Stuttgarter Weihnachtsmarkt
ಡೆಲ್ಲಿ ಹಪ್ಪಳದಿಂದ - ಮುಲ್ಲೆಡ್ ವೈನ್ - ಗ್ಲುಹ್ವೆಯ್ನ್ ( ಜರ್ಮನ್ನಲ್ಲಿ ಗ್ಲೋ ಮೈನ್)
ಮೈಸೂರಿನ ದಸರಾ ಹಬ್ಬವನ್ನು ಇಡೀ ವಿಶ್ವವೇ ನೋಡುವಂತೆ ವಿಜೃಂಭಣೆಯಿಂದ ಆಚರಿತ್ತೆವೆ. ದೊಡ್ಡಕೆರೆ ಮೈದಾನದ ದಸರಾ ವಸ್ತು ಪ್ರದರ್ಶನಕ್ಕೆ ದೇಶದೆಲ್ಲೆಡೆಯಿಂದ ವ್ಯಾಪಾರಿಗಳು ತಮ್ಮೂರಿನ ಕರಕುಶಲ ವಸ್ತುಗಳು ಅಲ್ಲಿ ಮಾರುತ್ತಿದ್ದರು. ಇವೆಲ್ಲ ನೋಡಿ ಬೆಳೆಗ ನಂಗೆ ಇದಕ್ಕಿಂತ ಆದ್ದೂರು ಏನಿರಲಾರದು ಎಂಬ ನಂಬಿಕೆ. ಅದೇ ಈಗಲೂ ಸಹ. ನನಗೆ ಅಚ್ಚು ಮೆಚ್ಚು .
ನಾನು ಕಾನ್ವೆಂಟಿನಲ್ಲಿ ನನ್ನ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ್ದರಿಂದ ನನಗೆ ಸ್ವಲ್ಪ ಮಟ್ಟಿಗೆ ಈಸ್ಟರ್ ಮತ್ತು ಕ್ರಿಸ್ಮಸನ್ನಿನ ಬಗ್ಗೆ ಮಾಹಿತಿ ಇದೆ. ಹಾಗೆ ನಮ್ಮ ಮನೇಲಿ ನಾನು ಪುಟ್ಟ ಕ್ರಿಸ್ಮಸ್ ಗಿಡ ಇಡುತ್ತಿದೆ. ಆದರೆ ಕ್ರಿಸ್ಮಸ್ ಮಾರ್ಕೆಟ್ ಬಗ್ಗೆ ನಂಗೆ ಏನು ಗೊತ್ತಿರ್ಲಿಲ್ಲ ಲಂಡನ್ನಿಗೆ ಬಂದ ನಂತರ ಸಾಂಪ್ರದಾಯಿಕ ಕ್ರಿಸ್ಮಸ್ ಮಾರ್ಕೆಟ್ ಏನೆಂದು ನೋಡಿದೆ. ಈಗ ಇಲ್ಲಿನ ನಿವಾಸಿಆದಾಗಿಂದ ನಾವು ಈ ಮಾರ್ಕೆಟ್ ಪ್ರತಿ ವರ್ಷ ಹೋಗೋದು ಒಂದು ಸಂಪ್ರದಾಯವೇ ಆಗಿದೆ.
ಶಾಪ್ಪಿಂಗಿಂತಲೂ ಅಂಗಡಿಗಳ ಅಲಂಕಾರ ಅಲ್ಲಿ ಮಾರುವ ವಸ್ತುಗಳು ನೋಡಲು ಬಹಳ ಖುಷಿ. ಈ ಬಾರಿ ಹದಿನಾಲ್ಕು ವರ್ಷಗಳ ನಂತರ ಬಾತ್ ಊರಿನ ಕ್ರಿಸ್ಮಸ್ ನೋಡಲು ನನ್ನ ಲೇಡೀಸ್ ಗ್ಯಾಂಗಿನೊಂದಿದೆ ಹೊಂದಿದ್ದೆ. ಬಾತ್ ನ ಕ್ರಿಸ್ಮಸ್ ಮಾರ್ಕೆಟ್ ಯುಕೆ ನ ಒಂದು ಪ್ರಸಿದ್ಧ ಮಾರ್ಕೆಟ್.
ಬಿಸಿ ವೈನ್ ಮತ್ತು ಹಸಿರು ಸೇಬಿನ ರಸವನ್ನು ದಾಲ್ಚಿನ್ನಿ ಲವಂದೊಂದಿಗೆ ಕುದಿಸಿ ಒಂದು ಒಳ್ಳೆಯ ಡ್ರಿಂಕ್ ತಯ್ಯಾಸಿರುತ್ತಾರೆ ಅದು ನನಗೆ ಬಹಳ ರುಚಿ ಅನಿಸುತ್ತದೆ. ನಾನು ಈ ಸೇಬಿನ ಬಿಸಿ ಪಾನಕವನ್ನು ಸುಮಾರು ೪-೫ ಕಪ್ ಕುಡಿದಿರಬಹುದು. ಈ ಚಳಿಯೆನಿಸುತ್ತದೆ ಅದೇ ಹಿತವೆನಿಸುತ್ತದೆ.
ನನ್ನ ಅಕ್ಕ ಜೆರ್ಮಿಯ ಸುಟ್ಟಗಾರ್ಟಿನ ನಿವಾಸಿ. ಈ ಕ್ರಿಸ್ಮಸ್ ರಜೆಯಲ್ಲಿ ಅವಳ ಮನೆಗೆ ಲಗ್ಗೆ ಹಾಕಿದೀವಿ. ಅವಳು ಸುಮಾರು ವರ್ಷಗಳಿಂದ ನಂಗೆ ಹೇಳುತ್ತನೆಯಿದ್ದಳು ಜೆರ್ಮನಿಯ ಕ್ರಿಸ್ಮಸ್ ಮಾರ್ಕೆಟ್ಗಳ ಬಗ್ಗೆ. ಯೂರೋಪಿನ ಅತೀ ಹಳೆಯ ಮಾರ್ಕೆಟ್ ಇಲ್ಲಿದೆ ಎಂದು. ಈ ಬರಿ Stuttgarter Weihnachtsmarkt ಗೆ ಭೇಟಿ ಕೊಟ್ಟೆವಿ.
1692 ರಲ್ಲಿ ಸ್ಟಟ್‌ಗಾರ್ಟರ್ ವೀಹ್ನಾಚ್ಟ್‌ಮಾರ್ಕ್ ಅನ್ನು ನಗರದ ದಾಖಲೆಗಳಲ್ಲಿ ಮೊದಲ ಬಾರಿಗೆ ಉಲ್ಲೇಖಿಸಲಾಗಿದೆ, ಇದನ್ನು 'ಸಾಂಪ್ರದಾಯಿಕ ಸ್ಟಟ್‌ಗಾರ್ಟ್ ಈವೆಂಟ್' ಎಂದು ವಿವರಿಸಲಾಗಿದೆ. ಆಧುನಿಕ ಕ್ರಿಸ್‌ಮಸ್ ಮಾರುಕಟ್ಟೆಯು ಸುಮಾರು 200 ಸ್ಟ್ಯಾಂಡ್‌ಗಳನ್ನು ಒಳಗೊಂಡಿದೆ ಮತ್ತು ಪ್ರತಿ ವರ್ಷ ಸುಮಾರು 3.6 ಮಿಲಿಯನ್ ಜನರು ಭೇಟಿ ನೀಡುತ್ತಾರೆ. ಜರ್ಮನಿಯಲ್ಲಿ ಎದೆ ಅತೀ ದೊಡ್ಡದು. ಪ್ರದೇಶದ ಪರಿಭಾಷೆಯಲ್ಲಿ, ಸ್ಟಟ್‌ಗಾರ್ಟ್ ಕ್ರಿಸ್‌ಮಸ್ ಮಾರುಕಟ್ಟೆಯನ್ನು ಸಂಘಟಕರು ಯುರೋಪ್‌ನಲ್ಲಿ ಹೆಚ್ಚಿನ ಸಂಪ್ರದಾಯದೊಂದಿಗೆ ಹಕ್ಕು ಸಾಧಿಸಿದ್ದಾರೆ.
ಪ್ರತಿಯೊಂದು ಅಂಗಡಿಯು ವಿಭಿನ್ನವಾಗಿ ಸುಂದರವಾಗಿ ಸಾಂಪ್ರದಾಯಿಕ ಕಥೆಯನ್ನು ಹೇಳುವ ಉಲ್ಲೇಖಿಸುವ ಗೊಂಬೆಗಳ ಅಲಂಕಾರವು ನೋಡುತ್ತಾ ನಿಂತರೆ ಸಮಯ ಹೋಗಿದ್ದೆ ಗೊತ್ತಾಗಲಿಲ್ಲ. ಅಷ್ಟೇ ಅಲ್ಲ ಮತ್ತೊಂದು
ನನಗೆ ಬಹಳ ವಿಭಿನ್ನ ಅನಿಸಿದ್ದು ಮಕ್ಕಳ ಮಿನಿಯೇಚರ್ ರೈಲುಮಾರ್ಗದ 'ಫೇರಿಟೇಲ್ ಲ್ಯಾಂಡ್'.
ಭಾಷೆ ಸ್ವಲ್ಪನೂ ತಿಳಿಯುವಿದಿಲ್ಲ ಆದರೆ ನನ್ನ ಅನುಭವದಲ್ಲಿ ಪ್ರತಿಯೊಬ್ಬ ವ್ಯಾಪಾರಿಯು ನನಗೆ ಜರ್ಮನ್ ಬರುದಿಲ್ಲ ಇಂಗ್ಲಿಷ್ ಅಂದಾಕ್ಷಣ ಇಂಗ್ಲಿಷ್ ನಲ್ಲಿಯೇ ಮಾತನಾಡಿಸುತ್ತಿದ್ದರು. ಬಿಸಿಯಾದ ಹುರಿದ ಚೆಸ್ಟ್ನಟ್ ಬಟಾಟಿ ಚಿಪ್ಸ್ ಅಷ್ಟೇ ನಮಂತಹ ಸಸ್ಯಾಹಾರಿಗಳಿಗೆ ಒಂದುರೀತಿಯ ವೃಷ್ಟ್ಯಾನ್ನ.
ಪುರಾತನ ವಸ್ತುಗಳ ಸಂಗ್ರಹಿಸುವರು ಮತ್ತು ಇಷ್ಟವಾದುವರು ಇಲ್ಲಿ ಅನನ್ಯ ಅಪರೂಪತೆಗಳು, ಪುರಾತನ ಪುಸ್ತಕಗಳು, ಗಡಿಯಾರಗಳು, ಪಿಂಗಾಣಿ, ಆಭರಣಗಳು ಮತ್ತು ಹೆಚ್ಚಿನದನ್ನು ನೋಡಬಹುದು.
ಸುಂದರ ಘಮಘಮಿಸುವ ಮೇಣಬತ್ತಿಗಳು, ಬಣ್ಣ ಬಣ್ಣದ ಬೆಚ್ಚನೆಯ ಸ್ಕಾರ್ಫ್ ಗಳು, ಕ್ರಿಸ್ಮಸ್ ಗಿಡಗಳಿಗೆ ಅಲಂಕರಿಸುವ ವಸ್ತುಗಳು ಎಲ್ಲಿ ನೋಡರು ಲೈಟಿನ ಸರ. ಈ ಬರಿ ಕ್ರಿಸ್ಮಸ್ಸಿನ ಮಜವೇ ಬೇರೆ.
ನಾನು ವರ್ಣಿಸುದಕಿಂತ ತೆಗೆದ ಫೋಟೊಗಿಂತಲೂ ಸುಂದರ ಈ ಕ್ರಿಸ್ಮಸ್ ಮಾರ್ಕೆಟ್
ಉದಯವಾಣಿ ದೇಸಿಸ್ವರ ಅನಿವಾಸಿ ಕನ್ನಡಿಗರ ಆವೃತ್ತಿಯ 105ನೇ ಸಂಚಿಕೆ ಓದಲು ಸಿದ್ಧವಾಗಿದೆ.
ಕಾ ಶೋನ ಕುರಿತು ಊರುಟೂರು ಅಂಕಣ, ಹೊಸ ವರ್ಷದ ಲೇಖನ, ಅತಿದೊಡ್ಡ ಕ್ರಿಸ್ ಮಸ್ ನ ಮಾರುಕಟ್ಟೆಯ ಬಗ್ಗೆ, ಪದ್ಯಸಮಯ, ಮಕ್ಕಳ ಬಣ್ಣದ ಜಗತ್ತು, ಅನಿವಾಸಿ ಕನ್ನಡ ಸಂಘಟನೆಗಳ ಕಾರ್ಯಕ್ರಮ ಮತ್ತು ಇನ್ನಷ್ಟು ಬರಹಗಳು ಓದಿಗೆ ಲಭ್ಯ. ನೀವೂ ಓದಿ ಇತರರೊಂದಿಗೂ ಹಂಚಿಕೊಳ್ಳಿ.
https://epaper.udayavani.com/3808491/Desi-Swara/30-Dec-2023#page/1/1
ಕಾಮೆಂಟ್‌ಗಳು