ಪೋಸ್ಟ್‌ಗಳು

ಜುಲೈ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನೆನಪುಗಳ ಉಗಿಬಂಡಿ

ಇಮೇಜ್
ನನ್ನ ಬಾಲ್ಯದ ಬೇಸಿಗೆಯ ಸೂಟಿ ನೆನಪು ತಂದಿತು ರೈಲಿನ ಸೀಟಿ  ಅಜ್ಜಿಯಮನೆಗೆ ಹೋಗುವ ಆತುರ  ರಾತ್ರಿ ಇಡೀ ರೈಲಿನ ಪ್ರಯಾಣದ ಕಾತುರ  ಬಟ್ಟೆ ಬರೆ ಸೂಟಕೇಸು ವಾರದಿಂದಲೇ ತಯ್ಯಾರಿ  ಚಾದರು ಬೆಡ್ಶೀಟು ಅಂತ ಹಿಂದಿನದಿನದ ತರಾತುರಿ  ರೈಲಿನ ಊಟಕ್ಕೆ ನಾವು ಹಾಕುತ್ತಾ ಹೊಂಚು  ಅಮ್ಮನ ಬುತ್ತಿ ಝುಣಕ ಚಪಾತಿಗೆ ಕಾದಿತು ಹಂಚು  ಅಪ್ಪ ನೀರಿನ ಬಾಟಲಿ ಬಾಳಿಎಲಿ ನ್ಯೂಸ್ಪಪೆರ್ ಕಟ್ಟಿ  ಕೇಳಿದರು ಅಮ್ಮನ ಅದಯೇನು ಚಟ್ನಿ ಕಟಿ ರೊಟ್ಟಿ  ನಡೆದೆವು ಹಿಡಿದು ಎಲ್ಲರು ಒಂದೊಂದು ಚೀಲ  ಅವಳು ಕೊಡಲು ನಮ್ಮ ಕೈಗೆ ಬುತ್ತಿಯ ಗಂಟು  ಛಲ್ತಿ ತುಳಕಸ್ತಿ ಅಂತ ಬಿಡಲು ಮುಸುರಿಯ ನಂಟು  ರೈಲಿನಲಿ ಒಂದೇ ಕಿಟಕಿಯ ಸೀಟು ಪಾಲು ಬಂದ್ರೆ ಆ ಕಿಟಕಿಯ ಸೀಟಿನಲ್ಲಿ ಯಾರು ಮೊದಲು ಅಂದ್ರೆ  ನ್ಯಾಯ ಮಾಡಿ ನಿರ್ಧಾರ ಮಾಡಿದ ತಂದೆ  ಕಾಲು ಕೆರ್ಕೊಂಡು ಜಗಳವಾಡಲು ನಾ ಮುಂದೆ  ಬಿಸ್ಕೆಟ್ಟಿನ ಬಿಸಿಬಿಸಿ ಬೋಂಡಾ ಭಜಿಯ ಜಾತ್ರೆ  ಮನೆಯಿಂದ ತಂದ ಖಾಲಿ ಫಾಸ್ಕಿನಲ್ಲಿ ಚಹಾ ತರಲು ಅಪ್ಪ ಹೊಂಟ್ರೆ ಲಗೂನೆ ಬರ್ರಿ ಟ್ರೈನ್ ಹೊಂಡೂದ್ರಾಗೆ ಅಂತ ಅಮ್ಮ ಕೂಗುಹಾಕಿ  ಅಪ್ಪ ಎಲ್ಲಿ ಅಂತ ನಾ ಕಿಟಕಿಯ ಕಡೆ ಕಣ್ಣು ಮಾಡಿ ಕೈಹೊರಹಾಕಿ  ಟ್ರೈನ್ ಬಿಡ್ತು ಅಪ್ಪ ಬರ್ಲಿಲ್ಲ ನಾನು ಜೋರಾಗಿ ಕೂಗಿ  ಇಲ್ಲೇ ಇರ್ತಾರೆ ಬಾಗಿಲು ಹತ್ರ ವದರಬೇಡ ನೋಡು ಬಾಗಿ   ನಮ್ಮ ಬುತ್ತಿ ಗಂಟು ತೆಗೀತು ಚಪ...

ಸನಾತನ ''ಸುಧರ್ಮ''

ಇಮೇಜ್
ಸನಾತನ ''ಸುಧರ್ಮ'' ಮೈಸೂರು ಅಂದರೆ ಒಂದು ರೋಮಾಂಚನ ಅದರಲ್ಲೂ ಅಗ್ರಹಾರ ಅಂದ್ರೆ ಪಂಚಪ್ರಾಣ . ನನ್ನ ಬಾಲ್ಯವೆಲ್ಲಾ ಮೈಸೂರಿನ ರಾಮಚಂದ್ರ ಅಗ್ರಹಾರದಲ್ಲಿ ಕಳೆದಿದ್ದೇನೆ . ೮೦ - ೯೦ ರ   ದಶಕಗಳು ನನ್ನ ಜೀವನದ ಅತ್ಯುತ್ತಮ ಕ್ಷಣಗಳು . ರಾಮಚಂದ್ರ ಅಗ್ರಹಾರ ಅಂದರೆ ಸಾಮಾನ್ಯವೆಂದು ಅನ್ಕೋಬೇಡಿ . ಬಹುಷಃ   ಪ್ರಪಂಚದಲ್ಲೇ ಈ ೨ನೇ ಕ್ರಾಸ್ ಬೀದಿಯಲ್ಲಿ ಒಂದಲ್ಲಾ ಎರಡಲ್ಲಾ ೩ ಮುದ್ರಣಾಲಯಗಳು ಇದ್ದವು . ಇದು ಬಹಳ ಅಪರೂಪವೇ ಸರಿ . ಅದರಲ್ಲೂ ಪ್ರಪಂಚದ   ಏಕಮಾತ್ರ ಸಂಸ್ಕೃತ ದಿನ ಪತ್ರಿಕೆ '' ಸುಧರ್ಮ '' ಇದ್ದ ಬೀದಿ . ಸುಧರ್ಮ ಪತ್ರಿಕೆಯ ಸಂಪಾದಕ   ಪದ್ಮಶ್ರೀ KV ಸಂಪತ್ ಕುಮಾರ್ ಅವರ ನಿಧನದ ಸುದ್ದಿ ಕೇಳಿ ದುಃಖ ದೊಂದಿಗೆ ಬಹಳಷ್ಟು ಬಾಲ್ಯದ ನೆನಪುಗಳ ಮಹಾಪೂರವೇ ಹರಿದು ಬಂದಿದೆ . ಅವರು ತಮ್ಮ ತಂದೆ ಆದ್ಯ ಪ್ರವರ್ತಕರಾದ “ ಗಿರ್ವಾನ ವಾನಿ ಭೂಷನಂ ” , ‘’ ವಿದ್ಯಾನಿಧಿ ” ಪಂಡಿತ್ ವಿದ್ವಾನ್ ಶ್ರೀ ವಾದಿರಾಜ್ ಐಯಂಗಾರ್ ಅವರ ಕನಸಿನ ಕನ್ನಡಿಯ ಪ್ರತಿಬಿಂಬವೇ ಈ '' ಸುಧರ್ಮ '' ದಿನಪತ್ರಿಕೆ . ಸುಧರ್ಮಾ ದಿನಪತ್ರಿಕೆ   1970 ರ ದಶಕದ ಅಂತ್ಯದಲ್ಲಿ ಅಕ್ಷರ ಮುದ್ರಣದೊಂದಿಗೆ ಪ್ರಾರಂಭವಾಯಿತು . ಮುದ್ರಣ ತಂತ್ರಜ್ಞಾನ ಆಧುನೀಕರಣಗೊಂಡಂತೆ ಪ್ರಸ್ತುತ ಸುಧರ್ಮವನ್ನು ಗಣಕೀಕೃತ ಆಫ್ ‌ ಸೆಟ...