೨೦೨೦ ಯುಗಾದಿಯ ಸಂದೇಶ


ಶಿಶಿರ ಋತುವಿನ ಶೀತಲ ವಾತಾವರಣ ಎಲ್ಲರನ್ನು ಅಜಾರಿ ಮಾಡುವಂತೆ
ಹಿಂದಿನ ಸಂವತ್ಸರದ ಕೊರೊನ ಋತು ಪ್ರಪಂಚವನ್ನೇ ಮಬ್ಬು ಮಾಡಿದೆ.
ನಿಸರ್ಗದ ನಿಯಮದಂತೆ ಶಿಶಿರ ಋತುವಿನ ನಂತರ ವಸಂತ ಋತು ಬರುವಂತೆ
ಭಯಾನಕ ರೋಗದ ನಂತರ ನಿರ್ಮಲ ವಾತಾವರಣವು ಆವರಿಸುವುದು .

ಹೇಮಂತ ಋತುವಿನಲ್ಲಿ ಮರದ ಎಳೆಗಳು ಒಣಗಿ ಬೀಳುತ್ತವೆ ಹೊರತು ಮರವಲ್ಲ
ಹಾಗೆ ಮನುಷ್ಯನ ದೇಹ ಕುಗ್ಗಿದರು ಅವನ ಆತ್ಮವಿಶ್ವಾಸ ಹಾಗು ನಂಬಿಕೆ ಕುಂಠಿತವಾಗುವುದಿಲ್ಲ
ಮನುಷ್ಯನು ಮಾಡುವ ದುಷ್ಕೃತ್ಯಗಳಿಗೆ ಪ್ರಕೃತಿಯು ನೈಜ ರೀತಿಯಲ್ಲಿ ತನ್ನನ್ನು ಗುಣಪಡಿಸಿಕೊಂಡು
ಮನುಷ್ಯನಿಗೆ  ಮಾನವನಾಗಲು ಸದಾವಕಾಶವು ಮಾಡಿಕೊಡುತ್ತಿದೆ.

ಸರ್ವರಿ ನಾಮವು ಎಷ್ಟು ಅರ್ಥ ಗರ್ಭಿತ ಹಾಗು ಈಗಿನ ಪರಿಸ್ಥಿತಿಯಲ್ಲಿ ಎಷ್ಟು ಸೂಕ್ತ ಎಂಬುದು ಬಹಳ ಆಶ್ಚರ್ಯ
ಹೊಸ ಸಂವತ್ಸರವು ಅತೀಂದ್ರಿಯ ವೈದ್ಯನಾಗಿ ಬಂದು ಲೋಕಕ್ಕೆ ಆವಿರಿಸಿರುವ ಕಾರ್ಮೋಡವನ್ನು  ಮಳೆಯಾಗಿ ಸುರಿದು  ಭೂಮಿಯನ್ನು ಪವಿತ್ರ ಮಾಡುತ್ತದೆ ಎಂಬ ನಂಬಿಕೆಯಿಂದ ಎಲ್ಲಾರಿಗೂ ಸರ್ವರಿ ಯುಗಾದಿಯ ಶುಭಾಶಯಗಳನ್ನು ಹಾಗು ಸಮೃದ್ಧವಾದ ಆರೋಗ್ಯವನ್ನು ಕೋರುತ್ತೇನೆ .

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸನಾತನ ''ಸುಧರ್ಮ''

Quantitative Easing!!!

ಮಲ್ಲಿಗೆಯ ಜಿಜ್ಞಾಸೆ