ವಾಸ್ತವಿಕೆಯ ಅಪ್ಪುಗೆ ಅಪ್ಪನಿಗೆ
ಅಮ್ಮನ ಸೆರಗು ಹಿಡುದು ಅಪ್ಪನ ದಾರಿ ನೋಡುವುದು
ಅಮ್ಮನ ಜೊತೆ ಪೇಟೆಗೆ ಹೋದಾಗ ಸಣ್ಣ ಪುಟ್ಟದಕ್ಕೆ ಹಠ ಮಾಡುವ ರೀತಿ
ಅಪ್ಪನೊಂದಿಗೆ ಹೋದಾಗ ಹಟದ ತರ್ಕವೇ ಬೇರೆ
ಬೇಕಾಗಿದ್ದನ್ನು ಕೇಳುವ ಭಾವನಾತ್ಮಕ ರೀತಿ
ಮನೆಗೆ ಬಂದೊಡನೆ ಅಮ್ಮನು ಅಪ್ಪನ ಮೇಲೆ ಸಿಟ್ಟಾಗುವ ಭೀತಿ
ನಾವು ಶಾಲೆಯ ಯಾವ ತರಗತಿಯಲ್ಲಿ ಓದುತ್ತಿದೇವೆ ಎಂಬ ಸುಳಿವಿಲ್ಲದ ತಂದೆ
ಆದರೆ ಪಠ್ಯ ಪುಸ್ತಕದ ಖರೀದಿಗೆ ಸದಾ ಮುಂದೆ
ತಿಂಗಳುಗಳಿಂದಲೇ ಮಾಡಿಸುವರು ತಯಾರಿ
ಪರೀಕ್ಷೆಯ ಸಮಯದಲ್ಲಿ ಶಾಲೆಗೆ ಅಪ್ಪನೊಂದಿಗೆ ಸವಾರಿ
ಪರೀಕ್ಷೆಯ ನಂತರ ಸಮೀಕ್ಷೆ ವಿಮರ್ಶೆ ಫಲಿತಾಂಶಕ್ಕಿಂತಲೂ ತರುವ ಭಯ
ಇರಲಿ ಬಿಡು ಮುಂದಿನದಕ್ಕೆ ಓದು ಏನೇಯಾಗಲಿ ಗಣಿತಕ್ಕೆ ಬರಬೇಕು ಹೆಚ್ಚು ಅಂಕ
ಅಮ್ಮನು ಆ ನೀರಿಕ್ಷೆಯಲ್ಲಿ ಕೂಡುವಳು ನಮ್ಮೊಂದಿಗೆ ರಾತ್ರಿಯ ತನಕ
ಅಮ್ಮನೊಂದಿಗೆ ಅಡುಗೆಯ ಮನೆಯಕೆಲಸದಲ್ಲಿ ಕೈಜೋಡಿಸುವುದು
ಹೆಣ್ಣುಮಕ್ಕಳ ಕಾಳಜಿ ತಂದೆಯ ಪ್ರತಿಯೊಂದು ಕೆಲಸದಲ್ಲಿ
ಮಕ್ಕಳು ದೊಡ್ಡವರಾದಂತೆ ಅವರ ಆರಾಮ ವಿರಾಮದ ವ್ಯವಸ್ಥೆ
ತಾಯಿಯಂತೆ ಮಕ್ಕಳ ಚಿಂತೆ ವ್ಯಕ್ತ ಪಡಿಸದೆ
ತನ್ನ ಹೆಣ್ಣು ಮಕ್ಕಳು ಸ್ವಾವಲಂಬಿಯಾಗುವ ವ್ಯಾವಹಾರಿಕ ಅಭ್ಯಾಸ
ವಿದ್ಯಾಭ್ಯಾಸದ ಪ್ರಾಮುಖ್ಯತೆಯ ಜೊತೆ ಸಾಂಪ್ರದಾಯಿಕ ಸಭ್ಯತೆಯ ಪಾಠ
ಹೆಣ್ಣಿನ ಪ್ರಾಯೋಗಿಕ ವಿಚಾರಗಳು ಜೀವನಶೈಲಿಯ ವಿಷಯಗಳು
ಕುಟುಂಬದ ನಿರ್ಧಾರಗಳಲ್ಲಿ ನಮ್ಮೊಂದಿಗೆ ಚರ್ಚೆ
ನಮ್ಮ ಆಸೆಗಳನ್ನೂ ಊಹಿಸಿ ವೃತ್ತಿ ಕ್ಷೇತ್ರದ ಆಯ್ಕೆಯ ನಿರ್ಧಾರಗಳಿಗೆ ಸಮರ್ಥನೆ
ಫ್ಯಾಮಿಲಿ ಫ್ರೆಂಡ್ಸ್ ಎಷ್ಟು ಮುಖ್ಯವೋ ಸ್ವಾವಲಂಬನೆ ವಿದ್ಯೆಯೇ ಅಷ್ಟೇ ಮುಖ್ಯ ಎನ್ನುವ ನೀನು ಸದಾ
ಅಮ್ಮನು ಭಾವನಾತ್ಮಕ ಹಾಗು ಶಾರೀರಿಕ ಶಕ್ತಿ ಬಲಪಡಿಸಿದರೆ ನೀನು ಪಪ್ಪಾ ನಮ್ಮ ಮಾನಸಿಕ ಶಕ್ತಿಯನ್ನು ಇಮ್ಮಡಿಮಾಡಿದೆ
ಕಾಮೆಂಟ್‌ಗಳು