ನಮ್ಮ ಸಂಸ್ಕೃತಿ ನಮ್ಮ ಅಭಿಮಾನ ನಮ್ಮ ಪರಿಚಯ
ನಮ್ಮ ಸಂಸ್ಕೃತಿ ನಮ್ಮ ಅಭಿಮಾನ ನಮ್ಮ ಪರಿಚಯ
ಅನಿವಾಸಿಯರಿಗೆ ಭಾರತೀಯ ಸಂಸ್ಕೃತಿ, ಕಲೆಯ ಮೇಲೆ ಬಹಳ ಅಭಿಮಾನ ಹಾಗು ನಾವು ಭಾರತೀಯ ಶಾಸ್ತ್ರೀಯ ಸಂಗೀತ ನೃತ್ಯ ಕಲಿಯುವುದು ಮತ್ತು ಕಲಿಸುವುದುರಲ್ಲಿ ಎಲ್ಲಿಲ್ಲದ ಸಂತೋಷ. ಭರತನಾಟ್ಯ ಅಥವಾ ಯಾವುದೇ ಭಾರತೀಯ ಶಾಸ್ತ್ರೀಯ ನೃತ್ಯ ಕಲಿಯುವಾಗ ಭಾರತಮುನಿಯ 'ನಾಟ್ಯಶಾಸ್ತ್ರದ' ಪ್ರಸ್ತಾವವೂ ಖಂಡಿತ. ನಾಟ್ಯಶಾಸ್ತ್ರ ಅಂತಹ ಬೃಹದ್ಗ್ರಂಥದ ಪರಿಚಯ ಸರ್ವೇಸಾಮ್ನಾರಿಗಿಲ್ಲ. ಅಷ್ಟೇಅಲ್ಲ ನಾಟಕ ರಂಗ ನೃತ್ಯ ರಂಗ ಮತ್ತು ಸಂಗೀತ ಜಗತ್ತು ಕೂಡ ಇದರ ಬಗ್ಗೆ ಮಹತ್ವ ತಿಳಿದರು ಅದರ ಪ್ರಚಾರ ಹಾಗು ಅದನ್ನು ಓಡುವದರ ಬಗ್ಗೆ ಒತ್ತಾಯ ಅಥವಾ ಒತ್ತಡ ಕೊಡುವುದಿಲ್ಲ.
ನಾಟ್ಯಶಾಸ್ತ್ರದ ಪ್ರಥಮ ಬಾರಿಗೆ ಇಂಗ್ಲಿಷ್ ನಲ್ಲಿ ಅನುವಾದ ಮಾಡಿದ ಸಂಸ್ಕೃತ ವಿದ್ವಂಸರು ಪ್ರೊಫೆಸರ್ ರಾಧಾವಲ್ಲಭ ತ್ರಿಪಾಠಿ ಅವರು ಸೋಮವಾರ ನೆಹರು ಸೆಂಟರ್ ನಲ್ಲಿ ನಡೆದ 'ಆಧುನಿಕ ಜಗತ್ತಿನಲ್ಲಿ ನಾಟ್ಯಶಾಸ್ತ್ರದ ಪ್ರಾಮುಖ್ಯತೆ'' ಬಗ್ಗೆ ಮಾತನಾಡುವ ಮುನ್ನ ವಿಡಂಬನೆಗಳ ಬಗ್ಗೆ ತಮ್ಮ ಕಾಳಜಿ ವ್ಯಕ್ತಪಡಿಸಿದರು.
ಬ್ರಿಟನಿನಲ್ಲಿ ಶೇಕ್ಸಪೀಯರ್ ವಿವರಣೆಯ ಮಾದರಿ ರಂಗಮಂಚವಿದೆ ಹಾಗೆ ಬಹಳಷ್ಟು ದೇಶಗಳಲ್ಲಿ ತಮ್ಮ ಸಂಸ್ಕೃತಿ ಎತ್ತಿ ಹಿಡಿವ ಕಟ್ಟಡ ಹಾಗು ಸಂಗ್ರಹಾಲವನ್ನು ಅಲ್ಲಿಯ ನಾಗರೀಕರು ನಿರ್ಮಿಸಿದ್ದಾರೆ. ಅದೇ ಭಾರತದಲ್ಲಿ ಇನ್ನು ಭರತಮುನಿಯು ಉಲ್ಲೇಖಿಸಿದಂತಹ ರಂಗಮಂಚವು ಸೃಷ್ಟಿಯಾಗಬೇಕಿದೆ ಅಂದರು. ನಾಟ್ಯಶಾಸ್ತ್ರ ಕೇವಲ ನೃತ್ಯಕ್ಕೆ ಸಂಭದಿಸಿಲ್ಲ ಅದರಲ್ಲಿ ವೇದಗಳ ಉಲ್ಲೇಖವಿದ್ದು ವ್ಯಕ್ತಿಯ ಸರ್ವತೋಮುಖ ವ್ಯಕ್ತಿತ್ವ ಅಭಿವೃದ್ಧಿಯಲ್ಲಿ ಪೂರಕವಾಗಿದೆ.
ಇಂತಹ ಒಂದು ಶೈಕ್ಷಣಿಕ ಸ್ಪೂರ್ತಿದಾಯಕ ಹಾಗು ನಾಟ್ಯಶಾಸ್ತ್ರದ ಬಗ್ಗೆ ಕಣ್ಣು ತೆರೆಸುವ ಕಾರ್ಯಕ್ರಮ ನೆಹರು ಸೆಂಟರ್ನ ನಿರ್ದೇಶಕರು ಹಾಗು ಪ್ರಸಿದ್ಧ ಲೇಖಕರು ಆದ ಅಮಿಶ್ ತ್ರಿಪಾಠಿಯವರು ಇಂತಹ ವಿದ್ವಂಸರು ಇಲ್ಲಿ ಬಂದು ಮಾತನಾಡುವುದು ಸೌಭಾಗ್ಯದ ವಿಷಯ ಅಂದರು. ಭವನದ ನಿರ್ದೇಶಕರಾದ ನಂದಕುಮಾರವರು 'ನಮ್ಮ ಸಂಸ್ಕೃತಿ ನಮ್ಮ ಪರಿಚಯ' ನಾವು ಅದರ ಬಗ್ಗೆ ಎಷ್ಟು ಹೆಮ್ಮೆ ಪಟ್ಟರು ಸಾಲದು. ತ್ರಿಪಾಠಿಅಂತಹ ವಿದ್ವಾನ್ಸರ ಮಾತುಗಳನ್ನು ಕೇಳುವುದೇ ಪುಣ್ಯವೆಂದರು.
ಕಾರ್ಯಕ್ರಮದಲ್ಲಿ ಪ್ರಸಿದ್ಧ ಲೇಖಕ ಜಾನ್ ಫ್ಯಾರ್ಡೊನ್ ಪರಂಪರೆಯನ್ನು ಉಳಿಸುವ ಪ್ರಾಮುಖ್ಯತೆ ಬಗ್ಗೆ ಮಾತನಾಡಿದರು.
ಈ ಸುಸಂದರ್ಭದಲ್ಲಿ ೧೩ ನೇ ಶತಮಾನದ 'ಸಂಗೀತಚಂದ್ರ' ಗ್ರಂಥದ ಪ್ರಥಮ ಬಾರಿ ಇಂಗ್ಲಿಷ್ ಭಾಷೆಗೆ ಅನುವಾದ ಮಾಡುವ ಭಗೀರಥ ಪ್ರಯತ್ನವು ಸಂಸ್ಕೃತ ವಿದ್ವಂಸರು ಡಾ ರಾಘವೇಂದ್ರ ಹಾಗು ಸಂಸ್ಕೃತಿ ಸೆಂಟ್ ನ ನೇತೃತ್ವದಲ್ಲಿ ನಡೆದಿದ್ದು ಅದರ ಸುಮಾರು ನೂರಕ್ಕೂ ಹೆಚ್ಚು ಶ್ಲೋಕಗಳ ಅನುವಾದ ಲೋಕಾರ್ಪಣೆ ಮಾಡಲಾಯಿತು.
ಕಾರ್ಯಕ್ರಮವು ಆತ್ಮದೀಪ್ ಭಟ್ಟಾಚಾರ್ಜಿ ಅವರ ಪ್ರಾರ್ಥನೆಯಿಂದ ಶುರುವಾಗಿ ,ಮಂಜು ಸುನಿಲ್ ಅವರ ಭರತನಾಟ್ಯ ಶೈಲಿಯಯಲ್ಲಿ ಪುಷ್ಪಅಂಜಲಿ ನಂತರ ಪ್ರಿಯ ಕುಶ್ವಾಹ ಅವರಿಂದ ಕಥಕ್ ಶೈಲಿಯಲ್ಲಿ ಶಿವ ಸ್ತುತಿ ಮತ್ತು ಡಾ ಅಂಜಲಿ ಶರ್ಮ ತಿವಾರಿ ಅವರು ಜಾನಪದ ವಾದ್ಯಗಳಿಂದ ಪ್ರೇಕ್ಷಕರನ್ನು ಮನೋರಂಜಿಸಿದರು. ಸುಶೀಲ್ ರಾಪಾತ್ವಾರ್ ಅವರಿಂದ ವಂದನಾರ್ಪಣೆ ಮತ್ತು ಕಾರ್ಯಕ್ರಮದ ನಿರೂಪಣೆ ರಾಧಿಕಾ ಜೋಶಿ ಅವರಿಂದ ನೆರವೇರಿತು. ಈ ಇಡೀ ಕಾರ್ಯಕ್ರಮ ಸಂಸ್ಕೃತಿ ಸೆಂಟರ್ ಆ ಕಲ್ಚರಲ್ ಎಕ್ಸೆಲೆನ್ಸ್ ನ ಸಂಸ್ಥಾಪಕಿ ರಾಗಸುಧಾ ವಿನಿಜಮೂರಿ ಅವರ ಪರಿಕಲ್ಪನೆ.
https://epaper.udayavani.com/3744299/Desi-Swara/05-Aug-2023#page/1/1
ಕಾಮೆಂಟ್‌ಗಳು