ಬಂತು ಬಂತೂ ನಮಗೂ ಬಂತು !!

ಶುಂಠಿ ನೀರು ಮೆಣಸಿನ ಸಾರು 

ಹಾಸಿಗೆಯಿಂದ ಇಳಿದಿಲ್ಲ ಸ್ವೆಟರ್ ತೆಗೆದಿಲ್ಲ 


ಇದೇನು ಬಾಣಂತನದ ನೆನಪು ಬಂತಾ 

ಇಲ್ಲಾ! ಕೊರೊನ ರೋಗ ಅಂಟಿತಾ!


ಹಗಲು ರಾತ್ರಿಯ ಶುದ್ಧಿ ಇಲ್ಲಾ 

ಮನೆಯ ಹೊರಗೆ ಹೋಗೋಹಾಗಿಲ್ಲ 


ಮೈಕೈ ನೋವು ಜ್ವರದ ಬಾಧೆ 

ಕೆಮ್ಮಿ ಕೆಮ್ಮಿ ಸುಸ್ತಾಗೋದೇ 


ವಾಸನೆ ಬಾಯಿ ರುಚಿ  ಇಲ್ಲವಾಯಿತು

ಮಕ್ಕಳಿಗೆ ಉಬರ್ ಈಟ್ಸ್ ಡೆಲಿವರೂ ಶುರುವಾಯಿತು 


ಸ್ನೇಹಿತರು ಕೆಲವರು ತಿಳಿ ಸಾರು ಹುಗ್ಗಿ ಅಂದರು 

ಕೆಲವರು ಬಸರಿಯ ಬೈಕೆ ಅಂತ ವಡೆ ಆಂಬೊಡೆ ತಂದರು 


ಕಾಂಪಿಟಿಷನ್ ನಲ್ಲಿ ರಾತ್ರಿಯೆಲ್ಲಾ ಕೆಮ್ಮಿ ಎಲ್ಲಾರು  

ನೋಡು ನಿನ್ನೆ ಬಸರಿಯ ಊಟದ ಮಹತ್ವ ಎಂದರು 


ಎಲ್ಲಿಂದ ಬಂತಪ್ಪ ಈ ರೋಗ ಅಂತ ನಾನು 

ವಾಟ್ಸಪ್ಪ್ ಮಾಡಿದೆ ಕೂಡಲೇ ತುಗೊಂಡು ಫೋನು 


ಆಫೀಸಿನ ಮಂದಿಯೆಲ್ಲಾ ಕೊಟ್ಟರು ಆಸ್ಥೆ 

ಒಬ್ಬಬ್ಬರಿಗೂ ಒಂದೊಂದು ಅಸ್ವಸ್ಥತೆ 


ತಲೆ ನೋವು ಅಂತ ಒಬ್ಬರಾದರೆ 

ನೆಗಡಿ ಅಂತ ಮತ್ತೊಬ್ಬರು 


ಸ್ನೇಹಿತರು ಹಂಚಿಕೊಂಡರು ತಮ್ಮ  ವ್ಯಥೆ 

ವೀರ ಯೋದ್ಧರ ಹೋರಾಟದ ಗಾಥೆ 


ಕಳೆದ ವರ್ಷ ಇದೆ ಕ್ರಿಸ್ಮಸ್ ರಜೆ 

ವಿಶ್ವಕ್ಕೆ ಬಂತು ಕೋವಿಡ್ ಸಜೆ 


ಊರಿಗೆ ಮುಂಚೆ ಹಾಲಿಡೇ ಅಂತ ಮಕ್ಕಳು ಕುಣಿದಾಡಿ 

ಟ್ರಾವೆಲ್ ಬುಕಿಂಗ್ ಎಲ್ಲಾ  ಕೊನೆಗೆ ಕ್ಯಾನ್ಸಲ್ ಮಾಡಿ 


ಮತ್ತೆ ಇದೆ ಕ್ರಿಸ್ಮಸ್ ಹಾಲಿಡೇಸ್!

ಹೋಂ ಕ್ವಾರಂಟೈನ್ ! ನೋ ವೇಸ್ !! 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸನಾತನ ''ಸುಧರ್ಮ''

E-motional !!!

ಮಲ್ಲಿಗೆಯ ಜಿಜ್ಞಾಸೆ