ಗೃಹ ಬಂಧನ

ನೆನಪಿನ ಬಾವಿಯಲ್ಲಿ ಇಣಕಿ ನೋಡಿದಾಗ ನೀರಿನ ಮೇಲಿದ್ದ ಒಣಗಿದ ಎಲೆಗಳು,  ಧ್ಹೋಳು ಎಲ್ಲವು ಕೆಳಗಿದ್ದ ನೀರನ್ನು ಮುಚ್ಚಿತ್ತು. ಸ್ವಚ್ಛ ನೀರು  ನೋಡ ಬಯಸಿ ನಾನು ಒಂದು ಕಲ್ಲನ್ನು ಎಸೆದಾಗ ನೀರು ಅಷ್ಟೇ ಅಲ್ಲದೆ ಬಾವಿಯ ಆಳವು ಗೊತ್ತಾಯಿತು. ನಮಗೆ ತಿಳಿಯದೆ ನಮ್ಮ ಮನಸ್ಸಿನ ಆಳದಲ್ಲಿ ಅದೆಷ್ಟೋ ನೆನಪುಗಳನ್ನು ಕೂಡಿಟ್ಟು ಅವುಗಳ ಮಹತ್ವ ನಮಗೆ ಆಗ ತಿಳಿಯದೆ ಈಗ ಸಮಯ ಬಂದಾಗಲೆಲ್ಲ ಅವುಗಳ ಆಳ ತಿಳಿಯುತ್ತದೆ.
ನಮ್ಮ ತಾಯಂದಿರು ಊಟ ಬಡಿಸಿ ಎಲ್ಲರ ಊಟ ಮುಗಿದಮೇಲೆ ತಾವು ಊಟ ಮಾಡುವುದು  ಸಾಮಾನ್ಯ ಪದ್ಧತಿ. ನಾವೆಲ್ಲ ಆಗ ಅವರು  ಮಕ್ಕಳು ಗಂಡಸರು ಹಾಗು ಹಿರಿಯರಿಗೆ ಊಟ ಬಡಿಸುವ ಮೂಲಕ  ಮರ್ಯಾದೆ ಕೊಡುತ್ತಾರೆ ಅಥವಾ  ಹೆಂಗಸರ ಕೆಲಸವೇ ಅಷ್ಟು ಅಂತ ತಿಳಿದದ್ದ್ರೆ ಅದರ ಮತ್ತೊಂದು ಅರ್ಥ ನನಗೆ ಈತ್ತೀಚೆಗಷ್ಟೇ ತಿಳಿಯಿತು. ನಮ್ಮ ತಾಯಿ ಎಲ್ಲರಿಗು ಊಟ ಬಡಿಸುವ ಮೂಲಕ ತಾವು ಎಷ್ಟು ಊಟ ಮಾಡುತ್ತಾರೆ ಅಷ್ಟು ಉಳಿಸಿ, ಉಳಿದದನ್ನು ಎಲ್ಲರಿಗೆ  ಹಂಚಿ ,ಅನ್ನ ವ್ಯರ್ಥವಾಗದಂತೆ ನೋಡಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ತಂಗಳು ಪೆಟ್ಟಿಗೆ ಇರುತ್ತಿರಲ್ಲಿ,  ತಾಜಾ ಹಾಗು ಬಿಸಿ ಊಟ ಮಾಡುವುದು ಆರೋಗ್ಯಕ್ಕೆ ಹಿತಕರ ಎಂಬ ನಂಬಿಕೆ. ಈ ಲೇಖನ ಬರೆಯುವ ಸಂದರ್ಭದಲ್ಲಿ ಪ್ರಪಂಚವನ್ನೇ ನಡುಗಿಸಿದ್ದ ಅದೃಶ್ಯವಾದ ಒಂದು ವೈರಾಣು ಕೋವಿಡ್ ೧೯. ತಿಂಗಳು ಗಟ್ಟಲೆ ಗೃಹ ಬಂಧನದಲ್ಲಿ ಇಡೀ ಪ್ರಪಂಚ ಇಟ್ಟಿತ್ತು.
ಪೀಳಿಗೆಗಳು ಬದಲಾಗುತ್ತಿದಂತೆ ಆದ್ಯತೆಗಳು ಬದಲಾಗಿತ್ತವೆ. ನಮ್ಮ ತಾಯಿ,ದೊಡ್ಡಮ್ಮ ,ಚಿಕ್ಕಮ್ಮ ಎಲ್ಲರು ಆಗಿನ ಕಾಲದ ಪದವೀದದರು ಆಗಿದ್ದರೂ,  ಮನೆಯ ಹೊರಗೆ ಹೋಗಿ ಕೆಲಸ ಮಾಡುವ ಅವಶ್ಯಕತೆ ಅವರಿಗೆ ಕಾಣ ಬರಲಿಲ್ಲ. ನಾವೆಲ್ಲರೂ ಶ್ರೀಮಂತಿಕೆಯಲ್ಲಿ ಬೆಳೆಯಲಿಲ್ಲ. ನನ್ನ ಮುಂದಿನ ಮಾತುಗಳು ಪ್ರಗತಿಶೀಲ ಮಹಿಳೆಯ ಲಕ್ಷಣಗಳನ್ನು ಕೊಡುತ್ತವೋ ಇಲ್ಲವವೋ ಗೊತ್ತಿಲ್ಲ ಆದರೆ ಕೆಲವು ಸನ್ನಿವೇಶ ಹಾಗು ಸಂದರ್ಭಗಳು ನನ್ನ ಪ್ರಸ್ತುತ ಜೀವನಶೈಲಿಯನ್ನು ಬದಲಾಯಿಸಲು ಯೋಚನೆ ಮಾಡುವಂತೆ ಮಾಡಿದೆ.
 ನಮ್ಮ ತಂದೆಯ ಮಾಸಿಕ ಆದಾಯ ಕೇವಲ 500 ರೂಗಳು .ಅದರಲ್ಲೇ ಮನೆ ಬಾಡಿಗೆ ,ನಮ್ಮ ಶಾಲಾ ಖರ್ಚು ,ತಿಂಗಳ ದಿನಸಿ ಮತ್ತು ಇನ್ನಿತರ ವೆಚ್ಚಗಳು. ಆಗಿನ ಕಾಲದಲ್ಲಿ ಎಲ್ಲವು ಇತಿಮಿತಿಯಲ್ಲಿ ಇರುತ್ತು. ಆದರೂ ಮನೇನಡೆಸುವುದು ಆಗಲು ಕಷ್ಟವೇ ಇತ್ತು. ಅನಿರೀಕ್ಷಿತ ಬಂಧು ಮಿತ್ರರರ ಆಗಮನ ,ಹಬ್ಬ ಹರಿದಿನಗಳ ಖರ್ಚು ಎಲ್ಲವೂ  ನೀಗಿಸುವುದು ಒಂದು  ಸವಾಲೇ ಆಗಿತ್ತು  ..ಆದರೆ ನಮಗೆ ಎಂದು ಇವೆಲ್ಲರ ಬಗ್ಗೆ ಸ್ವಲ್ಪವೂ ಸುಳಿವಿರುತ್ತಿರಲಿಲ್ಲ. ಮದುವೆ ಮುಂಜವಿ ಸಮಾರಾಧನೆ ಸಂದರ್ಭದಲ್ಲಿ ಕೆಲವೊಮ್ಮೆ  ನಾವು ಹೋಗುತ್ತಿರಲಿಲ್ಲ ಏಕೆಂದರೆ ಹಬ್ಬಗಳು ಹಾಗು ಹೆಚ್ಚಿನ ವೆಚ್ಚದಿದ್ನ ಮದುವೆ ವರವಧುವಿಗೆ ಅಥವಾ ಮನೆಯವರಿಗೆ ಉಡುಗೊರೆ ಕೊಡುವಷ್ಟು ದುಡ್ಡು ಇರುತ್ತಿರಲಿಲ್ಲ. ನಮ್ಮ ತಾಯಿ ಯಾವುದಾರೂ ನೆವ ಮಾಡಿ ಕಾರ್ಯಕ್ರಮವನ್ನು ತಪ್ಪಿಸುದ್ದಾದ್ರೂ ಅಥವಾ ಮನೆಯಿಂದ ಒಬ್ಬರೇ ಹಾಜರಾಗುತ್ತಿದ್ದರು. ಆದರೆ ನಮ್ಮ ಅವಶ್ಯಕತೆಗಳಿಗೆ ಯಾವತ್ತೂ ಕೊರತೆ ಬಂದಿರಲಿಲ್ಲ. ಹೊಸ ಬಟ್ಟೆ ,ಶಾಲಾ ಪುಸ್ತಕಗಳು ಮತ್ತು ಇನ್ನಿತರ ವಸ್ತುಗಳಿಗೆ ಬರ ಇರಲಿಲ್ಲ. ತಂದೆ ತಾಯಿ ಇಬ್ಬರು ದುಡಿಯುವ ಮಕ್ಕಳ ಹತ್ತ್ರ ಎಷ್ಟು ಆಟಿಕೆಗಳು ,ಬಟ್ಟೆಗಳು ಇರೊತ್ತಿದ್ದವೋ  ಅಷ್ಟು ಇರುತ್ತಿರಲ್ಲಿ ಆದ್ರೆ ಹೂ ಕೇರ್ಸ್ !! 
ತಂದೆಗೆ  ಕೆಲಸದ ಒತ್ತಡ ಇದ್ದರು ಅದು ನಮಗೆ ಎಂದು ತಿಳಿಯುತ್ತರಿಲ್ಲ. ಸಾಂಪ್ರದಾಯಿಕ(ಕನ್ಸರ್ವೇಟಿವ್) ಜೀನನಶೈಲಿ ಆದ ನಮ್ಮೆಲ್ಲರ ಬದುಕಿನಲ್ಲಿ  ಒಂದು ರೀತಿಯ ಶಾಂತತೆ ಇತ್ತು.ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದಷ್ಟೇ ಅವರ ಧ್ಯೇಯ ಇತ್ತೇ ಹೊರತು ಅವರು ಮುಂದೆ ನಾವು ಏನಾಗುತ್ತೀವಿ ಎಂದು ಅಷ್ಟು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ನಾವು ಒಳ್ಳೆಯ ದಾರಿ ಹಿಡಿದು ನಮ್ಮ ಭವಿಷ್ಯ ನಾವೇ ನಿರೂಪಿಸಿಕೊಳ್ಳುತ್ತೇವೆ ಎಂಬ ನಂಬಿಕೆ ಇರುತ್ತಿತ್ತು.ನಾವು ದೊಡ್ಡವರಾದ ಮೇಲೆ ಇಂಜಿನಿಯರಿಂಗ್ ಅಥವಾ ಮೆಡಿಕಲ್ ಸೀಟ್ ಬಗ್ಗೆ ಬಹಳ ಆತಂಕ ಇತ್ತು ಬಿಡಿ.ನಾನು ಎರಡು ಆಗಲಿಲ್ಲ ..
ನಮ್ಮ ತಾಯಿಗೆ ನಮ್ಮಂತೆ ಎಷ್ಟು ಡಿಗ್ರಿ ಮಾಡಿದೀವಿ ಕೆಲಸಕ್ಕೆ ಹೋಗ್ಲೇಬೇಕು ಎಂಬ ಛಲ ಇರ್ಲಿಲ್ಲ. ನಾವೆಲ್ಲ ಒಳ್ಳೆಯ ಗುಣಗಳನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ಕೊಡುವಂತೆ ನಮ್ಮನ್ನು ಬೆಳಸಿದಿರು. ಪ್ರಗತಿಶೀಲ ಮಹಿಳೆ ಹಾಗು  ಜವಾಬ್ದಾರಿ ಪೋಷಕರ ಲಕ್ಷಣ ಎಂದು ನನಗೆ ಈಗ ಅನಿಸುತ್ತಿದೆ. ಕಡಿಮೆ ಆದಾಯದಲ್ಲಿ ಹೇಗೆ ಜೀವನ ಸಾಗಿಸುವುದು ಎಂಬ ಭೀತಿ ನನ್ನ ಕೆಲವು  ಸ್ನೇಹಿತೆಯರಿಗೆ ಬಂತು(ಕಾಂಟ್ರಾಕ್ಟಿಂಗ್ ಮಾಡುವ ಜನ ತಮ್ಮ ಕೆಲಸ ಅಕಾಲಿಕವಾಗ ಕೊನೆಗೊಂಡಾದಾಗ) ಹಾಗೆ ಕೆಲವರು ಈ ಕಠಿಣ ಸಮದಲ್ಲಿ ನಿಶ್ಚಲವಾಗಿದ್ದರು.
ಅನಗತ್ಯ ಖರ್ಚು, ಅಮಿತ ಹೋಟೆಲ್ ಊಟ ,ಅಗತ್ಯವಿಲ್ಲದ ವಸ್ತುಗಳ ಖರೀದಿ ಇವೆಲ್ಲದರ ಬಗ್ಗೆ ಯೋಚನೆ ಮಾಡುವಂತೆ ಜೀವನದ  ಈ ೨ವಾರಗಳು ನನಗೆ ತಿಳಿಸಿದೆ. ನಾವು ಕಲಿತಂತೆ ಮಕ್ಕಳು ಕಲಿಯುತ್ತಾರೆ .. ನಮ್ಮ ಅಭ್ಯಾಸಗಳು ,ರೂಢಿ ಮಾಡಿಕೊಂಡಿರುವ ರೇಖನಿ ಸರಳ ಹಾಗು ಸೂಕ್ತವಾಗಿರಬೇಕು. 
ಪ್ರತಿಯೊಂದು ಸಾಮಾಜಿಕ ಕಾರ್ಯಕ್ರಮಕ್ಕೆ ಅಂದವಾಗಿ ತಯಾರಾಗಬೇಕು ಎಂಬ ಆಸೆ ಎಲ್ಲಾ ಮಹಿಳೆಯರಲ್ಲೂ ಇರುತ್ತದೆ ಆದ್ರೆ ಪ್ರತಿಬಾರಿಯೂ ಹೊಸ ಉಡುಗೆ, ಆಭರಣ ಖರೀದಿ  ಆವಶ್ಯಕವೇ? ಪ್ರತಿ ವಾರ ಹೊರಗೆ ಊಟಕ್ಕೆ ಹೋಗುವುದು ಉಚಿತವೇ? ದಿನನಿತ್ಯ ಅಡಿಗೆ ಮಾಡಿ ಹಾಗು ಆಫೀಸಿಗೆ ಹೋಗಿ ರೋಸುಹೋಗಿರುವ ಮಹಿಳೆಯ ಕಷ್ಟ ನನಗೆ ಅರ್ಥವಾಗಿತ್ತದೆ.
ನಮ್ಮ ಮನೆಯ ಅಟ್ಟದ ಮೇಲೆ ಸುಮಾರು ೧೦ ದೊಡ್ಡ ರಟ್ಟಿನ ಡಬ್ಬಿಗಳಲ್ಲಿ ಸಾಮಾನು ಇವೇ.. ಸುಮಾರು ೩ ವರುಷಗಳಿಂದ ಅವುಗಳನ್ನು ತೆಗೆದು ನೋಡಿಲ್ಲ. ಇದರ  ಅರ್ಥ ಅದರಲ್ಲಿರುವ ಯಾವುದೇ ಸಾಮಾನಿನ ಅವಶ್ಯಕತೆ ಇಲ್ಲ. ಅನವಶ್ಯಕ ವಸ್ತುಗಳ ಮೇಲೆ ಅದೆಷ್ಟು ದೊಡ್ದು ಸುರದಿದ್ದೀವಿ? ಬೇಕು ಬೇಡಗಳ ವ್ಯಾಖ್ಯಾನ ನಾನು ತಿಳಿದುಕೊಂಡು ನಮ್ಮ ಮಕ್ಕಳಿಗೆ ತಿಳಿಸಬೇಕು. 
ಮನೆಯಲ್ಲಿ ಕುಳಿತುಕೊಂಡು ಬರುವ ಮುಂದಿನ ದಿನಗಳ ಬಗ್ಗೆ ಯೋಚಿಸುವಾಗ ನನಗೆ ನನ್ನ ಬಾಲ್ಯದ ದೃಶ್ಯಗಳೇ ಕಣ್ಣ ಮುಂದೆ ಬರುತ್ತಿವೆ... ಆಗ ಅವುಗಳ ಆಳವಾದ ಅರ್ಥವನ್ನು ತಿಳಿಯದೆ ಇದ್ದೆ.ಆದರೆ ಈಗ ಸ್ವಲ್ಪ ಮಟ್ಟಿಗೆ ಪ್ರಭುದ್ಧತೆ ಬಂದು(ಬಂದಿದೆ ಅಂದುಕೊಳ್ತೀನಿ )  ಅವುಗಳ ತಾತ್ಪರ್ಯ ಕಂಡುಹಿಡಿಯಲು ಹೊರಟಿದ್ದೇನೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸನಾತನ ''ಸುಧರ್ಮ''

Quantitative Easing!!!

ಮಲ್ಲಿಗೆಯ ಜಿಜ್ಞಾಸೆ