ವೈಯಕ್ತಿಕ ಸಮಯ
ಕೆಲವು ದಿನಗಳಿಂದ ನನ್ನ ತಲೆಯಲ್ಲಿ ವಿಷಯಗಳ ವಿಸ್ಪೋಟ ಆಗುತಿದ್ದೆ.ಒಂದೆಡೆ ಆದ್ಯತೆಗಳ ಪರಿಚಯವಾದರೆ ಮತ್ತೊಂದೆಡೆ ನನ್ನ ವೈಯಕ್ತಿಕ ಬೆಳವಣಿಗೆ ಆಗುತ್ತಿಲ್ಲ ಹಾಗು "ಮೈ ಟೈಮ್" ಸಿಗುತ್ತಿಲ್ಲವಲ್ಲ ಅನ್ನೋದು ನನ್ನ ಗೋಳು. ಮಕ್ಕಳನ್ನು ಶಾಲೆಗೆ ಕಳಿಸಿ ಮುಂಜಾನೆಯ ಆ ಒಂದ್ ಕಪ್ ಚಹಾದ ಆಸ್ವಾದನೆ ಆಹಾ !! ಎಂತಹ ಅನುಭವ! ಕೇವಲ ೨ ವಾರಗಳು ಆಗಿವೆ ಮಕ್ಕಳು, ಮನೆಯವರು ಎಲ್ಲರು ಮನೆಯಲ್ಲಿ ಇದ್ದಾರೆ .. ನನಗೆ ಇನ್ನೇನು ೩ ವರ್ಷ ತುಂಬುವ ಮಗಳು
ಅವಳು ಹುಟ್ಟುವ ತನಕ ಕೆಲಸ ಮಾಡಿ ,ಈಗ ವಿರಾಮ ತುಗೊಂಡಿದ್ದೆ. ಕ್ವಾಲಿಫೈಡ್ ಅಕೌಂಟೆಂಟ್ ಆದ ನಾನು,ನನ್ನ ಪತಿಯ ಹಾಗು ಕೆಲವು ಸ್ನೇಹಿತರ ಕೆಲಸವನ್ನು ಮಾಡುತಿದ್ದೆ.ಹೀಗಾಗಿ ಕೇಲಸದ ಒತ್ತಡ ಅಷ್ಟೇನೂ ಇರಲಿಲ್ಲ. ನನ್ನ ಮಗಳನ್ನು ನರ್ಸರಿಗೆ ಸೇರಿಸಿ ಕೆಲಸ ಹುಡುಕುವ ಕೆಲಸ ಭರಾಟೆಯಿಂದ ನಡೆದಿತ್ತು.ಆದರೆ ನನ್ನದೇ ಆದ ಸಮಯ ನನಗೆ ಸಿಗಿತ್ತಿತ್ತು. ನನ್ನ ಹವ್ಯಾಸಗಳಿಗೆ ಸಮಯ,ಶಾಂತಿಯಿಂದ ಕೂತು ಮಧ್ಯಾಹ್ನದ ಚಹಾ ಕುಡಿಯುವು ಈಗ ಒಂದು ಯಜ್ಞವೇ ಆಗಿದೆ. ಎರಡು ಮಕ್ಕಳ ತಾಯಿಯಾದ ನನಗೆ, ಮಕ್ಕಳ ವಯಸ್ಸಿನಲ್ಲಿ ೬ ವರ್ಷ ಅಂತರ ಇರುವುದರಿಂದ ಇಬ್ಬರನ್ನು ಸಂಭಾಳಿಸಿವುದು ಕಷ್ಟವಾಗಿದೆ.
ಆಫೀಸಿನಲ್ಲಿ ಎಷ್ಟು ಕೆಲಸವಿದ್ದರೂ ಅದನ್ನು ನಿಭಾಯಿಸಬಲ್ಲ ನಾನು ಮನೆಯಲ್ಲಿ ನನ್ನ ಮಕ್ಕಳನ್ನೇ ಹಿಡಿಯಲು ಸಾಧ್ಯವಾಗುತ್ತಿಲ್ಲ. ನಮ್ಮ ಜೀವನದಲ್ಲಿ ಅತಿ ಮುಖ್ಯವಾದುದು ಅಂದರೆ ನಮ್ಮ ಕುಟುಂಬ ,ಅದರಲ್ಲೂ ನಮ್ಮ ಮಕ್ಕಳು.ಅವರಿಗಾಗಿ ನಾನು ಏನೆಲ್ಲಾ ಮಾಡುತ್ತೇವೆ ಎಷ್ಟು ಕಷ್ಟ ಪಡುತ್ತೇವೆ. ನಮ್ಮ ತಾಯಿಯ ಪ್ರಶ್ನೆ- ನಾನು ಯಾಕೆ ಅಷ್ಟು ಕಷ್ಟ ಪಟ್ಟು ಹೊರಗೆ ಹೋಗಿ ದುಡೀಬೇಕು ಅನ್ನುವುದು. ನನ್ನ ಉತ್ತರ ಸದಾ ಸಿದ್ದ .ಯಾಕೇಂದರೆ ನಾನು ಕಷ್ಟಪಟ್ಟು ಓದಿದಿನಿ ,ಆರ್ಥಿಕ ಸ್ವಾತಂತ್ರ ಬೇಕು, ಮಕ್ಕಳಿಗೆ ಒಳ್ಳೆಯ ಭವಿಷ್ಯ ರೂಪಿಸಬೇಕು ಎಂದು. ನಿನ್ನ ಆರ್ಥಿಕ ಸ್ವಾತಂತ್ರ ನಿನ್ನ ಭವಿಷ್ಯ ರೂಪಿಸುವೆಯಷ್ಟೇ ಅಂತ ನಮ್ಮ ತಾಯಿ ನಂಗೆ ತಿರುಗಿ ಹೇಳಿ ಸುಮ್ಮನಾಗುತ್ತಿದ್ದರು. ನನ್ನ ಕುಟುಂಬ ನನ್ನ ಆದಾಯದ ಮೇಲೆ ಅಧೀನಾಗಿಲ್ಲ. ನನ್ನ ಸ್ವಂತ ಖರ್ಚು ಹಾಗು ನನ್ನ ಆಸೆಗಳನ್ನು ಪೂರೈಸಲು ನಾನು ದುಡಿಯುತ್ತಿದ್ದೆ. ಈ ವಿಷಯದಲ್ಲಿ ನಾನು ಅದೃಷ್ಟವಂತೆ ಎಂದು ಹೇಳಬಲ್ಲೆ .ಏಕೆಂದರೆ ಕೆಲವು ಕುಟುಂಬಗಳಲ್ಲಿ ಇಬ್ಬರು ದುಡಿದರೆ ಮಾತ್ರ ಜೀವನ ನಡೆಸಬಲ್ಲಿ ಪರಿಸ್ಥಿತಿ ಇರುತ್ತದೆ(ಅವರು ನಿಜವಾದ ಶ್ರಮ ಜೀವಿಗಲ್ಲದೆ ಧೈರ್ಯಶಾಲಿಗಳು ಎಂದು ನಂಬಿದ್ದೇನೆ).
ಇಂತಹ ಸಂದರ್ಭದಲ್ಲಿ ನನ್ನ ಸ್ವಪ್ನ ಲೋಕದಲ್ಲಿ ಎಷ್ಟು ಮುಳುಗಿ ಹೋಗಿದ್ದೆ ಎಂದರೆ ಕೊರೊನ ಎಂಬ ಅದೃಶ್ಯ ವ್ಯರಾಣುವಿನಿಂದ ಮುಂಜಾನೆಯ ಜೋರಾದ ಅಲಾರ್ಮ್ನಿ ಶಬ್ದದಂತೆ ಎಚ್ಚರವಾಯಿತು. ಮಾಯಾಲೋಕದ ಸುಖ ಮಬ್ಬಾಯಿತು. 'ಚಿನ್ನ ಚಿನ್ನ ಆಸಾಯ್ ' ಎಂಬ ಹಾಡಿನಂತೆ ನನ್ನ ಬಯಕೆಗಳು ಶಾಸ್ತ್ರೀಯ ಸಂಗೀತ,ಯೋಗ ಹಾಗು ವಾಕಿಂಗ್ ಅಥವಾ ಜಾಗಿಂಗ್ ಹೋಗುವುದು. ಇವೆಲ್ಲ ಪೂರೈಸಲು ಸ್ವಲ್ಪ ಖರ್ಚು ಆಗುತ್ತದೆ ನೋಡಿ.. ಇಷ್ಟು ವರ್ಷ ಕಷ್ಟಪಟ್ಟು ಕಲಿತ ವಿದ್ಯೆ ಸುಮ್ಮ್ನೆ ಮನೆಯಲ್ಲಿ ಕುಳಿತು ಪೋಲು ಮಾಡುವುದೇ ?ಅದು ಪ್ರಗತಿಶೀಲ ಮಹಿಳೆಯ ಲಕ್ಷಣವೇ ? ನಮ್ಮದೇ ಆದ ಒಂದು ವ್ಯಕ್ತಿತ್ವ ಬೆಳಸಿಕೊಳ್ಳಬಾರದೇ? ಮಕ್ಕಳು ದೊಡ್ಡವರಾದ ಮೇಲೆ ನಮಗೆ ವಯಸ್ಸು ಆಗಿರ್ತದೆ ಆಗ ನಮಗೆ ಯಾರು ಕೆಲಸ ಕೊಡ್ತಾರೆ ? ಅಬ್ಬಾ ! ಎಷ್ಟೆಲ್ಲಾ ಗೊಂದಲಗಳು.. ಆದರೆ ಆಫೀಸಿನ ಟೀಮ್ ಡಿನ್ನರ್,ಗೆಳೆತಿಯೊಡನೆ ಶಾಪಿಂಗ್ ಅದಕ್ಕಾಗಿ ಸ್ವಲ್ಪ ಹೊಸ ಬಟ್ಟೆಗಳ ಖರೀದಿ,ಅಂದವಾದ ವಸ್ತುಗನ್ನು ಹಾಕೊಂಡು ಮೆರೆಯುವ ಆಸೆ..ಸುಮ್ಮನೇನಾ ಮತ್ತೆ ..ಇವಕೆಲ್ಲ ದುಡ್ಡು ಪ್ರತಿಬಾರಿ ಪತಿರಾಯರನ್ನು ಹೇಗೆ ಕೇಳುವುದು ನೀವೇ ಹೇಳಿ ಅದಕ್ಕೆ ಕೆಲಸ ಮಾಡಬೇಕು(ಇದು ತಮಾಷೆಗಾಗಿ ಮಾತ್ರ).
ಗೃಹಿಣಿ ಆಗಿದ್ದ ನಮ್ಮ ತಾಯಿಯ ಜೀವನ ಭಾಳ ಸರಳವಾಗಿತ್ತು. ಅವರಿಗೆ ನನ್ನತರ ಆಸೆಗಳು ಇರ್ಲಿಲ್ಲ ಅನ್ಕೋಬೇಡಿ ಖಂಡಿತವಾಗಿ ಇತ್ತು. ಆದರೆ ನಮ್ಮ ಅದೃಷ್ಟ. ಈಗ ನಮ್ಮ ಗಂಡದಿಂರು ಅಡಿಗೆ ಅಥವಾ ಮನೆ ಕೆಲಸ ಮಾಡಿದ್ರೆ ಯಾರು ಏನೂ ಅನ್ನುವುದಿಲ್ಲ. ಆಗ ಹಂಗಿರಲಿಲ್ಲ. ಮಹಿಳೆಯರು ಎಲ್ಲಾ ಕ್ಷತ್ರದಲ್ಲೂ ಮುಂದುವರೆಯುತ್ತಿದ್ದಾರೆ .ಎಷ್ಟು ಒಳ್ಳೆಯ ಸಂಗತಿಯಲ್ವಾ. ನನಗೆ ಈ ಎರಡು ವಾರಗಳ್ಳಲ್ಲಿ ಎಲ್ಲವನ್ನು ನಿಭಾಯಿಸಲು ಸಾಧ್ಯವಾಗುತ್ತುಲ್ಲಾ. ಕೆಲವೊಮ್ಮೆ ಹೊರಗೆ ಹೋಗಿ ಫುಲ್ ಟೈಮ್ ಕೆಲಸ ಮಾಡುವ ಮಹಿಳೆಯನ್ನು ನೋಡಿ ಈರ್ಷೆ ಆಗುತ್ತದೆ . ಅವರು ಹೇಗೆ ಎಲ್ಲಾ ನಿಭಾಯಿಸುತ್ತಾರೆ ಎಂದು ಕಲ್ಪಿಸಿಕೊಂಡರೆ ನಡುಕ ಹುಟ್ಟುತ್ತದೆ. ಎಷ್ಟು ಹೆಚ್ಚು ಸಮಾಧಾನ ಗುಣವನ್ನು ಬೆಳೆಸಿಕೊಳ್ಳಬೇಕು ಅಂತ ಅಂದುಕೊಳ್ಳುತ್ತೀನಿ ಅಷ್ಟೇ ವಿಫಲಳಾಗುತ್ತಿದ್ದಿನಿ. ಈಗಿನ ಸಂದರ್ಭದಲ್ಲಿ ಉಚಿತ ಅನುಚಿತಗಳ ಗೊಂದಲದಲ್ಲಿ ದಿನಗನ್ನು ಕಳೆಯುತ್ತಿದಿನಿ.
ಈಗಿನ ಪರಿಸ್ಥಿತಿಯಲ್ಲಿ ಫುಲ್ ಟೈಮ್ ಕೆಲಸ ಮಾಡುವ ನನ್ನ ಸ್ನೇಹಿತೆ ನನ್ನ್ನ ಹತ್ತಿರ ದುಃಖ ಹಂಚಿಕೊಂಡಳು. ಆದರೆ ಈ ಸಮಯ ಈದೇರೀತಿ ಇರುವುದಿಲ್ಲವಲ್ಲ. ಇದು ತಾತ್ಕಾಲಿಕ. ನಾನು ಆಸ್ತಿಕಳು. ನನಗೆ ಆ ಭಗವಂತ ಎಲ್ಲವನ್ನು ಬೇಗನೆ ಸರಿ ಮಾಡುತ್ತಾನೆ ಎಂಬ ನಂಬಿಕೆ ಇದೆ. ಎಷ್ಟೆಲ್ಲಾ ಧನಾತ್ಮಕ(ಪಾಸಿಟಿವ್-ಶಬ್ದಕೋಶದಿಂದ) ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸುರಿಮಳೆ ಆದರೂ ನನ್ನ ಮನಸ್ಸಿನಲ್ಲಿ ಏನೋ ತಳಮಳ ,ಪ್ರಕ್ಷುಬ್ಧತೆ.. ಯಾಕಿಆತಂಕ .. ನಾನು ಏನು ಕಳೆದುಕೊಳ್ಳುತ್ತಿದ್ದೇನೆ? ಮಧ್ಯಾಹ್ನ ಆಗುತ್ತಿದಂತೆ ಸುಸ್ತು ,ಆಯಾಸ ! ಹೇಗೆ ..ಅಂತಹ ಯಾವ ಗುಡ್ಡ ಕಡಿದ್ದೀನಿ? ಮಕ್ಕಳು ಮಾಡುವ ಸದ್ದು ಗದ್ದಲವೋ ಅಥವಾ ಮೂರು ಹೊತ್ತು ವಿಧವಿಧವಾದ ಅಡಿಗೆ ಮತ್ತು ಪತ್ರೆ ಮಾಡುವ ತ್ರಾಸೋ ? ಗೊತ್ತಿಲ್ಲ .. ನಿರಂತರವಾಗಿ ಅಮ್ಮ ಅಮ್ಮಾಎನ್ನುವ ಹಿನ್ನೆಲೆ ಸಂಗೀತ ,ಕೆಲವೊಮ್ಮೆ ಕಿರಿಕಿರಿ ಮಾಡುತ್ತದೆ.
ದಿನದಿಂದ ದಿನ ಯಾವ ಅದೃಶ್ಯ ಶಕ್ತಿ ನನ್ನ ಚಲಿಸುತ್ತಿದೆ ಗೊತ್ತಿಲ್ಲ . ನನ್ನ ಸಂಯಮವನ್ನು ಕಳೆದುಕೊಳ್ಳದಿರುವಂತೆ ಏನು ಮಾಡಬೇಕು? ಇವಕೆಲ್ಲ ಒಂದೇ ಉತ್ತರ ಎಂದು ನನಗೆ ಅನಿಸಿತು .. "ಪ್ರಸ್ತುತ ಪರಿಸ್ಥಿತಿಯನ್ನು ಸ್ವೀಕರಿಸುವುದು". ಬಹಳ ಸುಲಭವಾದ ಉಪಾಯವಲ್ಲವೇ! (ನಗುತ್ತ) ..ಸ್ವೀಕರಿಸುವುದು ಎಂದರೆ ನನ್ನ ಮನಸ್ಸಿಗೆ ಪ್ರತಿ ಹತ್ತು ನಿಮಿಷಕ್ಕೆ ನೆನಪಿಸುತ್ತಿರುವುದೇ ಅಥವಾ ನನ್ನ ಮನೆಯಲ್ಲಿ ನನ್ನ ಪರಿವಾರದೊಡನೆ ಎಲ್ಲಾ ಸೌಲಭ್ಯಗಳೊಂದಿಗೆ ಆರಾಮಿಗಿ ಇರುವ ಈ ಕ್ಷಣಗಳು ಎಷ್ಟು ಅಮೂಲ್ಯವಾದುದು ಎಂಬ ಪರಿವಿಲ್ಲದ ಮನಸ್ಥಿತಿಯೋ ? ನಾನು ಈ ಕಳೆದ ತಿಂಗಳು ಹೇಗೆ ಇದ್ದೆನೋ ಭಾಗಶಃ ಈಗಲೂ ಹಾಗೆ ಇದ್ದೀನಿ ಸ್ವಲ್ಪ ಅಡ್ಜಸ್ಟ್ ಮಾಡ್ಕೊಂಡಿದ್ದೀನಿ ಅಷ್ಟೇ.
ಬದಲಿಗೆ ಕೊನೆಯಿಲ್ಲದ ನನ್ನ ಮಕ್ಕಳ ಅಪ್ಪುಗೆ ,ಮುತ್ತು ಹಾಗು ಹೊಗಳಿಕೆಗಳು. ಮಕ್ಕಳು ಎಷ್ಟು ಒಳ್ಳೆಯ ಮಾತುಗನ್ನು ,ನಮ್ಮಲ್ಲಿನ ಆತ್ಮ ವಿಶ್ವಾಸವನ್ನು ಪುನರ್ಸ್ಥಾಪಿಸುತ್ತಾರೆ ಅಂದರೆ ಅವರ ಕ್ರಿಯೆಗಳು ಒಂದು ಅದ್ಭುತವೇ ! ಮಕ್ಕಳ ಬೆಳೆವಣಿಗೆ ಅನುಭಿಸಲು ಒಂದು ಸದವಕಾಶ ಎಂದರೆ ತಪ್ಪಾಗಲಾರದು.
ಮಕ್ಕಳೊಡನೆ ಹೆಚ್ಚು ಸಮಯ ಕಳೆಯುವುದು ನಾನೆe, ಆದರೆ ಮಕ್ಕಳು ಶಾಲೆ ಮತ್ತಿತರ ಆಟೋಟ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವ್ಯಸ್ತರಾಗಿರಿತ್ತರೆ. ಹೀಗಾಗಿ 24 ಘಂಟೆಗಳು ಅವರೊಡನೆ ಕಳೆಯುವ ಅವಕಾಶ ಕಡಿಮೆ. ಎಷ್ಟು ಬೇಗ ದೊಡ್ಡವರು ಆಗ್ತಾರೆ ಅಂತ ಗೊತ್ತೆಯಾಗುವುದಿಲ್ಲ. ಮಕ್ಕಳು ನಮಗಿಂತ ಹೆಚ್ಚು ತಿಳುವಳಿಕೆ ಉಳ್ಳವರು ಮತ್ತು ಸಂದರ್ಭಕ್ಕೆ ಹೊಂದುಕೊಂಡು ಹೋಗುವ ಗುಣಗಗಳ್ಳು ಹೊಂದಿರುತ್ತಾರೆ. ಅವರೊಡರೆ ಹೆಚ್ಚು ಸಮಯ ಕಳೆಯುವುದರಿಂದ ಬೇಡಲ್ಲದ ಯೋಚನೆ, ಮನಸ್ಸಿಗೆ ಕಷ್ಟವಾಗುವ ಕಲ್ಪನೆಗಳು ಬರುವುದಿಲ್ಲ. ಸುತ್ತ ಮುತ್ತಲು ಸದಾ ನಗೆ ಬುಗ್ಗೆ , ಅಮ್ಮನ ಜಪ ಹಾಗೂ ನಮ್ಮನ್ನು ಸದಾ ಕಾಲ ಅವಲಂಬಿಸಿರುವ ಸುಂದರ ಜೀವಿಗಳ ಅನುಭವ.ಮಕ್ಕಳಿಗೆ ಅತೀ ಮಹತ್ವವಾದುದು ಎಂದರೆ ನಮ್ಮ ಸಮಯ. ಅವರ ಜೊತೆ ಇದ್ದರೆ ಇನ್ನಿತರ ಯಾವುದೇ ವಸ್ತುಗಳನ್ನು ಅವರು ಹೆಚ್ಚಾಗಿ ಬೇಡುವುದಿಲ್ಲ. ಮಕ್ಕಳಿಗಿರುವಷ್ಟು ದೇಹ ಶಕ್ತಿ ನಮಗಿರುವುದಿಲ್ಲ.
ಈಗಿನ ಸನ್ನಿವೇಶ ಎಲ್ಲರಿಗು ಒಂದೇ. ನನ್ನ ಪರಿಸ್ಥಿತಿ ಏನಿದೆಯೋ ಅದೇ ಇಡೀ ಜಗತ್ತಿನದು ಹೀಡಿದ್ದಮೇಲೆ ನನ್ನ ಕಷ್ಟ ಏನು ಹೆಚ್ಚಿನದು.. ನಾನು ಮಾಡಬೇಕಾಗಿದ್ದು ಒಂದೇ ಮನವರಿಕೆ ನನ್ನ ಪರಿವಾರವೇ ನನ್ನ ಸಮಯ ...
ಕಾಮೆಂಟ್‌ಗಳು