ಅತಿಶಯೋಕ್ತಿ
ಕನ್ನಡ
ಭಾಷೆ ಎಂದರೆ ಅತಿಶಯೋಕ್ತಿ
ಬೇರೆಯ
ಪದ ಆಗದು ಇದಕ್ಕೆ ಸೂಕ್ತಿ
ಕವಿರಾಜಮಾರ್ಗದಿಂದ ಕವಿಗಳ ಉತ್ಸಾಹ
ಇಮ್ಮಡಿ ಮಾಡಿದ ಅಮೋಘವರ್ಷ
ಕನ್ನಡ
ಭಾಷೆಯು ಕನ್ನಡಿಗರ ತನು ಮನದಲ್ಲಿ ಹರಿಯುತಲಿರಲಿ ಸಹಸ್ರ
ಶತ ವರುಷ
ತುಂಗಾ
ಶರಾವತಿ ಕಾವೇರಿ ಕಪಿಲ ಹರಿಯುತ ಮಾಡಿವೇ ಕನ್ನಡ ಭೂಮಿಯನ್ನು ಸಿರಿ
ಗಂಗ
ಹೊಯ್ಸಳರ ಅಡಳಿತತದಲ್ಲಿ ಸಮೃದ್ಧವಾಯಿತು ಕನ್ನಡ ವ್ಯಾಕರಣ ವೈಖರಿ
ಪಂಪ
ಪೊನ್ನ ರನ್ನರ ಕಾವ್ಯವು ತಂದ ಜ್ಞಾನ
ಹರಿಹರ
ರಾಘವಾಂಕರ ಪದಗಳನ್ನು ಕೇಳಿರಿ ಎಂದ ಸರ್ವಜ್ಞ
ಪುರಂದರ
ಕನಕರಂತಹ ದಾಸ ಕವಿಗಳು ವಿರಳ
ಕರ್ನಾಟಕ ಸಂಗೀತ ರಸಿಕರಿಗೆ ನೀಡಿದರು ರಾಗಗಳ ಪುಷ್ಕಳ
ಕುವೆಂಪು
ಬೇಂದ್ರೆ ಕಾರಂತರ ಮಹಾಕಾವ್ಯಗಳ ಕೂಟ
ದೊರಕಿಸಿದೆ
ಕನ್ನಡಕ್ಕೆ ಜ್ಞಾನದ ಪೀಠ
ಕನ್ನಡದ
ಕಂಪು ಬೀರುತಿರಲಿ ಅಪಾರ ವಿಸ್ತಾರದಲಿ ಸತತವಾಗಿ
ಕನ್ನಡಿಗರು ತಮ್ಮ ಭಾಷೆಯನ್ನು
ಹೆಮ್ಮೆಯಿಂದ ಬಳಸಲಿ ನಿರಂತರವಾಗಿ
ಕಾಮೆಂಟ್‌ಗಳು