ಯಶಸ್ಸಿನ ಉಡುಗೊರೆ

ನನ್ನ ೩೭ ನೇ ಹುಟ್ಟುಹಬ್ಬ ಅಂದರೆ ೩೭ ಮುಗಿತು ೩೮ಕ್ಕೆ ಮುನ್ನಡೆತ್ತಿದಿನೋ ಅಥವಾ ತೆವಳುತ್ತಿದಿನೋ  ಅಥವಾ ನುಗ್ಗತಾಇದೀನೋ ಗೊತ್ತಿಲ್ಲ. ಒಟ್ಟಿನಲ್ಲಿ ಸಮಯ ಮಾತ್ರ ಮಿಂಚಿನ ಗತಿಯಲ್ಲಿ ಚಲಿಸುತ್ತಿದೆ. ನನ್ನ ೧೫ನೆ ಹುಟ್ಟುಹಬ್ಬದಂದು ನನ್ನ ಭವಿಷ್ಯದ ಬಗ್ಗೆ ಕನಸು ಏನಿತ್ತೋ ಎನ್ನುವುದು ಈಗ ನೆನಪಿಸಿಕೊಂಡರೆ ನಗುಬರುವುದಲ್ಲೆದೆ ನಾನು ಬೆಳಸಿಕೊಳ್ಳುವ ವ್ಯಕ್ತಿತ್ವದ ಬಗ್ಗೆ ಒಂದು ರೀತಿ ವಿಚಿತ್ರವೆನಿಸುತ್ತದೆ. ನಮ್ಮ ಜೀವದಲ್ಲಿ ಸ್ನೇಹೋತರ  ಸಂಬಂಧಿಕರ ಮಹತ್ವ ಎಷ್ಟು ಮುಖ್ಯ ಎಂದು ಎಲ್ಲರಿಗೆ ತಿಳಿದಿದೆ. ಪ್ರಾಯದಲ್ಲಿ ನನ್ನ ಸ್ನೇಹಿತೆಯರ ದೊಡ್ಡ ಮನೆ, ಕಾರು ಎಲ್ಲವನ್ನು ನೋಡಿ ಸಹಜವಾಗಿ ಪ್ರಭಾವಿತಳಾಗಿ ನಾನು, ಭವಿಷ್ಯದಲ್ಲಿ ಒಳ್ಳೆಯ ನೌಕರಿ ಹಿಡಿದು ಭೌತಿಕ ಐಷಾರಾಮಿನ ವಸ್ತುಗಳಿಂದ ಆರಾಮಾಗಿ ಜೀವನ ನಡೆಸುವ ಕನಸನ್ನು ಕಂಡಿದ್ದೆ.ಅದಕ್ಕೆ ತಕ್ಕಂತೆ ಸಾಕಷ್ಟು ಕಷ್ಟು ಪಟ್ಟು ನನ್ನ ವಿದ್ಯಾಭ್ಯಾಸ ಮುಗಿಸಿ ಈಗ ಆ ವಸ್ತುಗಳೆಲ್ಲ ನನ್ನ ಹತ್ತಿರ ಇದ್ದರೂ ಅದರಮೇಲಿನ ಮೋಹವು ಕಡಿಮೆ ಆಗಿದಿಯೋ ಅಥವಾ ಅವುಗಳ ಮಹತ್ವವು ತಿಳಿದಿದೆಯೋ,ಅವುಗಳ ಸ್ವಾಮ್ಯದಿಂದ ಹೆಮ್ಮೆಯೇನು ಆಗುತ್ತಿಲ್ಲ.

೩೮ನೆ ವಯಸ್ಸಿನಲ್ಲಿ ಮನವರಿಕೆಯಾದ ಹುಟ್ಟುಹಬ್ಬದ ಉಡುಗೊರೆ ಅರ್ಥ. ಈಗ ನಾನು ಪ್ರಭಾವಿತಳಾದರೆ ಅದು ಒಬ್ಬರಲ್ಲಿ ಇರುವ ಒಳ್ಳೆಯ ಗುಣ, ಒಬ್ಬ ಯೋಗಿ , ಒಬ್ಬ ಧ್ಯಾನಿ , ಸಭ್ಯ ಗುಣವುಳ್ಳ ಮಕ್ಕಳ ತಂದೆ ತಾಯಿ ,ಅನನ್ಯ ಕಲೆಯಿರುವ ವ್ಯಕ್ತಿ , ಕಠಿಣ ಪರಿಶ್ರಮದಿಂದ ವ್ಯಕ್ತಿತ್ವ ರೂಪಿಸಿಕೊಂಡಂತಹ ವ್ಯಕ್ತಿ. ಹೀಗೆ ಹಲವಾರು ಮುಖಹೊಂದಿರುವ ಸಾಧನೆಯ ವ್ಯಾಖ್ಯಾನ ಬದಲಾಗಿದೆ. ನನ್ನ ತಂದೆ ತಾಯಿಯರ ಬಗ್ಗೆ ಸದಾ ಹೆಮ್ಮೆ ಪಡುವ ಹಾಗು ಪ್ರಭಾವಿತಳಾದ ನಾನು,ಅವರು ಹೇಳುವ ವಿವೇಕದ ಮಾತುಗಳು ಈಗಲೂ ನನ್ನನ್ನು ಉತ್ತಮ ವ್ಯಕ್ತಿತ್ವ ಹೊಂದಲು ಸಹಾಯಕರವಾಗಿದೆ.

ಮನೆಯಾಚೆ ಹೋಗದ ಸಂದರ್ಭದಲ್ಲಿ ನಾನು ಗಳಿಸಿದ ಪದವಿ ಹಾಗು ಭೌತಿಕ ಸಂಪತ್ತು ಹುಟ್ಟುಹಬ್ಬದ ಉಡುಗೊರೆಯಾಗದೆ, ನಾನು ಸಂಪಾದಿಸಿದ ನನ್ನ ಸ್ನೇಹಿತರ ಬಳಗ. ಇವರಲ್ಲಿ ಒಬ್ಬರು ಒಳ್ಳೆಯ ಬರಹಗಾರರು ,ಮತ್ತೊಬ್ಬರು ಕೌಶಲ್ಯಪೂರ್ಣ ವ್ಯಕ್ತಿ ,ಕೆಲವರು ಉತ್ಸಾಹ ಪೂರ್ಣ ಮನಸ್ಸಿನವರು ಮತ್ತು ಕೆಲವರು ಅಸಾಮಾನ್ಯ ಪೋಷಕರು,ಅಪ್ರತಿಮ ಗಾಯಕರು. ಹೀಗೆ ಹತ್ತು ಹಲವು ವ್ಯಕ್ತಿತ್ವ ರೂಪಿಸಿಕೊಂಡಂತಹ ವ್ಯಕ್ತಿಗಳಿಂದ ನನಗೆ ಹುಟ್ಟುಹಬ್ಬದ ಶುಭಾಶಯಗಳ ವೃಷ್ಟಿ. ಎಲ್ಲರಿಂದ ಒಂದೇ ಸಂದೇಶ ನನ್ನ ಶುಭ ಭವಿಷ್ಯ ಮತ್ತು ಉತ್ತಮ ಆರೋಗ್ಯದ ಹಾರೈಕೆ.

ಧ್ಯಾನ ಮಾಡುವವನು ಧನ್ಯನು
ಕಲಾವಿದನು ಅದೃಷ್ಟವಂತನು
ವಿವೇಕಿಯು ಪೂಜ್ಯನು
ನಿರ್ಮಲ ಮನಸ್ಸಿನವನು ಸುಖಿ
ಜನಪ್ರಿಯನಾದವನು ಶ್ರೇಯಸ್ಕರ

ಈ ದಶಕದ ಅತ್ಯಂತ ಸ್ಮರಣೀಯ ಘಟನೆಯಾದ ಕೊರೊನ ಸಾಂಕ್ರಾಮಿಕದ ಈ ಸ್ಥಿತಿಯಲ್ಲಿ  ನನ್ನ ಹುಟ್ಟುಹಬ್ಬದ ಆಚರಣೆ. ಸತ್ಯ ಸಂಗತಿ ಏನೆಂದರೆ ಇದುವರೆಗಿನ ನನ್ನ ಬಿಸಿಎಸ್ಟ್ (busiest ) ದಿನ ಎನ್ನಬಹುದು.ಬೆಳೆಗ್ಗಿನಿಂದ ರಾತ್ರಿ ಮಲಗುವ ತನಕ ಹಾರೈಕೆಗಳ ಹಾಗು ಶುಭಾಶಯಗಳ ಸುರಿಮಳೆ ಅಲ್ಲದ ಲೆಕ್ಕವಿಲ್ಲದ ವೈಯಕ್ತಿಕ ಸಂದೇಶಗಳು ಹಾಗು ಕರೆಗಳು. ಅಷ್ಟೇ ಅಲ್ಲದೆ ನನ್ನ ಮಗ ತನ್ನ ತಂದೆಯೊಂದಿಗೆ ಕೂಡಿ ಇದುವರೆಗಿನ ಅತ್ಯಂತ ಬೆಲೆಬಾಳುವ ಉಡುಗೊರೆ ಕೊಟ್ಟಿದ್ದಾರೆ. ಆಗ ನನ್ನ ಮನ್ನಸ್ಸಿಗೆ ಅನಿಸಿದ್ದು ಒಂದೇ ಉಡುಗೊರೆಯ ಸ್ವರೂಪ ಹಾಗು ಅವುಗಳ ಮಹತ್ವ.

ನಾನು ಹೇಳುವ ವಿಷ್ಯದ ಬಗ್ಗೆ ಪೀಠಿಕೆನೆ ಹೆಚ್ಚು.ಹೀಗಾಗಿ ನನ್ನ ಮನೆಯವರೆಲ್ಲರಿಗೂ ಏನಾದರು ಕಥೆ ಹೇಳುವ ಸಂದರ್ಭದಲ್ಲಿ ಬೋರ್ ಹೊಡಸ್ತೀನಿ .

ಕಾಲೇಜಿನ ದಿನಗಳಲ್ಲಿ ಭೌತಿಕ ಶ್ರೀಮಂತಿಕೆಯು ಪ್ರಭಾವಶಾಲಿಯಾಗಿದ್ದವು. ಹೀಗಾಗಿ ನನ್ನ ವೃತ್ತಿಯು ಅದರಂತೆಯೇ ನಿರ್ಧಾರ ಮಾಡಿದೆ. ನಾನು ಬೆಳೆದಿದ್ದು ಮೈಸೂರಿನಲ್ಲಿ ,ಅಲ್ಲಿ ಎಲ್ಲರು ಒಳ್ಳೆಯ ವಿದ್ಯಾಭ್ಯಾಸ ಮಾಡಿ ಉನ್ನತ ಪದವೀಧರರಾಗಿದ್ದವರು. ಹೀಗಾಗಿ ವೃತ್ತಿಯಲ್ಲಿ ಯಶಸ್ವಿಯಾಗಿ ಪ್ರಪಂಚ ತಿರುಗುವುದು ಮುಂದಿನ ಧ್ಯೇಯವಾಯಿತು. ತಕ್ಕ ಮಟ್ಟಿಗೆ ಇದು ನೆರವೇರಿದೆ. ಯಶಸ್ಸಿನ ಉಡುಗೊರೆಯ ಅರಿವಾಯಿತು.  ಈವೇಳೆಗೆ  ವಸ್ತುಗಳ ಮೇಲಿನ ಮೋಹ ಕಡಿಮೆಯಾಗಿ ಮತ್ತೊಂದು ಆಸೆ ಹುಟ್ಟಿತು. ಹೆಚ್ಚು ಪದವಿ ಹೊಂದಿದವರು,ಪ್ರತಿಷ್ಠಿತ ವಿದ್ಯಾಲಯದಲ್ಲಿ  ಉನ್ನತರಾದವರಲ್ಲಿ ಪ್ರಭಾವಿತವಾಗಿ ಅವರಂತೆ ಆಗುವ ಕನಸು. ಇದು ತಕ್ಕ ಮಟ್ಟಿಗೆ ಈಡೇರಿದೆ(ಪ್ರಮಾಣೀಕಾರಣದ ಅಗತ್ಯವಿದೆ :)) ಅಂತ ಅನ್ಕೊಂಡಿದೀನಿ. ಆದರೆ ಇವು ಯಾವುವು ನನ್ನ ಹುಟ್ಟುಹಬ್ಬದ ಖುಷಿ ಇಮ್ಮಡಿ ಮಾಡಲಿಲ್ಲ. ಹಾಗಂತ ಅವುಗಳ ಅವಶ್ಯಕತೆ ಜೀವನದಲ್ಲಿ ಇಲ್ಲ ಅಂತ ಅರ್ಥಾಲ್ಲ. ಯಾವ ವಸ್ತು ಹಾಗು ವ್ಯಕ್ತಿಗಳಲ್ಲಿ  ನನ್ನ ಸುಖ ಸಂತೋಷ ಅಡಗಿದೆ ಎನ್ನುವುದು ನಾವು ತಿಳಿದಿಕೊಳ್ಳಬೇಕು.ಇವೆಲ್ಲವೂ ನನ್ನ ಅನಿಸಿಕೆ. ಪ್ರತಿಯೊಬ್ಬರ ಜೀನಶೈಲಿಯ ಮೇಲೆ ಆಧಾರಿತವಾಗಿರುವ ವಿಷಯವಿದು. ನನಗೆ ಮುಖ್ಯವಾಗಿದ್ದು ಕೆಲವರಿಗೆ ಬೇಡೆನಿಸಬಹುದು. ನನ್ನ ಅರ್ಥದಲ್ಲಿ ಜೀವನದ ಗುರಿಯು ಕೇವಲ ವಸ್ತುಗಳಮೇಲೆ ಅವಲಂಬಿತವಾಗದೆ ಸರ್ವತೋನ್ಮುಖವಾಗಿರಬೇಕೆನ್ನುವುದು  ಅಷ್ಟೇ.


ಕಾಮೆಂಟ್‌ಗಳು

Shubaಹೇಳಿದ್ದಾರೆ…
Very well thought and written
..loved it..keep posting more

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸನಾತನ ''ಸುಧರ್ಮ''

Quantitative Easing!!!

ಮಲ್ಲಿಗೆಯ ಜಿಜ್ಞಾಸೆ