ಶತಾವತಾರ

ನನ್ನ ಸ್ನೇಹಿತೆಯೊಬ್ಬಳು ಈ ಲೊಕ್ಡೌನ್ ಸಂದರ್ಭದಲ್ಲಿ ತಲೆ ಕೆಟ್ಟು ದಿನನಿತ್ಯ ತನ್ನ ಹೈ ಸ್ಕೂಲ್ ಗೆ ಹೋಗುವ ಮಗ ಹಾಗು ಸದಾ ಆಫೀಸ್ ಕೆಲಸದ್ಲಲಿ ತೊಡಗಿದ್ದ ತನ್ನ ಪತಿಯಿಂದ ಬೇಸರಗೊಂಡು ದಿನಮುಗಿಯುವ ಸಂದರ್ಭದಲ್ಲಿ ಹತಾಶೆಯಾಗಿ ರೌದ್ರಾವತಾರ ತಾಳಿ ತನ್ನನ್ನು ಮಾತಾ ರುದ್ರಮ್ಮ ದೇವಿ ಎಂದು ಕರೆಯಲು  ಪ್ರಾರಂಭಿಸಿದಳು. ಇದರಿಂದ ಪ್ರಭಾವಿತಳಾದ ನಾನು ಅವಳಲ್ಲಿ ಕೋರಿ ಈ ಹೆಸರನ್ನು ನನ್ನ ಹಾಸ್ಯ ಚುಟುಕಗಳಿಗೆ ನಾಮಕರಣ ಮಾಡಿದೆ. ವ್ಯಂಗ್ಯ ಹಾಗು ಹಾಸ್ಯ ಪ್ರವೃತ್ತಿಯುಳ್ಳ ನಾವೆಲ್ಲರೂ ಸಾಂದರ್ಭಿಕ ಹಾಸ್ಯ ಸನ್ನಿವೇಶಗಳು ಲೆಕ್ಕವಿಲ್ಲದಷ್ಟು ಇದ್ದರು ಅದನ್ನು ಚುಟುಕದ ರೂಪಕ್ಕೆ ಅಳವಡಿಸುವುದು ಸ್ವಲ್ಪ ಕಷ್ಟ. ಇದು ನನ್ನ ಪ್ರಪ್ರಥಮ ಪ್ರಯತ್ನ.



1.ಮಕ್ಕಳಿರಲವ್ವ ಮನೆ ತುಂಬಾ ಅಂತ ಹಿರಿಯರು ಹೇಳ್ರಿದ್ರು
ಅವರ ಮಾತು ಕೇಳ್ದೆ ನಾವು ಬರಿ ಎರಡೇ ಮಾಡ್ಕೊಂದೀವಿ
ಮನೆ ತುಂಬಾ ಇದ್ದಿದ್ರೆ ಬಹುಷಃ ಶಾಂತಿ ಇರ್ತಿತ್ತೇನೋ

ಮಾತಾ ರುದ್ರಮ್ಮ ದೇವಿ

2.ಮನುಷ್ಯನ ಸಹಜ ಗುಣಗಳಾದ ಮರೆವು ,ಮನೆ ಕೆಲ್ಸದಲ್ಲಿ ನಿರಾಸಕ್ತಿ, ಬಾಯಾಡಿಸುವುದು ,ಆಲಸ್ಯತನ ಹಾಗು ಸದಾ ಮಲಗುವುದು. ಈ ಪಂಚೆಇಂದ್ರಿಯಗಳನ್ನು ತೆರೆದು ಬಾಳುವನೇ ನಿಜವಾದ ಮಾನವ.
ಜಗತ್ತಿನ ಎಲ್ಲಾ ಜನರು ಮನುಷ್ಯರೇ ಇರುವಾಗ ಏಕೆ ಬದಲಾಗಬೇಕು.ನೀವು ಬದಲಾದರೆ ಪ್ರಳಯ ಆದೀತು ಜೋಪಾನ ..

ಮಾತಾ ರುದ್ರಮ್ಮ ದೇವಿ

3.ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು
ಹಾಗಾದರೆ ತಂದೆ ? ಹೆಡಮಾಸ್ಟರ್..ಮಕ್ಕಳನ್ನೇ ಕೇಳ್ತಾರೆ ಏ ನೀವ್ ಯಾವ್ ಕ್ಲಾಸ್ ಅಂತ !!

ಮಾತಾ ರುದ್ರಮ್ಮ ದೇವಿ

4.ಮನಸ್ಸಿಗೆ ನೆಮ್ಮದಿ ಕೊಡುವ ಕೆಲಸ ಮಾಡಿದ್ರೆ ಮನೆಯವರು ಏನ್ ಮಾಡ್ತಾರೆ ..
ನಮ್ಮ ಆತ್ಮಕ್ಕೆ ಶಾಂತಿ ಕೊಡ್ತಾರೆ ..

ಮಾತಾ ರುದ್ರಮ್ಮ ದೇವಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸನಾತನ ''ಸುಧರ್ಮ''

Quantitative Easing!!!

ಮಲ್ಲಿಗೆಯ ಜಿಜ್ಞಾಸೆ