The wall silently merges with roof and the carpenter is just right with his colours!!
ಸನಾತನ ''ಸುಧರ್ಮ''
ಸನಾತನ ''ಸುಧರ್ಮ'' ಮೈಸೂರು ಅಂದರೆ ಒಂದು ರೋಮಾಂಚನ ಅದರಲ್ಲೂ ಅಗ್ರಹಾರ ಅಂದ್ರೆ ಪಂಚಪ್ರಾಣ . ನನ್ನ ಬಾಲ್ಯವೆಲ್ಲಾ ಮೈಸೂರಿನ ರಾಮಚಂದ್ರ ಅಗ್ರಹಾರದಲ್ಲಿ ಕಳೆದಿದ್ದೇನೆ . ೮೦ - ೯೦ ರ ದಶಕಗಳು ನನ್ನ ಜೀವನದ ಅತ್ಯುತ್ತಮ ಕ್ಷಣಗಳು . ರಾಮಚಂದ್ರ ಅಗ್ರಹಾರ ಅಂದರೆ ಸಾಮಾನ್ಯವೆಂದು ಅನ್ಕೋಬೇಡಿ . ಬಹುಷಃ ಪ್ರಪಂಚದಲ್ಲೇ ಈ ೨ನೇ ಕ್ರಾಸ್ ಬೀದಿಯಲ್ಲಿ ಒಂದಲ್ಲಾ ಎರಡಲ್ಲಾ ೩ ಮುದ್ರಣಾಲಯಗಳು ಇದ್ದವು . ಇದು ಬಹಳ ಅಪರೂಪವೇ ಸರಿ . ಅದರಲ್ಲೂ ಪ್ರಪಂಚದ ಏಕಮಾತ್ರ ಸಂಸ್ಕೃತ ದಿನ ಪತ್ರಿಕೆ '' ಸುಧರ್ಮ '' ಇದ್ದ ಬೀದಿ . ಸುಧರ್ಮ ಪತ್ರಿಕೆಯ ಸಂಪಾದಕ ಪದ್ಮಶ್ರೀ KV ಸಂಪತ್ ಕುಮಾರ್ ಅವರ ನಿಧನದ ಸುದ್ದಿ ಕೇಳಿ ದುಃಖ ದೊಂದಿಗೆ ಬಹಳಷ್ಟು ಬಾಲ್ಯದ ನೆನಪುಗಳ ಮಹಾಪೂರವೇ ಹರಿದು ಬಂದಿದೆ . ಅವರು ತಮ್ಮ ತಂದೆ ಆದ್ಯ ಪ್ರವರ್ತಕರಾದ “ ಗಿರ್ವಾನ ವಾನಿ ಭೂಷನಂ ” , ‘’ ವಿದ್ಯಾನಿಧಿ ” ಪಂಡಿತ್ ವಿದ್ವಾನ್ ಶ್ರೀ ವಾದಿರಾಜ್ ಐಯಂಗಾರ್ ಅವರ ಕನಸಿನ ಕನ್ನಡಿಯ ಪ್ರತಿಬಿಂಬವೇ ಈ '' ಸುಧರ್ಮ '' ದಿನಪತ್ರಿಕೆ . ಸುಧರ್ಮಾ ದಿನಪತ್ರಿಕೆ 1970 ರ ದಶಕದ ಅಂತ್ಯದಲ್ಲಿ ಅಕ್ಷರ ಮುದ್ರಣದೊಂದಿಗೆ ಪ್ರಾರಂಭವಾಯಿತು . ಮುದ್ರಣ ತಂತ್ರಜ್ಞಾನ ಆಧುನೀಕರಣಗೊಂಡಂತೆ ಪ್ರಸ್ತುತ ಸುಧರ್ಮವನ್ನು ಗಣಕೀಕೃತ ಆಫ್ ಸೆಟ...
ಕಾಮೆಂಟ್ಗಳು