ಪವರ್ ಕಟ್
ಕಳೆದ ವಾರದಿಂದ ನಮ್ಮಲ್ಲಿ ವಿದ್ಯುತ್ ಸರಬರಾಜಿನ ಅಡಚಣೆ ಆದ್ದರಿಂದ ನಮಗೆ ನಮ್ಮೋರು, ನಮ್ಮದ ದೇಶದ ನೆನಪು ಹಸಿರಾಗಿತು.ಪವರ್ಕಟ್ ಕೆಲನಿಮಿಷದಲ್ಲ ..ಮೊದಲನೆಯ ದಿನ ಸುಮಾರು ೭ ಘಂಟೆಗಳ ಕಾಲ ಮತ್ತೆ ಎರಡನೇಯ ಬಾರಿಯು ಸುಮಾರು ಅಷ್ಟೇ ಹೊತ್ತು. ಮೊದಲಸಲವಂತೂ ಸಂಜೆಯ ಹೊತ್ತು ೫ ಹೊಡೆದಿತ್ತು. ಇನ್ನು ಬೇಸಿಗೆಯ ಕಡೆಯ ದಿನಗಳು. ಹೀಗಾಗಿ ಸಂಜೆ ಸುಮಾರು ೭ರ ತನತ ಬೆಳೆಕಿರುವುದರಿಂದ ಮಕ್ಕಳು ಹೆಗೋ ಅಲ್ಲಿಯ ತನಕ ಹೊರಗೆ ಗಾರ್ಡನ್ ಪಾರ್ಕ್ ಅಂತ ಕಾಲ ಕಳಿದರು.ನಮಗೆ ಈ ಅನುಭವ ಮರೆತಂತಾಗಿತ್ತು.ಇನ್ನು ಎರಡು ವಾರಗಳು ಆಗಬಹುದು ಅಂದಿದಾರೆ .. ೧೦ ವರ್ಷಗಳಲ್ಲಿ ಪವರ್ಕಟ್ ಆಗಿದ್ದರು ಕೆಲ ನಿಮಿಷಗಳು ಕಾಲ ಮಾತ್ರ. ನನ್ನ ಸುಮಾರು ಎಲ್ಲಾ ಲೇಖನಗಳಲ್ಲಿ ಪೀಳಿಗೆಯ ಬಗ್ಗೆ ಉಲ್ಲೇಖವಿರುತ್ತದೆ.ಈಗಲೂ ನನಗೆ ತೋಚಿದ್ದು ಅದೇ. ನಮ್ಮ ಕಾಲದಲ್ಲಿ ನಮ್ಮ ಊರಿನಲ್ಲಿ ಪವರ್ ಕಟ್ ಬಹಳ ಸಾಮಾನ್ಯ. ಬೇಸಿಗೆ ಕಾಲದಲ್ಲಂತೂ ವಿದ್ಯುತ್ತಿನ ಅವಶ್ಯಕತೆ ಹೆಚ್ಚು, ಆಗಲೇ ಹೆಚ್ಚಿನ ಅಡಚಣೆ .ಮಾರ್ಚ್ ತಿಂಗಳಿನಲ್ಲಿ ನಮ್ಮೆಲ್ಲರ ಪರೀಕ್ಷೆ, ಎಲ್ಲರ ಪಾಡು ಈಗ ನೆನಸಿಕೊಂಡರೆ ನಗು ಬರುತ್ತದೆ. ಚಿಕ್ಕಂದಿನಲ್ಲಿ ಮೇಣಬತ್ತಿಗಳು, ನಂತರ ಪೆಟ್ರೋಮ್ಯಾಕ್ಸ್ , ಆಮೇಲೆ ಎಮರ್ಜೆನ್ಸಿ ಟುಬೆಲೈಟ್ಗಳು. ನಮ್ಮ ತಂದೆಯ ಡೈಲಾಗ್ ಮಾತ್ರ ವರ್ಷಾನು ವರ್ಷಗಳಿಂದ ಅದೇ .."ಬೆಳ್ಳಿಗ್ಗೆ ಬೇಗ ಏಳಬೇಕು ,ಹಿಂದಿನ ದಿನ ತುಂಬಾ ಓದುವುದು ಇಟ್ಟುಕೊಳ್ಳಬಾರದು,ಮುಂಚಿತವಾಗಿಯೇ ತಯ್ಯ...