ಗುಟ್ಟಾಟ ಹುಡುಗಾಟ ಕೊನೆಗೆ ಬೊಬ್ಬಾಟ

 ನಾಕಂಡಂತೆ  ಬರಿ ಬಣ್ಣ ಎರಚೋದು ಮತ್ತು ಹೆಣ್ಣು ಮಕ್ಕಳು ಬೀದಿಗಿಳಿದು ಬಣ್ಣ ಆಡುವ ಸ್ವತಂತ್ರ ಇರುವುದಿಲ್ಲ ಅಷ್ಟೇ ಅಲ್ವಾ ..?  ಬರೀ ಹುಡುಗರು ಆಡೋದನ್ನು ನೋಡಿ ಹೊಟ್ಟೆ ಕಿಚ್ಚು ಪಡುತ್ತಾ , ಮತ್ತೆ ಮತ್ತೆ ಅಮ್ಮನ ಕೇಳ್ತಿದ್ದೆ ನಾನ್ಯಾಕೆ ಬಣ್ಣ ಅಡೋಹಾಗಿಲ್ಲ? ಮನೆಯೊಳಗೇ ಯಾಕೆ ಬಣ್ಣ ಎರಚೋಹಾಗಿಲ್ಲ ? ಬರಿ ಪ್ರಶ್ನೆಗಳು. ಆಗ ನನ್ನ ತಂದೆ ಅವರ ಚಿಕ್ಕವರು ಇರುವಾಗ  ಏನೆಲ್ಲಾ ಕಿಡಿಗೇಡಿ ಕೆಲಸ ಮಾಡುತ್ತಿದ್ದರು ಅಂತ ಹೇಳ್ತಾ ಇದ್ದಾಗ, ನಾನು ಅಷ್ಟು ಶಿಸ್ತೀನಿ ಮನುಷ್ಯ ,ನಾವು ಕೆಟ್ಟ ಕೆಲಸ ಮಾಡಿದ್ರೆ ಬಯ್ಯುವ ತಂದೆ ತಾವು ಮಾಡಿದನ್ನು ಎಷ್ಟು ಹೆಮ್ಮೆಯಿಂದ ಹೆಲ್ಹೋಳ್ಳುತ್ತಿದರೆ ಅಂತಾ ಆಶ್ಚರ್ಯ ಪಟ್ಟಿದ್ದೆ. 

ಶಿವರಾತ್ರಿ ನಂತರ ೭-೮ ವರ್ಷದಿಂದ ಹಿಡಿದು  ದೊಡ್ಡಹುಡುಗರು (ಬೀದಿ ಕಾಮಣ್ಣ ಅಂತಾ ಅಂತಾರೆ) ಮನೆ ಮನೆ ಹೋಗಿ ''ಕಾಮಣ್ಣ ಮಕ್ಳು ಬಂದೀವಿ, ಏನಾರ ಕೊಡ್ರಿ'' ಅಂತಾ ಕಿರುಚುತ್ತಾ , ಹಳೆ ಬಟ್ಟೆ , ಕಟ್ಟಿಗೆ,  ರದ್ದಿ ಎಲ್ಲವನ್ನು ಕಲೆಹಾಕಲು ಶುರು ಮಾಡುತ್ತಾರೆ. ಆ ಗುಂಪಿನಲ್ಲಿರುವ ಪುಟಾಣಿಗಳ ಕೆಲಸ ಯಾವ ಮನೆಯ ಹಿತ್ತಲಿನಲ್ಲಿ ಏನಾದ್ರು ಸಿಗುತ್ತಾ ಅಂತಾ ನೋಡಿ ಅದನ್ನು ಕಳ್ಳತನ ಮಾಡಿ, ಒಂದು ರಹಸ್ಯವಾದ ಜಾಗ ಹುಡುಕಿ ಎಲ್ಲ ವಸ್ತುಗಳನ್ನು ಅಲ್ಲಿ ಮುಚ್ಚಿಡುವುದು. ಈ ಪಿತೂರಿಯ ಮಜಾ ಏನೆಂದರೆ ಬೇಡಿ ಪಡೆಯೋಕಿಂತ ತುಡುಗು ಮಾಡುವುದರಲ್ಲಿರುವುದು. ನನ್ನ ತಂದೆ ಸೋದರಸಂಧಿಗಳೆಲ್ಲ ಚಿಕ್ಕವರಿದ್ದಾಗ ಇಂತಹ ಘನಕಾರ್ಯ ಮಾಡಿದ್ದರಂತೆ.

    ಈವೆಲ್ಲ ಕಥೆಗಳನ್ನು ಕೇಳುತ್ತಿದ್ದರೆ ಬರೀ ಬಣ್ಣ ಆಡೋದು ಲೇಸು.. ಈಯಾವ ತಾಪತ್ರೆಗೆ ಸಿಕ್ಕಿಹಾಕಿಕೊಳ್ಳೋದು ಬೇಡ ,ಮತ್ತೆ  ಬೀದಿಗಿಳಿದು ಜಗಳವಾಡಿ ಅವಮಾನ ಮಾಡಿಸಿಕೊಂಡ್ರೆ ? ಬೇಡಪ್ಪಾ.. ಅಂತಾ ದೂರದಿಂದ ಹುಡುಗರು ಆಡೋದನ್ನ ನೋಡಿ ಖುಷಿ ಪಟ್ಟೆ.

    ಈ ಗುಟ್ಟಾಟ ಹುಡುಗಾಟ ಎಷ್ಟು ಗಂಭೀರವಾಗುತ್ತದೆ ಎಂದರೆ ಕಳೆದ ವರ್ಷ ನಮ್ಮ ಅತ್ತೆಮನೆಯ ಮುಂಬಾಗಿಲನ್ನು ರಾತ್ರೋ ರಾತ್ರಿ ತೆಗೆದುಕೊಂಡು ಹೋಗಿ ಮರುದಿನ ಅದನ್ನು ಸುಡುವ ಪ್ರಯತ್ನ ನಡೆಯಿತು. ಇದು ನಮ್ಮ ಮಾವನವರಿಗೆ ತಿಳಿದು ಇನ್ನೇನು ಕಾಮಣ್ಣನ ಸುಡುವ ಹೊತ್ತಿಗೆ ಗುಂಪು  ಮಾಡಿಟ್ಟಿದ್ದ ಸುಡುವ ವಸ್ತುಗಳಲ್ಲಿದ್ದ ಬಾಗಿಲಿನ ಮೇಲೆ ಕುಳಿತರಂತೆ. ಅಬ್ಬಾ ! ಎಂಥ ಧೈರ್ಯ .. ನಮ್ಮ ಮಾವನರದ್ದು ಹಾಗು ಕಳು ಮಾಡಿದ ಆ ತುಂಟ ಹುಡುಗರದು. 

    ಅಷ್ಟೇ ಅಲ್ಲ ಬಾಗಲಕೋಟೆಯಲ್ಲಿರುವ ನನ್ನ ನಾದಿನಿಯ  ಮನೆ ನವೀಕರ ಸಂದರ್ಭದಲ್ಲಿ ತಮ್ಮ ಮನೆಗೆ ಹಾಕಿಸಿದ್ದ ಹೊಸ ಬಾಗಿಲು ,ಛಾವಣಿಗೆ ಅಂತಾ ಇಟ್ಟಿದ್ದ ಸಾವಿರಾರು ರೂಪಾಯಿ ಬೆಲೆಬಾಳುವ ಕಟ್ಟಿಗೆಯ ವಸ್ತುಗಳನ್ನೆಲ್ಲ ಅಕ್ಕಾ ಪಕ್ಕದ ಮನೆ ಮಕ್ಕಳು ಕದ್ದು ಸುಟ್ಟೆ ಹಾಕಿದ್ವು. ಇದು ತಿಳಿದ ನನ್ನ ನಾದನಿ ಅವರ ತಾಯಿಯೊಂಗಿದೆ ಜಗಳ  ಮಾಡಿ ಕೊನೆಗೆ ಅವರ ಜೊತೆ ಈಗ  ಮಾತು ಬಿಟ್ಟಿದ್ದಾಯ್ತು.


ಬಾಗಲಕೋಟೆಯಲ್ಲಿ ರಾಡಿಯಾಟ ಅಂತಾನೆ ಒಂದು ದಿನ ಇರುತ್ತಂತೆ . ರಾಡಿ ಅಂದ್ರೆ ಮಣ್ಣು ನೀರು ಕಲಿಸಿ ಅದನ್ನು ಓಕುಳಿಯಂತೆ ಆಡುತ್ತಾರಂತೆ. ಅಬ್ಬಾ ! ನಂಗಂತೂ ಹಂದಿಗಳೇ ಕಣ್ಣ ಮುಂದೆ ಬಂದ್ವು. ಬೇರೆ ಊರಿನಲ್ಲಿ ಈ ಪದ್ಧತಿ ಇರಬಹುದೇನೋ ಗೊತ್ತಿಲ್ಲ.

ಈ ಹಬ್ಬದಲ್ಲಿ ಹೆಣ್ಣು ಮಕ್ಕಳ ಕೆಲಸ ಏನು ? ಮನೆಮುಂದೆ ಬಣ್ಣದ ಬಣ್ಣದ ರಂಗೋಲಿ ಹಾಕೋದು , ಸಿಹಿ ತಿಂಡಿ ಮಾಡೋದು ,ಬಣ್ಣ ಆಡಿ ಬಂದ ಅಣ್ಣ ತಮ್ಮಂದಿರಿಗೆ ಎರೆಯಲು ನೀರು ಕೊಡುವುದು ಅಷ್ಟೇ ..ಆ ಕಾಲದಲ್ಲಿ .. ಈಗ ಬೀದಿಗಿಳಿಯದಿದ್ದರು ಮನೆಮಟ್ಟಿಗೆ ಹಿತ್ತಲಿನಲ್ಲಿ ಬಣ್ಣ ಆಡುವ ಸ್ವಾತಂತ್ರವಿದೆ.

ಒಟ್ಟಿನಲ್ಲಿ ನನಗಂತೂ ಒಣ ಬಣ್ಣ ಮತ್ತು ಓಕುಳಿ ಮನೆಮಟ್ಟಿಗೆ ಅಥವಾ ಸ್ನೇಹಿತರೊಂದಿಗೆ ಆಡುವ ಆಸೆ ಅಷ್ಟೇ.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸನಾತನ ''ಸುಧರ್ಮ''

E-motional !!!

ಮಲ್ಲಿಗೆಯ ಜಿಜ್ಞಾಸೆ