"ಆರೋಗ್ಯವೇ ಭಾಗ್ಯ" ಎನ್ನುವ ಗಾದೆ ಮಾತು ಕೇವಲ ಶಾಲೆಯ ಪ್ರಬಂಧದ ವಿಷಯವಾಗಿ ಉಳಿದಿದೆ. ನಮ್ಮಲ್ಲಿ ಎಷ್ಟು ಮಂದಿ ಇದನ್ನು ಸೂಕ್ಷ್ಮವಾಗಿ ಪರಿಗಣಿಸಿ ನಮ್ಮ ಆರೋಗ್ಯದ ಮೇಲೆ  ಹೆಚ್ಚಿನ ಕಾಳಜಿ ವಹಿಸಿದ್ದೆವೆ? ಇಡೀ ವಿಶ್ವವೇ ಕೋವಿಡ್ ಮಹಾಮಾರಿಯಿಂದ  ಬಳಲುತ್ತಿರುವಾಗ ಬಹುಷಃ ನಮ್ಮ ಆರೋಗ್ಯ ನಮ್ಮ ಕೈಯಲ್ಲಿಲ್ಲದೆ ಇದನ್ನು ಒಂದು ವ್ಯವಸ್ಥೆಯನ್ನಾಗಿಸಿ ನಮ್ಮ ಸರ್ಕಾರದ ಕೈಗೆ ಕೊಟ್ಟಿದ್ದಿವೇನೊ ಅಂತ ಅನಿಸುತ್ತಿದೆ. ಎಲ್ಲರೂ ಅಂದ್ರೆ ವಯಸ್ಸಿನ ಬೇಧವಿಲ್ಲದೆ ಇಪ್ಪತ್ತರ ಹರೆಯರಿಂದ ಹಿಡಿದು ವಯೋ ವೃದ್ಧರ ತನಕ ಎಲ್ಲರೂ ಅಸುನೀಗಿದ್ದಾರೆ.ನಾವೇನು ಮಾಡೋಕ್ಕೆ ಆಗತ್ತೆ ಅಂತ ನಮ್ಮ ವರ್ತನೆಯ ಸಮರ್ಥನೆ ಮಾಡಿಕೊಳ್ಳಬಹುದು. ಪರಿಸ್ಥಿತಿ ಹೀಗಿದ್ದಾಗ ನಮ್ಮ ವೈಯಕ್ತಿಕ ಆರೋಗ್ಯದ ಸ್ಥಿತಿಗಿಂತ ದೇಶದ ವ್ಯವಸ್ಥೆಯು ಅನಾರೋಗ್ಯದ ಪರಿಸ್ಥಿತಿಯಲ್ಲಿದೆ ಅನ್ನುವುದು ಎದ್ದು ಕಾಣುತ್ತದೆ. ಎಲ್ಲದಕ್ಕೂ ಸರ್ಕಾರದ ಕಡೆ ಕೈಮಾಡಿ ತೋರಿಸುವ ನಾವು ನಮ್ಮ ಜವಾಬ್ದಾರಿಯ ಬಗ್ಗೆ ಉಸಿರು ಒಡೆಯುವುದಿಲ್ಲ.

ಅಮೇರಿಕಾ ಯುರೋಪ್ ಸರ್ಕಾರಗಳು ಸಹಾನುಭೂತಿಯೊಡನೆ ಧನಸಹಾಯ ಹಾಗು ಉಪಕರಣಗಳ ಸರಬರಾಜಿನೊಂದಿಗೆ ಭಾರತಕ್ಕೆ ಸಾಂತ್ವಾನ  ನೀಡುತ್ತಿವೆ. ಒಂದು ಹಾದಿಯಲ್ಲಿ ಬ್ರಿಟನ್ನಿನ್ನ ಕನ್ನಡಿಗರು ನಮ್ಮ ತಾಯ್ನಾಡಿನ ಸೇವೆಗೆ ಮುಂದಾಗಿದ್ದಾರೆ. ಚಾರಿಟಿ ಸಂಸ್ಥೆಯಾದ ಕನ್ನಡ ಬಳಗ ಯುಕೆ  ರೋಟರಿ ಕ್ಲಬ್ ಬೆಂಗಳೂರು ಸಹಯೋಗದಿಂದ ಆಕ್ಸಿಜನ್ ಮಷೀನ್ ಗಳ ಪೂರೈಕೆಯ ಸಲುವಾಗಿ ಈಗಾಗಲೇ £31000 ಕ್ಕೊ ಹೆಚ್ಚು  ದೇಣಿಗೆ ಸಂಗ್ರಹಿಸಿದ್ದು, ಈಗಾಗಲೇ ೭೦ ಪ್ರೀಮಿಯಂ ಗ್ರೇಡ್ ಆಕ್ಸಿಜನ್ ಕಾನ್ಸನ್ಟ್ರೇಟೋರ್ಸ್ ಗಳನ್ನು ಬೆಂಗಳೂರಿಗೆ ಕಳಿಸಿದೆ.

ಯುಕೆ ಭಾರತೀಯ ಸಮುದಾಯದ ನಿಸ್ಸ್ವಾರ್ಥ ಹಾಗು ಧಾರಾಳ ಹಸ್ತದಿಂದ ಸಂಗ್ರಹವಾದ  ಕೋಟ್ಯಂತರ ರೂಗಳು ಈಗಾಗಲೇ ಭಾರತದಲ್ಲಿ ಆಪ್ತಕಾರ್ಯದಲ್ಲಿ ಬಳಸಲಾಗಿದೆ, ಭಾರತೀಯ ಹೈ ಕಮಿಷನ್ ಮೂಲಕ ರೆಡ್ ಕ್ರಾಸ್ ನಿಂದ ಭಾರತದ ಕೇಂದ್ರ ಸಚಿವಾಲಯಕ್ಕೆ ಮೊತ್ತ ತಲುಪಿ ಅದು ತುರ್ತು ಅವಶ್ಯಕ ರಾಜ್ಯಕ್ಕೆ ಸಹಾಯ ಕಲ್ಪಿಸುತ್ತಿದೆ.

ಇಲ್ಲಿಯವರಿಗೆ ಕನ್ನಡಿಗರುಯುಕೆ ವತಿಯಿಂದ ಹತ್ತು ಸಾವಿರ ಪೌಂಡ್ಗಳಿಗಿಂತಲೂ ಹೆಚ್ಚು ಮೊತ್ತ ಸೇರಿದ್ದು ಅರ್ಧದಷ್ಟು ಹಣವನ್ನು ಮುಖ್ಯಮಂತ್ರಿಗಳ ಕೋವಿಡ್‌-೧೯ ಪರಿಹಾರ ನಿಧಿಗೆ ವರ್ಗಾಯಿಸಲಾಗುವುದಾಗಿ ಹಾಗು ಉಳಿದ ಹಣವನ್ನು ಆಸ್ಪತ್ರೆಗಳಿಗೆ  ನೇರವಾಗಿ ಆಕ್ಸಿಜನ್ ಕಾನ್ಸನ್ಟ್ರೇಟೋರ್ಸ್ ಮತ್ತು ಇನ್ನಿತರ ಉಪಕರಣಗಳನ್ನು ಪಡೆಯಲು ಬಳಸಲಾಗುತ್ತದೆ ಮತ್ತು ಹೆಚ್ಚು ಅಗತ್ಯವಿರುವ ಜಿಲ್ಲೆಗಳಿಗೆ ಕಳುಹಿಸಲಾಗುತ್ತದೆ.

ಎಲ್ಲ ನಿಧಿ ಸಂಗ್ರಹ ಹಾಗು ಕರ್ನಾಟಕ ಸರ್ಕಾರದೊಂದಿಗೆ ಸಮಾಲೋಚನೆ ನಡೆಸುತ್ತಿರುವ ಅನಿವಾಸಿ ಕನ್ನಡಿಗರ(ಕನ್ನಡಿಗರುಯುಕೆ) ಪರವಾಗಿ ಶ್ರೀ.ಗಣಪತಿ ಭಟ್ ಅವರು ತಮ್ಮ ಸಂಸ್ಥೆಯ ಕೆಲವು ಯೋಜನೆಗಳಾದ ;

ಧನ ಸಹಾಯದ ಸಮಾಂತರದಲ್ಲಿ UN ಅಭಿವೃದ್ಧಿ ಕಾರ್ಯಕ್ರಮ SDGs ಸಹಯೋಗದಿಂದ  ಸ್ಥಳೀಯ ಸಂಘಗಳನ್ನು ಕಟ್ಟಿ ಜನಜಾಗೃತಿಯನ್ನು ಮೂಡಿಸುವುದರಲ್ಲಿ ಆಂಗ್ಲ ಕನ್ನಡಿಗರು ಬಹಳ ಶ್ರಮಿಸುತ್ತಿದ್ದಾರೆ ಮತ್ತು ಕರ್ನಾಟಕದ ಜನರಿಗೆ ಯಾವುದೇ ರೀತಿಯ ಸಹಾಯ ಮಾಡುವಲ್ಲಿ ನಾವು ಮುಂದಾಗುತ್ತೇವೆ ಎಂದು ಕೋರಿದ್ದಾರೆ.

ಕಳೆದ ತಿಂಗಳಿನ ನಂತರ ಯುಕೆ ಸ್ವಯಂ ಸೇವಕರು ಬಾರಿ ಸಂಗ್ರಹವಾದ ಹಣವನ್ನು ದಕ್ಷ ಹಾಗು ಪ್ರಾಯೋಗಿಕ ರೀತಿಯಲ್ಲಿ ಕರ್ನಾಟಕದ ಅತ್ಯಂತ ಪೀಡಿತ ಪ್ರದೇಶಗಳನ್ನು ಗುರುತಿಸಿ ,ಅಲ್ಲಿನ ಸ್ಥಳೀಯ ಕಾರ್ಯಕಾರಿ ಅಧಿಕಾರಿಗಳ ಸಹಯೋಗದಿಂದ ಉಪಯೋಸುವಲ್ಲಿ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಭಗೀರಥ ಪ್ರಯತ್ನ ನಡೆಸುತ್ತಿದ್ದಾರೆ. ). ದೇಣಿಗೆಯ ಸಂಗ್ರಹದ ಮಾಹಿತಿಯನ್ನು "ಕನ್ನಡಿಗರುಯುಕೆ" ಜಾಲತಾಣದಲ್ಲಿ ಪ್ರಕಟಿಸಲಾಗುವುದು.

ಭಾರತದಲ್ಲಿ ನಾವು ತಿಳಿದುರುವಂತೆ ಹಣದ ಕೊರತೆಯಿಲ್ಲ ಆದರೆ ವ್ಯವಸ್ಥೆಯ(ತುರ್ತು ಹಾಗು ನಿರ್ಗತಿಕರಿಗೆ ತಕ್ಷಣ ಸಹಾಯ ತಲಪುವದರಲ್ಲಿ) ಅಂತರವಿದೆ. ಜನರ ವರ್ತನೆಯಲ್ಲಿ ಪರಿವರ್ತನೆಯಾಗಿ ಸಾಂಕ್ರಾಮಿಕ ರೋಗದಿಂದ ಮುಕ್ತರಾಗಿ ಒಂದು ಆರೋಗ್ಯಕರ (ದೈಹಿಕ ಮತ್ತು ಮಾನಸಿಕ) ಸಮಾಜದ ಸೃಷ್ಟಿಯಾಗಬೇಕಾಗಿದೆ.

ಅಷ್ಟೇ ಅಲ್ಲದ ಯುಕೆ ಕನ್ನಡಿಗರು ವ್ಯಯಕ್ತಿಕವಾಗಿ ಸ್ನೇಹಿತ ಸಂಬಂಧಿಗಳು ಶಕ್ತ್ಯಾನುಸಾರ ಲಕ್ಷಾಂತರ ರೂಗಳನ್ನು ರೋಗಪೀಡಿತ  ಕುಟುಂಬಳಿಗೆ ನೇರವಾಗಿ ನೆರವು ನೀಡುತ್ತಿದ್ದಾರೆ.

Kannada Prabha

Udayavani

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸನಾತನ ''ಸುಧರ್ಮ''

Quantitative Easing!!!

ಮಲ್ಲಿಗೆಯ ಜಿಜ್ಞಾಸೆ