ಅಂತರ್ಜಾಲದಿಂದ ಮಾಯಾಜಾಲಕ್ಕೆ ಸಿಲುಕಿ
ಇದೆ ಮೋಹಜಾಲದ ಸುಂದರತೆಗೆ ಬೆರಗಾದ ನಾನು
ಮುಂಜಾನೆಯಿಂದ ಮುಸ್ಸಂಜೆ ತನಕ
ಎಲ್ಲಿ ನೋಡಿದರು ಜಾಲವೇ!?
ಮನೆಯ ಮೂಲೆ ಮೂಲೆಯಲ್ಲಿ
ಕೈಬಿಡದ ಅಂತರ್ಜಾಲ ಕೈಸಿಗದ ಕಸಬರಿಗೆ
ಯಾವ ಮೋಹಜಾಲಕ್ಕೆ ಸಿಕ್ಕಿ
ಮಾಯಾಜಾಲವನ್ನು ಕಡೆಗಣಿಸಿ
ಅದೇ ಜಾಲ ಈಗ ಕಣ್ಣಸುತ್ತಾಗಿ
ನಡೆದಾಡುವ ಹಾದಿಯಲೆಲ್ಲ ಕಾಲಿಗೆ ಸಿಕ್ಕು
ಉಡುಗೆ ಮೇಲೆ ಅಡುಗೆ ಮನೆಯಲ್ಲಿ
ಹಾಸಿಗೆ ಹೊದಿಕೆ ಮೇಜು ಕುರ್ಚಿ
ಕೂಡುವ ಮುನ್ನ ಝಾಡಿಸಿ
ಎಣ್ಣೆ ನೀರು ಶುಕ್ರವಾರ ಶನಿವಾರ ಮಾಡಿ
ಕೊನೆಗೆ ಒಣಗಿದ ತಲೆಯ ಮೇಲಿಂದ ಉದುರಿ
ಮನೆಯಲ್ಲಾ ಕಸಮಾಡಿದೆ ಈ ಮಾಯಾಜಾಲ
ಕಾಮೆಂಟ್‌ಗಳು