಕೀಳಬಹುದು ಹೀಗೆ ಹತ್ತು ಹಲವು ಪ್ರಶ್ನೆಗಳು.

ಬಿತ್ತನೆ ಮಾಡಿ ಸುಮಾರು ೨ ವಾರಗಳಾದವು. ಇಲ್ಲೊಂದು ಅಲ್ಲೊಂದು ಅನ್ನುವಂತೆ ಮೊಳಕೆಯೊಡೆದಿವೆ. ಇದನ್ನು ಮೊದಲು ನೋಡಿದವನ ಅದೃಷ್ಟ.. ಅವನು/ಅವಳು ಅತಿ ವೇಗವಾಗಿ ಬಂದು ಮನೆಯವರೆಲ್ಲರನ್ನು ಅಂಗಳಕ್ಕೆ ಕರೆದೊಯ್ದು ಅವುಗಳನ್ನು ತೋರಿಸುವ ಉತ್ಸಾಹ, ಹುಮ್ಮಸ್ಸು ನಾನು ಇಲ್ಲಿ ವ್ಯಕ್ತಪಡಿಸಲಾರೆ. ನನ್ನ ಮಗಳಿಗೆ ೩ ವರ್ಷ ಹಾಗಾಗಿ ಅವಳು ಇನ್ನು ಕೆಲವು ಪದಗಳನ್ನು  ತೊದಲುತ್ತಾಳೆ. ಅವಳು ಈ ಪ್ರಕ್ರಿಯೆಯನ್ನು ಅರ್ಧ ಕನ್ನಡ ಅರ್ಧ ಇಂಗ್ಲೀಷನ್ನ ತನ್ನ ತೊದಲು ನುಡಿಯೊಂದುಗೆ ವಿವರಿಸುವ ಬಗೆ ನಮ್ಮೇಲ್ಲನ್ನು ಮಂತ್ರಮುಗ್ಧರನ್ನಾಗಿ ಮಾಡಿ ಆ ಚಿಗುರೊಡೆದ ಬೀಜವನ್ನು ನೋಡುವುದು ಬಿಟ್ಟು ಅವಳನ್ನೇ ನೋಡಿ ಆ ಸಂತೋಷದ ಕಿರುನಗೆಯನ್ನು ಅನುಭವಿಸುವ ಕ್ಷಣಗಳು ಅವಳು ಬೆಳೆದು ದೊಡ್ಡವಳಾದಮೇಲೆ ಬಹುಷಃ ಸಿಗಲಾರದು. ನನಗೆ ಪ್ರತಿಯೊಂದರ ಫೋಟೋ ತೆಗೆವ ಅಭ್ಯಾಸವಿಲ್ಲ. ಹೀಗಾಗಿ ನನ್ನ ಮಗ ನೆನಪಿಸಿದರೆ  ನನ್ನ ಫೋನ್ ತಂದು ಒಂದೆರಡು ಫೋಟೋ ತೆಗೆಯುತ್ತೇನೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸನಾತನ ''ಸುಧರ್ಮ''

E-motional !!!

ಮಲ್ಲಿಗೆಯ ಜಿಜ್ಞಾಸೆ