ಗುಟ್ಟಿನ ಗಂಟಿನೊಂದಿಗೆ ನಿನಗೇಕೆ ನಂಟು
ಗುಟ್ಟಿನ ಗಂಟಿನೊಂದಿಗೆ ನಿನಗೇಕೆ ನಂಟು
ಗಂಟಿನೊಂದಿಗೆ ನೀ ಬಿಡಿಸು ಸಂಬಂಧಗಳ ನಿಘಂಟು
ಗಂಟಿನಲ್ಲಿ ಏನಿದೆಯೋ ಅದು ನಿನಗಷ್ಟೆ ಗೊತ್ತು
ಬೇರೆಯವರಿಗೆ ಅದು ತಿಳಿಯದಿರಲು ನಿನಗೇಕೆ ಗತ್ತು
ದುಃಖದ ಗಂಟು ಭಾರ, ಇಳಿಸು ಅದನ್ನು ಆಗುವುದು ಮನಸ್ಸು ಹಗುರ
ಸುಖದ ಗಂಟು ಉತ್ಸಾಹ ಭರಿತ, ಗಂಟು ಬಿಚ್ಚದೆ ನೀ ಆಗಬೇಡ ನರಿತ
ಹಂಚಿಕೊಂಡರೆ ನೀ ಈ ಬುತ್ತಿಯ ಗಂಟು,
ಒಗ್ಗಟ್ಟಿನ ಒಗಟು ಬಿಡಿಸಿ ನೀ ಬೆಸೆವೆ ಜನುಮದ ನಂಟು
ಜೂಲೈ ೫ನೇ ಅನುಭವ
ನುರಿತ ಅರಿತ ನಿಪುಣರೊಂದಿಗೆ(ಸಹ ಸ್ಪರ್ಧಿಗಳು) ಕಳೆದ ಕ್ಷಣ
ದಿಗ್ಗಜರು(ಡಾ .ಸೋಮೇಶ್ವರ್) ಮಾಡಿಸಿದರು ದಿಗಂತದ ದರ್ಶನ
ಮಾತ್ರವಲ್ಲ ಇದು ರಸಪ್ರಶ್ನೆಯ ಆಟ
ಕನ್ನಡವೆಂಬ ಮಹಾಸಾಗರದ ವಿಹಂಗಮ ನೋಟ
ಸುತ್ತಿನ ಸುಳಿಯೊಳಗೆ ಮುಳುಗಿ ಉತ್ತರಿಸದೆ ತಬ್ಬಿಬಾಗಿ
ಚಿತ್ರಕವನಗಳ ಸಾಲುಗಳ ಉತ್ಸಾಹದಿಂದ ಬೀಗಿ
ಸೋಲು ಗೆಲುವಿಗೂ ಮೀರಿದ ಅನುಭವ
ವಿಶ್ವದಾದ್ಯಂತ ಬೀರಿತು ಥಟ್ಟತೆ ಪ್ರಭಾವ
ಕಾಮೆಂಟ್‌ಗಳು