ಶೂನ್ಯವಾದ ದುಂಡಿನ ಕನಸು.. ಜಾಜಿ ಸೂಜಿ ನೋಡಿ ಅರಳಿತು ಮನಸು ..

 ಹಿತ್ತಲಿನ  ಗಿಡ  ಮದ್ದಲ್ಲವೆಂದರೆ ಏಕೆ ಹಂಬಲಿಕೆ 

ವರ್ಷಾನು ವರ್ಷ ಕಾಡಿತು ಅಗಲಿಕೆ 

ಬೇಸಿಗೆಯ ಬೇಗೆಯಲ್ಲೂ ಬೀರಿತು ಕಂಪು ಅಂಗಳಕೆ 


ತಂಗಾಳಿಯಲಿ ತೇಲಿ ಅಲೆಅಲೆಯಾಗಿ ಹರಡಿತು 

ದುಂಡಿನ ಕನಸು ಶೂನ್ಯ ವಾಯಿತು 

ಸುತ್ತಿ ಸುತ್ತು ಹುಡುಕುತ್ತಾ  ಸುಸ್ತಾಯಿತು     


ಮೆಲ್ಲಗೆ ಮುಗಿಲಿಗೆ ಹರಡಿ ಅದರ ಮಗ್ಗಿ 

ಮೊದಲ ಮೊಗ್ಗಿನ ಸಂಭ್ರಮ  ಮುಖ ಹಿಗ್ಗಿ

ಹಾತುರತೆ  ಕಾತುರತೆ ಗೊಂಚಲಗಳು ಸುಗ್ಗಿ

 

ಈ ಸದ್ದಿಲ್ಲದ ಗಿಡದ ಹಂಬಲ ಸದಾ 

ಹಿತ್ತಲಿನ ಚಿಲಕ ಹಾಕದೆ ಮುಚ್ಚದೆ ಕದಾ 

ಸೊಬಗನ್ನು ವರ್ಣಿಸಲಾಗದ ನನ್ನ ಪದಾ 


ನೋಡಲು ಮೊಗ್ಗಿನ ಅರಳುವಿಕೆಯ ಬೆಳೆವಣಿಗೆ 

ಸಾಲಾಗಿ ಫೋಟೋ ವಿಡಿಯೋಗಳ ಮೆರವಣಿಗೆ 

ನನ್ನ ಸಂತಸಕ್ಕೆ ಪೂರಕವಾಗದ ನನ್ನ ಬರವಣಿಗೆ 

ಹಂಬಲದ  ಬೇಗೆಗೆ ಕೊನೆಗೂ ಸಿಕ್ಕಿತು ಬೀಸಣಿಗೆ






ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸನಾತನ ''ಸುಧರ್ಮ''

Quantitative Easing!!!

ಮಲ್ಲಿಗೆಯ ಜಿಜ್ಞಾಸೆ