ಬುದ್ಧನಲ್ಲದಿದ್ದರು ಪ್ರಭುದ್ಧನಾಗಬಹುದು



ಜೀವನಲ್ಲಿ ಸುಖ ದುಃಖದ ಸಮಯ ಋತುಗಳಂತೆ 

ಬಿಸಿಲಿನ ಬೇಗೆಯಲಿ ತಂಗಾಳಿ ಬಯಸುವಂತೆ  

ಛಳಿಯ ತಂಪಿನಲ್ಲಿ ಬಿಸಿಲನ್ನು ಆಶಿಸುವಂತೆ  

ಮನುಷ್ಯನ ಗುಣ ಇಲ್ಲದ್ದನ್ನು ಬೇಕುನ್ನಿವಂತೆ  

ಸಿಕ್ಕಾಗ ಅನುಭವಿಸಲು ಸಾಧ್ಯವಾಗಂತೆ 

  

ಚಳಿ ಮಳೆಯಲ್ಲಿ  ಬೆಚ್ಚನೆಯ  ಸೂರಿನ ಕೆಳಗೆ 

ಬಿಸಿಲಲ್ಲಿ ಅಂಗಳದ ಗಿಡಮರಗಳ ತಂಗಾಳಿಗೆ 

ಐಷಾರಾಮಿಗೆ ಒಗ್ಗಿದ ಈ ಬದುಕಿಗೆ 

ಇನ್ನಿಷ್ಟು ಮತ್ತಿಷ್ಟು ಬೇಕೆಂಬ ಹರಕೆಗೆ 


ಬೇಕೆನ್ನುವುದನ್ನೆಲ್ಲ ಸಂಗ್ರಹಿಸಿ ಶೇಖರಿಸಿದಂತೆ 

 ವಸ್ತುಗಳಿಗೆ ಭಾವನೆಯ ಹಗ್ಗ ಕಟ್ಟಿದಂತೆ 

ಮತ್ತೊಬ್ಬರ ನೋವಿಗೆ ಸ್ಪಂದಿಸದಂತೆ

ಬೇಕು ಬೇಡಗಳ ಬೇಧ ತಿಳಿಯದಂತೆ 

ಸ್ಥಿತ ಪ್ರಜ್ಞನಾಗಿ ಮೈಮರೆತಂತೆ 


ಪ್ರಕೃತಿಯ ನೈಜ ರೂಪ ಬದಲಾಗಿ 

ಜೀವನದ ಸಮತೋಲನ ಏರುಪೇರಾಗಿ 

ಸಮರ್ಥ ಅಶಕ್ತರ ನಡುವಿನ ಬೇಧ ತಿಳಿದಾಗ 

ಸ್ಥಿತಿಯ ಪ್ರಜ್ಞೆ ಮರುಕಳಿಸಿದಾಗ 

ಭೂತಗಳಿಂದ ಮುಕ್ತವಾಗಲು  ಬುದ್ಧನಲ್ಲದಿದ್ದರು ಪ್ರಭುದ್ಧನಾಗಬಹುದು 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸನಾತನ ''ಸುಧರ್ಮ''

E-motional !!!

ಮಲ್ಲಿಗೆಯ ಜಿಜ್ಞಾಸೆ