ಪೋಸ್ಟ್‌ಗಳು

ಜೂನ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶೂನ್ಯವಾದ ದುಂಡಿನ ಕನಸು.. ಜಾಜಿ ಸೂಜಿ ನೋಡಿ ಅರಳಿತು ಮನಸು ..

ಇಮೇಜ್
 ಹಿತ್ತಲಿನ  ಗಿಡ  ಮದ್ದಲ್ಲವೆಂದರೆ ಏಕೆ ಹಂಬಲಿಕೆ  ವರ್ಷಾನು ವರ್ಷ ಕಾಡಿತು ಅಗಲಿಕೆ  ಬೇಸಿಗೆಯ ಬೇಗೆಯಲ್ಲೂ ಬೀರಿತು ಕಂಪು ಅಂಗಳಕೆ  ತಂಗಾಳಿಯಲಿ ತೇಲಿ ಅಲೆಅಲೆಯಾಗಿ ಹರಡಿತು  ದುಂಡಿನ ಕನಸು ಶೂನ್ಯ ವಾಯಿತು  ಸುತ್ತಿ ಸುತ್ತು ಹುಡುಕುತ್ತಾ  ಸುಸ್ತಾಯಿತು      ಮೆಲ್ಲಗೆ ಮುಗಿಲಿಗೆ ಹರಡಿ ಅದರ ಮಗ್ಗಿ  ಮೊದಲ ಮೊಗ್ಗಿನ ಸಂಭ್ರಮ  ಮುಖ ಹಿಗ್ಗಿ ಹಾತುರತೆ  ಕಾತುರತೆ ಗೊಂಚಲಗಳು ಸುಗ್ಗಿ   ಈ ಸದ್ದಿಲ್ಲದ ಗಿಡದ ಹಂಬಲ ಸದಾ  ಹಿತ್ತಲಿನ ಚಿಲಕ ಹಾಕದೆ ಮುಚ್ಚದೆ ಕದಾ  ಸೊಬಗನ್ನು ವರ್ಣಿಸಲಾಗದ ನನ್ನ ಪದಾ  ನೋಡಲು ಮೊಗ್ಗಿನ ಅರಳುವಿಕೆಯ ಬೆಳೆವಣಿಗೆ  ಸಾಲಾಗಿ ಫೋಟೋ ವಿಡಿಯೋಗಳ ಮೆರವಣಿಗೆ  ನನ್ನ ಸಂತಸಕ್ಕೆ ಪೂರಕವಾಗದ ನನ್ನ ಬರವಣಿಗೆ  ಹಂಬಲದ  ಬೇಗೆಗೆ ಕೊನೆಗೂ ಸಿಕ್ಕಿತು ಬೀಸಣಿಗೆ

ಮರಳಿ ಕಣ್ಣಲಿ ಬಂತು ತುಂತುರು

ಇಮೇಜ್
 ಮರವಿಲ್ಲದ ನೆರಳು  ಸೆರಗಿಲ್ಲದ ಕರಳು  ಬಿಸಿಲು ಚಳಿಯಲ್ಲೂ ಅರಳು  ಆಸರೆಯ ಆ ಬೆರಳು  ಅವಳಿಲ್ಲದ ತವರು ಬೋಳು  ತಿರುಗಿತು ಕಾಲಚಕ್ರದ ಒರಳು  ಮಾಡಿ ಎಲ್ಲವನ್ನು ನುಚ್ಚುನೂರು  ನೆನಪೇ ಬರೀ ಬರಲು  ಬಾರದ ಅವಳ ಹಾದಿ  ಕಾತುರದಿಂದ ಕಾಯಲು  ಕರಳಿಂದ ಬಂದ ಬಳ್ಳಿಯ ಆ ಚಿಗುರು  ಬೇರು ಬೇರೆಯಾಗಿ ನಿಂತರು ಉಸಿರು  ಮರಳಿ ಕಣ್ಣಲಿ ಬಂತು ತುಂತುರು 
ಇಮೇಜ್
  " ಆರೋಗ್ಯವೇ ಭಾಗ್ಯ " ಎನ್ನುವ ಗಾದೆ ಮಾತು ಕೇವಲ ಶಾಲೆಯ ಪ್ರಬಂಧದ ವಿಷಯವಾಗಿ ಉಳಿದಿದೆ . ನಮ್ಮಲ್ಲಿ ಎಷ್ಟು ಮಂದಿ ಇದನ್ನು ಸೂಕ್ಷ್ಮವಾಗಿ ಪರಿಗಣಿಸಿ ನಮ್ಮ ಆರೋಗ್ಯದ ಮೇಲೆ   ಹೆಚ್ಚಿನ ಕಾಳಜಿ ವಹಿಸಿದ್ದೆವೆ ? ಇಡೀ ವಿಶ್ವವೇ ಕೋವಿಡ್ ಮಹಾಮಾರಿಯಿಂದ   ಬಳಲುತ್ತಿರುವಾಗ ಬಹುಷಃ ನಮ್ಮ ಆರೋಗ್ಯ ನಮ್ಮ ಕೈಯಲ್ಲಿಲ್ಲದೆ ಇದನ್ನು ಒಂದು ವ್ಯವಸ್ಥೆಯನ್ನಾಗಿಸಿ ನಮ್ಮ ಸರ್ಕಾರದ ಕೈಗೆ ಕೊಟ್ಟಿದ್ದಿವೇನೊ ಅಂತ ಅನಿಸುತ್ತಿದೆ. ಎಲ್ಲರೂ ಅಂದ್ರೆ ವಯಸ್ಸಿನ ಬೇಧವಿಲ್ಲದೆ ಇಪ್ಪತ್ತರ ಹರೆಯರಿಂದ ಹಿಡಿದು ವಯೋ ವೃದ್ಧರ ತನಕ ಎಲ್ಲರೂ ಅಸುನೀಗಿದ್ದಾರೆ.ನಾವೇನು ಮಾಡೋಕ್ಕೆ ಆಗತ್ತೆ ಅಂತ ನಮ್ಮ ವರ್ತನೆಯ ಸಮರ್ಥನೆ ಮಾಡಿಕೊಳ್ಳಬಹುದು . ಪರಿಸ್ಥಿತಿ ಹೀಗಿದ್ದಾಗ ನಮ್ಮ ವೈಯಕ್ತಿಕ ಆರೋಗ್ಯದ ಸ್ಥಿತಿಗಿಂತ ದೇಶದ ವ್ಯವಸ್ಥೆಯು ಅನಾರೋಗ್ಯದ ಪರಿಸ್ಥಿತಿಯಲ್ಲಿದೆ ಅನ್ನುವುದು ಎದ್ದು ಕಾಣುತ್ತದೆ . ಎಲ್ಲದಕ್ಕೂ ಸರ್ಕಾರದ ಕಡೆ ಕೈಮಾಡಿ ತೋರಿಸುವ ನಾವು ನಮ್ಮ ಜವಾಬ್ದಾರಿಯ ಬಗ್ಗೆ ಉಸಿರು ಒಡೆಯುವುದಿಲ್ಲ . ಅಮೇರಿಕಾ ಯುರೋಪ್ ಸರ್ಕಾರಗಳು ಸಹಾನುಭೂತಿಯೊಡನೆ ಧನಸಹಾಯ ಹಾಗು ಉಪಕರಣಗಳ ಸರಬರಾಜಿನೊಂದಿಗೆ ಭಾರತಕ್ಕೆ ಸಾಂತ್ವಾನ   ನೀಡುತ್ತಿವೆ . ಈ ಒಂದು ಹಾದಿಯಲ್ಲಿ ಬ್ರಿಟನ್ನಿನ್ನ ಕನ್ನಡಿಗರು ನಮ್ಮ ತಾಯ್ನಾಡಿನ ಸೇವೆಗೆ ಮುಂದಾಗಿದ್ದಾರೆ...