ತಳಮಳ
ಹೊಸ ವರ್ಷದ ಹಾದಿ ಪ್ರತಿ ವರ್ಷಾಂತ್ಯದಲ್ಲಿ ನೋಡುತ್ತಿದ್ದೆ ಕಳೆದ ವರ್ಷದ ಪ್ರತಿ ತಿಂಗಳ ಅಮೋಘ ಕ್ಷಣಗಳನ್ನು ದುಗುಡ ಸನ್ನಿವೇಶಗಳನ್ನು ಮೆಲುಕು ಹಾಕುತ್ತಿದ್ದೆ ಫೋನಿನಲ್ಲಿದ್ದ ಹನ್ನೆರಡು ತಿಂಗಳ ಫೋಟೋಗಳನ್ನು ನೋಡುತ್ತಿದ್ದೆ ಮಕ್ಕಳ ಬೆಳೆವಣಿಗೆ ನೋಡಿ ನಿಶ್ಚಲತೆಯ ಮುಗುಳ್ನಗುವಿನಿಂದ ಸಮಯಕ್ಕೆ ಇಲ್ಲೇ ಸ್ತಬ್ದವಾಗಲು ಕೋರುತ್ತಿದ್ದೆ ದಶಕದ ಕೊನೆಯ ವರುಷದ ಆರಂಭದಲ್ಲಿದ್ದೆ ಮುಂದಿನ ದಿನಗಳ ಕಲ್ಪನೆಯು ಇಲ್ಲದ ವರ್ಷಾರಂಭದಲ್ಲಿ ಕನಸಲ್ಲೇನೋ ನೋಡಿದ್ದೇ ಮಗಳ ಹುಟ್ಟು ಹಬ್ಬದ ತಯ್ಯಾರಿಯಲ್ಲಿದೆ ಪಾರ್ಟಿ ಪಿಕ್ನಿಕ್ ಗಳ ಯೋಜನೆ ಸಂಭ್ರಮ ಬೇಸಿಗೆಯ ರಜೆಯಲ್ಲಿ ದೂರ ದೇಶದ ಕನಸು ಕಾಣುತ್ತಿದ್ದೆ ದಿನ ಕಳೆದಂತೆ ಉಸಿರಾಡುವ ಗಾಳಿಯು ವಿಷವಾಗುತ್ತಿದೆ ಪ್ರಪಂಚವನ್ನೇ ಆವರಿಸಿದ ರೋಗದಿಂದ ಕಣ್ಣ ಮುಂದೆ ಕತ್ತಲಾಗಿ ಸಂಭ್ರಮ ಸಡಗರಗಳ ವಾಸ್ತವಿಕತೆ ದೂರವಾಗುತ್ತಿದೆ ಹೀಗೆ ದಿನಗಳ ಕಳೆದು ವರ್ಷದ ಅಂತ್ಯ ಸಮೀಪಿಸುತ್ತಿದ್ದೆ ಮುಂದೇನು ಮುಂದೇನು ಅನ್ನುವ ಪ್ರಶ್ನೆಯಿಂದ ಅಸಮಾಧಾನದಿಂದ ಸಹನೆ ಭರವಸೆ ಕುಗ್ಗುತ್ತಿದೆ ಸ್ನೇಹಿತರ ಭೇಟಿ ಇಲ್ಲದೆ ಬಂಧನದ ಅರಿವಾಗುತ್ತಿದೆ ಮಕ್ಕಳ ಅಮ್ಮ ಅಪ್ಪನ ಸಹನೆಯ ದೀಪಕ್ಕೆ ಎಣ್ಣೆ ಹಾಕಿದರು ಬತ್ತಿ ಸುಟ್ಟುಹೋಗುತ್ತಿದೆ ಸಾಧಿಸಿದ್ದೇನು ಈ ವರುಷ ಎಂದೆನಿಸುತ್ತಿದೆ...