ಮುಗ್ಧತೆಯ ನಗುವನ್ನು  ಸ್ಥಬ್ಧ ಮಾಡುವ ತನಕ 

ದಟ್ಟಗಾಲಿಡುವ  ಅವಳ ಕೈಹಿಡಿದು ಸಪ್ತಪದಿ ಇಡಿಸುವ ತನಕ 

ಪುಟ್ಟಕಾಲಿನ ಗೆಜ್ಜೆಯ ಹೆಜ್ಜೆಯೊಂದಿಗೆ ಕಾಲುಂಗುರಿನ ತನಕ 

ಶಾಲೆಯಲಿ ಗೆದ್ದ ಚಿನ್ನದ ಪದಕದಿಂದ ಮಾಂಗಲ್ಯದ ತನಕ 

ಪುಸ್ತಕ ಲೇಖನಿ ಇಂದ ಸೌಟು ಕಸಬರಿಗೆ ತನಕ  

ಲಂಗ ದಾವಣಿಯಿಂದ ಸೀರೆಯ ಉಡಿಸುವುದರ ತನಕ 

ಬಾಲ್ಯದ ಪದ್ಯದಿಂದ ಮಮತೆಯ ಲಾಲಿಹಾಡಿನ ತನಕ 

ಅಕ್ಕ ತಂಗಿಯಿಂದ ಪತ್ನಿ ತಾಯಿಯ ತನಕ 

ಮಡಿವಂತಳಾಗುತ್ತಾಳೆ ಕೊನೆಯ ತನಕ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸನಾತನ ''ಸುಧರ್ಮ''

Quantitative Easing!!!

ಮಲ್ಲಿಗೆಯ ಜಿಜ್ಞಾಸೆ