ಮರಳಿ ಕಣ್ಣಲಿ ಬಂತು ತುಂತುರು
ಮರವಿಲ್ಲದ ನೆರಳು
ಸೆರಗಿಲ್ಲದ ಕರಳು
ಬಿಸಿಲು ಚಳಿಯಲ್ಲೂ ಅರಳು
ಆಸರೆಯ ಆ ಬೆರಳು
ಅವಳಿಲ್ಲದ ತವರು ಬೋಳು
ತಿರುಗಿತು ಕಾಲಚಕ್ರದ ಒರಳು
ಮಾಡಿ ಎಲ್ಲವನ್ನು ನುಚ್ಚುನೂರು
ನೆನಪೇ ಬರೀ ಬರಲು
ಬಾರದ ಅವಳ ಹಾದಿ
ಕಾತುರದಿಂದ ಕಾಯಲು
ಕರಳಿಂದ ಬಂದ ಬಳ್ಳಿಯ ಆ ಚಿಗುರು
ಬೇರು ಬೇರೆಯಾಗಿ ನಿಂತರು ಉಸಿರು
ಮರಳಿ ಕಣ್ಣಲಿ ಬಂತು ತುಂತುರು
ಕಾಮೆಂಟ್‌ಗಳು