ಕ್ಷಣಗಳ ಅನಾವರಣ

ಭಾವಾನುವಾದ - ರುಮಿ( 🌹Unfolding  Roses🌹 )


ದೇವರು  ಸೃಷ್ಟಿಸಿದ ಸುಂದರ ಸೂಕ್ಷ್ಮ ಈ ಮುಗ್ಧ ಗುಲಾಬಿಯ ಮೊಗ್ಗು 

ಈ ಮೊಗ್ಗಿನ ದಳವನ್ನು ಈ ನನ್ನ ನಯವಿಲ್ಲದ ಕೈಗಳಿಂದ ಹೇಗೆ ಬಿಡಿಸಲಿ 


ನನ್ನಂತಹ ಅನರ್ಹನಿಗೆ ತಿಳಿಯದ ಈ ರಹಸ್ಯ 

ದೇವ ಎಷ್ಟು ಮೃದುವಾಗಿ ನಾಜೂಕಾಗಿ ಅರಳಿಸಿದ 

ಈ ಇನಿದಾದ ಹೂ ನನ್ನ ಕರದಲ್ಲಿ ಬಾಡಿಹೋಗುತ್ತದೆ 


ಆ ಭಗವಂತನು  ಕಲ್ಪಿಸಿದ  ಗುಲಾಬಿಯ ಮೊಗ್ಗನ್ನು 

ನನ್ನಿಂದ ಅರಳಿಸಲಾಗಲಿಲ್ಲ 

ಈ ನನ್ನ ಜೀವನವನ್ನು ವಿಕಸಿತ ಗೊಳಿಸಲು 

ನನ್ನಲಿ ಯಾವ ವಿವೇಕವು ಇದೆ 


ಅವನ ಮೇಲೆ ಭರವಸೆ ಇರಿಸಿ  ಅವನನ್ನೇ ಅರಿಸಿ 

ದಿನದ ಪ್ರತಿ ಕ್ಷಣವೂ ನಾನು ಅವನ ಮೊರೆ ಹೋಗುವೆ 

ಅವನ ದರ್ಶನದ  ಹಾದಿಯಲಿ ಈ ಯಾತ್ರಿಕನು 

ಅವನ ಮಾರ್ಗದರ್ಶನದಿಂದ ಪ್ರತಿ ಹೆಜ್ಜೆ ಇಡುವೆ


ಆ ದಿವ್ಯ ತೇಜಸ್ವಿಯೇ  ಬಲ್ಲ  ನನ್ನ ಮುಂದಿರುವ ಹಾದಿ 

ಸಾಗುತ್ತಿರುವೆ  ನಾನು ಅವನನ್ನೇ ನಂಬಿ  

ಆ ಮುಗ್ಧ ಗುಲಾಬಿಯ ಪ್ರತಿಯೊಂದು  ಪಕಳೆಯನ್ನು ಅರಳಿಸುವಂತೆ 

ನನ್ನ ಜೀವನದ ಪ್ರತಿಯೊಂದು ಕ್ಷಣವನ್ನು ಪದರುಪದರಾಗಿ ಮುಂದಿಡುತ್ತಾನೆ 


Sharing a poem by 13th Century Sufi poet -Jalāl ad-Dīn Muhammad Rūmī 


UNFOLDING  THE ROSE 🌷


It is only a tiny rosebud,

A flower of God's design;

But I cannot unfold the petals

With these clumsy hands of mine.


The secret of unfolding flowers

Is not known to such as I.

GOD opens this flower so sweetly,

When in my hands they fade and die. 🥀


If I cannot unfold a rosebud,

This flower of God's design,

Then how can I think I have wisdom

To unfold this life of mine?


So I'll trust in Him for His leading

Each moment of every day.

I will look to Him for His guidance

Each step of the pilgrim way.


The pathway that lies before me,

Only my Heavenly Father knows.

I'll trust Him to unfold the moments,

Just as He unfolds the rose. 🌹


~ Rumi

 



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸನಾತನ ''ಸುಧರ್ಮ''

Quantitative Easing!!!

ಮಲ್ಲಿಗೆಯ ಜಿಜ್ಞಾಸೆ