ಸಮಯ ವ್ಯರ್ಥವೇ?


ಕ್ಷಣ ಕ್ಷಣವೂ ಬಯಕೆಗಳ ಕನಸು ಕಾಣುತ್ತಾ 

ಮರು ಕ್ಷಣವೇ  ನನಸು ಭಾಸವಾಗುತ್ತಾ 

ಬಯಸಿದ್ದು ಪಡೆಯುವುದರಲ್ಲಿ ಇದ್ದದ್ದು ಕಳೆದುಕೊಳ್ಳುವುದರಲ್ಲಿ

ಸಮಯ ವ್ಯರ್ಥವೇ? 


ಆಸೆಗಳ ಜಲಪಾತದಿಂದ ಹತಾಶೆಗಳ ಪ್ರಪಾತದಲ್ಲಿ 

ಮುಳುಗಿದಾಗ ಅಗೋಚರ ಮನಸ್ಸು ಏನನ್ನು ಹುಡುಕುತ್ತಿದೆ 

ನೆಮ್ಮದಿಯೇ ಸಹಚರ ಅಲ್ಲವೇ ? ವಾಸ್ತವಿಕತೆಯ ಕನಸುಕಾಣುವುದರಲ್ಲಿ 

ಸಮಯ ವ್ಯರ್ಥವೇ ?


ಗಳಿಸಿದ್ದನ್ನು ಚಿತ್ರಿಸಿ ಸೋತದ್ದನ್ನು ಅಲಕ್ಷಿಸಿ 

ಬಂದಿದ್ದನ್ನು  ಆನಂದಿಸಿ ಹೋಗಿದ್ದನ್ನು ಮರೆಸಿ 

ಇರುವುದನ್ನು ಅನುಭವಿಸಿ ಸಮಯ ಸಾಧಿಸುವಲ್ಲಿ 

ಸಮಯ ವ್ಯರ್ಥವೇ ?


ಮುಂದೆ ಬರುವ ಹಾದಿ ನೋಡುತ್ತಾ ಕಳೆದು ಹೋದದನ್ನ ಚಿಂತಿಸುತ್ತಾ   

ವರ್ತಮಾನದ ಪ್ರಸ್ತುತಿಯನ್ನು ಕಡೆಗಣಿಸಿ ಜೀವ ಹೋಗುವ ಕಾಲ ಬಂದಂತೆ 

ಎಲ್ಲವು ನಿಶಬ್ದವಾದಾಗ ಉಳಿವುದು ಕೇವಲ ಉತ್ಕಂಠತೆ

ಈಗೂ ಸಮಯ ವ್ಯರ್ಥವೇ ?


ಬಿಟ್ಟು ಹೋಗಿದ್ದು ಹೋಗುವುದು ಇದ್ದದ್ದು  ಉಳಿಯುವುದು 

ತಣಿದ ಜೀವ ಕಳೆವುದು ನೆನಪುಗಳು ಮಾತ್ರ  ಬದುಕಿಸುವುದು 

ಸಾಧಿಸ ಹೊರಟಿದ್ದು ಕೇವಲ ಪ್ರಾಪಂಚಿಕ ಆದರೆ ಸ್ನೇಹ ಸಹನೆಯ

ಸಂಪಾದನೆಯಲ್ಲಿ ಸಮಯ ವ್ಯರ್ಥವೇ ?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸನಾತನ ''ಸುಧರ್ಮ''

Quantitative Easing!!!

ಮಲ್ಲಿಗೆಯ ಜಿಜ್ಞಾಸೆ