ಸ್ವಂತವಾಗದ ಸ್ವಾತಂತ್ರ
ಗಡಿಯಾಚೆ ಗೆ ಅಟ್ಟಿದರು ಸ್ಥಬ್ದವಾಗಿದೆ ಗಡಿಯಾರ
ಘುಲಾಮ ಆಗಿಹುದು ಇನ್ನೂ ಹೆಣ್ಣಿನ ಅಧಿಕಾರ
ಬಡವರ ಕೂಗು ಮುಗುಲಿಗೇರಿ ಮಾಡುತಿಹುದು ಹಾಹಾಕಾರ
ತರಳರು ಅನಾಥರಾಗಿ ಮಾಡಲಿಲ್ಲಹರು ಅಂತಿಮ ಸಂಸ್ಕಾರ
ಕುಲ ಮತ ಭೇಧಗಳು ಮಾಡಿವೆ ಮಾನವೀಯತೆಯ ಸಂಹಾರ
ಸ್ವಂತವಾಗದ ಸ್ವಾತಂತ್ರ ತಂತ್ರ ಕುತಂತ್ರಗಳ ನಡುವೆ ಸಂಚಾರ ಭರತನ ಭಾರತದಲ್ಲಿ ಇದ್ದರೂ ಸಿರಿತನ ಅಪಾರ
ಅರಿವಿನ ಬಡತನದ ಗೊಡ್ಡು ಸಂಪ್ರದಾಯದ ಪ್ರಚಾರ
ದೇಶ ಪ್ರೇಮ ಕೇವಲ ಸ್ವಾತಂತ್ರ ದಿನಕ್ಕೆ ಸೀಮಿತವಾದ ಆಚಾರ
ಹೆಣ್ಣನ್ನ ಗೌರವಿಸೀ ದೇಶದ ಹೊನ್ನನ್ನು ರಕ್ಷಿಸಿ ಮಣ್ಣನ್ನು ಸ್ವಚ್ಛವಿಟ್ಟು ಕಾಪಾಡೀ ಭವ್ಯ ದೇಶದ ವಿಚಾರ
ಕಾಮೆಂಟ್‌ಗಳು