ತಳಮಳ

 ಹೊಸ ವರ್ಷದ ಹಾದಿ ಪ್ರತಿ ವರ್ಷಾಂತ್ಯದಲ್ಲಿ ನೋಡುತ್ತಿದ್ದೆ 

ಕಳೆದ ವರ್ಷದ ಪ್ರತಿ ತಿಂಗಳ ಅಮೋಘ ಕ್ಷಣಗಳನ್ನು 

ದುಗುಡ ಸನ್ನಿವೇಶಗಳನ್ನು ಮೆಲುಕು ಹಾಕುತ್ತಿದ್ದೆ 


ಫೋನಿನಲ್ಲಿದ್ದ ಹನ್ನೆರಡು ತಿಂಗಳ ಫೋಟೋಗಳನ್ನು ನೋಡುತ್ತಿದ್ದೆ 

ಮಕ್ಕಳ ಬೆಳೆವಣಿಗೆ ನೋಡಿ ನಿಶ್ಚಲತೆಯ ಮುಗುಳ್ನಗುವಿನಿಂದ

ಸಮಯಕ್ಕೆ ಇಲ್ಲೇ ಸ್ತಬ್ದವಾಗಲು ಕೋರುತ್ತಿದ್ದೆ 


ದಶಕದ ಕೊನೆಯ ವರುಷದ ಆರಂಭದಲ್ಲಿದ್ದೆ  

ಮುಂದಿನ ದಿನಗಳ ಕಲ್ಪನೆಯು ಇಲ್ಲದ 

ವರ್ಷಾರಂಭದಲ್ಲಿ  ಕನಸಲ್ಲೇನೋ ನೋಡಿದ್ದೇ 


ಮಗಳ ಹುಟ್ಟು ಹಬ್ಬದ ತಯ್ಯಾರಿಯಲ್ಲಿದೆ

ಪಾರ್ಟಿ ಪಿಕ್ನಿಕ್ ಗಳ ಯೋಜನೆ ಸಂಭ್ರಮ 

ಬೇಸಿಗೆಯ ರಜೆಯಲ್ಲಿ ದೂರ ದೇಶದ ಕನಸು ಕಾಣುತ್ತಿದ್ದೆ 


ದಿನ ಕಳೆದಂತೆ ಉಸಿರಾಡುವ ಗಾಳಿಯು ವಿಷವಾಗುತ್ತಿದೆ 

ಪ್ರಪಂಚವನ್ನೇ ಆವರಿಸಿದ ರೋಗದಿಂದ ಕಣ್ಣ ಮುಂದೆ ಕತ್ತಲಾಗಿ 

ಸಂಭ್ರಮ ಸಡಗರಗಳ  ವಾಸ್ತವಿಕತೆ  ದೂರವಾಗುತ್ತಿದೆ 


ಹೀಗೆ ದಿನಗಳ ಕಳೆದು ವರ್ಷದ ಅಂತ್ಯ ಸಮೀಪಿಸುತ್ತಿದ್ದೆ

ಮುಂದೇನು ಮುಂದೇನು ಅನ್ನುವ  ಪ್ರಶ್ನೆಯಿಂದ 

ಅಸಮಾಧಾನದಿಂದ ಸಹನೆ ಭರವಸೆ ಕುಗ್ಗುತ್ತಿದೆ 


ಸ್ನೇಹಿತರ ಭೇಟಿ ಇಲ್ಲದೆ ಬಂಧನದ ಅರಿವಾಗುತ್ತಿದೆ 

ಮಕ್ಕಳ ಅಮ್ಮ ಅಪ್ಪನ ಸಹನೆಯ ದೀಪಕ್ಕೆ 

ಎಣ್ಣೆ ಹಾಕಿದರು ಬತ್ತಿ ಸುಟ್ಟುಹೋಗುತ್ತಿದೆ 


ಸಾಧಿಸಿದ್ದೇನು ಈ ವರುಷ ಎಂದೆನಿಸುತ್ತಿದೆ 

ಸಾಧನೆ ಅಂದರೇನಮ್ಮಾ ಎಂದು ಮಗ ಕೇಳಿದಾಗ 

ನನಗೆ ನನ್ನ ಅಮ್ಮನ ಮುಖ ಕಣ್ಣ ಮುಂದೆ ಬರುತ್ತಿದೆ 


ಮುಂದಿನ ದಿನಗಳು ಸುಗಮ ವಾಗಿರಬೇಕೆನಿಸುತ್ತಿದೆ 

ಪರಿಸ್ಥಿತಿಯು ಬದಲಾಗಿ ಈ ಊರಿನಿಂದ ನಮ್ಮ  

ಊರಿಗೆ ಹೋಗಿ ಅಮ್ಮ ಅಪ್ಪನ ನೋಡಬೇಕೆನಿಸುತ್ತಿದೆ  


ಗಮ್ಯ ತಿಳಿಯದ ಒಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ 

ಈ ಊರು ನಮ್ಮದ ಇಲ್ಲಿ ಇಳಿಯುವುದ 

ಎನ್ನುವ ಯೋಚನೆಯಲ್ಲೇ ಸಾವಿರಾರು ಮೈಲಿ ತಲುಪಿದೆ 


ಸಹ ಪ್ರಯಾಣಿಕರ ದುಃಖ ಕೇಳುತ್ತಿದ್ದೆ 

ನನ್ನ ಸ್ಥಿತಿಯು ಸಮಾಧಾನಕರ ಅನಿಸುತ್ತ 

ಕೆಲವರ ಉತ್ಸಾಹ ನನ್ನಲ್ಲಿ ಚೈತನ್ಯ ತುಂಬುತ್ತಿದೆ 


ಪ್ರತಿ ವರ್ಷಾಂತ್ಯದಲ್ಲಿ ಮುಂದಿನ ವರುಶದತ್ತ 

ಆಸೆಗಳ ಯೋಚನೆಯಿಂದ ಸಾಗುತ್ತಿದ್ದ  ನನ್ನ ಮನಸ್ಸು

ಈ ವರ್ಷ ಏನೂ ಬಯಸಬೇಡ ಅನ್ನುತಿದೆ 


ಎಲ್ಲರ ಮನವು ಒಂದನ್ನೇ ಬಯಸುತ್ತಿದೆ 

ಒಳ್ಳೆಯ ಅರೋಗ್ಯ  ಸ್ಥಿತಿಯ ಬದಲಾವಣೆ 

ಸ್ನೇಹಿತರೊಂದಿಗೆ ಕೂತು ನಗುವ ಸಂದರ್ಭ ಬೇಕೆನಿಸುತ್ತಿದೆ  


ಕಲಿತ್ತದ್ದು ಸಾಕಷ್ಟು ಕಲಿಯಬೇಕಾಗಿದ್ದು ಮತ್ತಷ್ಟು ಆಗಿದೆ 

ಸಾಕೋ ಸಾಕೋ ಈ ರೋಗದ ಹಾವಳಿ 

ಲಕ್ಷಾಂತರ ಜೀವನ ಹಾಳು ಮಾಡುತ್ತಿದೆ 


ಉಪಾಯ ತಿಳಿಯದೆ ಲಸಿಕೆಯು ಹಾದಿಯಲ್ಲಿದೆ 

ಎನ್ನುವ ಒಂದೇ ವಿಶ್ವಾಸದಿಂದ ಮನಸ್ಸಿನಲ್ಲಿ ಗೊಂದಲವಿದ್ದರೂ 

ಸಹನೆ , ತಾಳ್ಮೆ ಸೈರಣೆ ಇಚ್ಛೆಯ ಅರ್ಥ ಹುಡುಕುತ್ತಿದೆ    

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸನಾತನ ''ಸುಧರ್ಮ''

E-motional !!!

ಮಲ್ಲಿಗೆಯ ಜಿಜ್ಞಾಸೆ