ನಮ್ಮ ಸಂಸ್ಕೃತಿ ನಮ್ಮ ಅಭಿಮಾನ ನಮ್ಮ ಪರಿಚಯ
ನಮ್ಮ ಸಂಸ್ಕೃತಿ ನಮ್ಮ ಅಭಿಮಾನ ನಮ್ಮ ಪರಿಚಯ ಅನಿವಾಸಿಯರಿಗೆ ಭಾರತೀಯ ಸಂಸ್ಕೃತಿ, ಕಲೆಯ ಮೇಲೆ ಬಹಳ ಅಭಿಮಾನ ಹಾಗು ನಾವು ಭಾರತೀಯ ಶಾಸ್ತ್ರೀಯ ಸಂಗೀತ ನೃತ್ಯ ಕಲಿಯುವುದು ಮತ್ತು ಕಲಿಸುವುದುರಲ್ಲಿ ಎಲ್ಲಿಲ್ಲದ ಸಂತೋಷ. ಭರತನಾಟ್ಯ ಅಥವಾ ಯಾವುದೇ ಭಾರತೀಯ ಶಾಸ್ತ್ರೀಯ ನೃತ್ಯ ಕಲಿಯುವಾಗ ಭಾರತಮುನಿಯ 'ನಾಟ್ಯಶಾಸ್ತ್ರದ' ಪ್ರಸ್ತಾವವೂ ಖಂಡಿತ. ನಾಟ್ಯಶಾಸ್ತ್ರ ಅಂತಹ ಬೃಹದ್ಗ್ರಂಥದ ಪರಿಚಯ ಸರ್ವೇಸಾಮ್ನಾರಿಗಿಲ್ಲ. ಅಷ್ಟೇಅಲ್ಲ ನಾಟಕ ರಂಗ ನೃತ್ಯ ರಂಗ ಮತ್ತು ಸಂಗೀತ ಜಗತ್ತು ಕೂಡ ಇದರ ಬಗ್ಗೆ ಮಹತ್ವ ತಿಳಿದರು ಅದರ ಪ್ರಚಾರ ಹಾಗು ಅದನ್ನು ಓಡುವದರ ಬಗ್ಗೆ ಒತ್ತಾಯ ಅಥವಾ ಒತ್ತಡ ಕೊಡುವುದಿಲ್ಲ. ನಾಟ್ಯಶಾಸ್ತ್ರದ ಪ್ರಥಮ ಬಾರಿಗೆ ಇಂಗ್ಲಿಷ್ ನಲ್ಲಿ ಅನುವಾದ ಮಾಡಿದ ಸಂಸ್ಕೃತ ವಿದ್ವಂಸರು ಪ್ರೊಫೆಸರ್ ರಾಧಾವಲ್ಲಭ ತ್ರಿಪಾಠಿ ಅವರು ಸೋಮವಾರ ನೆಹರು ಸೆಂಟರ್ ನಲ್ಲಿ ನಡೆದ 'ಆಧುನಿಕ ಜಗತ್ತಿನಲ್ಲಿ ನಾಟ್ಯಶಾಸ್ತ್ರದ ಪ್ರಾಮುಖ್ಯತೆ'' ಬಗ್ಗೆ ಮಾತನಾಡುವ ಮುನ್ನ ವಿಡಂಬನೆಗಳ ಬಗ್ಗೆ ತಮ್ಮ ಕಾಳಜಿ ವ್ಯಕ್ತಪಡಿಸಿದರು. ಬ್ರಿಟನಿನಲ್ಲಿ ಶೇಕ್ಸಪೀಯರ್ ವಿವರಣೆಯ ಮಾದರಿ ರಂಗಮಂಚವಿದೆ ಹಾಗೆ ಬಹಳಷ್ಟು ದೇಶಗಳಲ್ಲಿ ತಮ್ಮ ಸಂಸ್ಕೃತಿ ಎತ್ತಿ ಹಿಡಿವ ಕಟ್ಟಡ ಹಾಗು ಸಂಗ್ರಹಾಲವನ್ನು ಅಲ್ಲಿಯ ನಾಗರೀಕರು ನಿರ್ಮಿಸಿದ್ದಾರೆ. ಅದೇ ಭಾರತದಲ್ಲಿ ಇನ್ನು ಭರತಮುನಿಯು ಉಲ್ಲೇಖಿಸಿದಂತಹ ರಂಗಮಂಚವು ಸೃಷ್ಟಿಯಾಗಬೇಕಿದೆ ಅಂದರು. ನಾಟ್ಯಶಾ...