ಸಂಪ್ರದಾಯದಲ್ಲಿ ವಿನ್ಯಾಸ; ಭಾರತೀಯ ಕೈಮಗ್ಗದ ವಿಶೇಷ
ಇಳಕಲ್ ಸೀರೆ ಉಟ್ಕೊೊಂಡು, ಮೊಣಕಾಲ್ ಗಂಟ ಎತ್ಕೊೊಂಡು, ಏರಿ ಮೇಲೆ ಎರಿ ಬಂದ್ಲು ನಾರಿ... ಬುತ್ತಿಿ ತುಂಬ ಪ್ರೀತಿ ತಂದ್ಲು ಗೌರಿ... ಮಲ್ಲಿಗೆ ಈ ಮಲ್ಲಿಗೆ, ಆಹಾ ಮೈಸೂರು ಮಲ್ಲಿಗೆ.. ಈ ಹಾಡು ಕೇಳಿದಾಗಲೆಲ್ಲ ನೆನಪಾಗುವುದು ಭಾರತೀಯ ಕೈಮಗ್ಗ. ಲಂಡನ್‌ನಲ್ಲಿ ಕೈ ಮಗ್ಗದ ಮಾತೆಲ್ಲಿಂದ ಎಂದುಕೊಂಡು ಸುಮ್ಮನಿದ್ದೆೆವು. ಆದರೆ ಈಗ ಎಲ್ಲಿ ನೋಡಿದರಲ್ಲಿ ಕೈಮಗ್ಗದ್ದೇ ಚರ್ಚೆ. ಭಾರತೀಯ ಕೈಮಗ್ಗಕ್ಕೆೆ ಇರುವ ವೈಶಿಷ್ಟ್ಯವೇ ಅದು. ಕೈಮಗ್ಗ ಭಾರತ ಸಂಪ್ರದಾಯದ ಹೆಮ್ಮೆೆ ಮತ್ತು ಅದರ ಸಾಂಸ್ಕೃತಿಕ ವೈಭವದ ಅಭಿವ್ಯಕ್ತಿಿಯಾಗಿದೆ. ವಾಸ್ತವವಾಗಿ, ಕೈಮಗ್ಗ ಕ್ಷೇತ್ರವು ಪ್ರಾಾಚೀನ ಕಾಲದಿಂದಲೂ ಮಹತ್ವವನ್ನು ಪಡೆಯುತ್ತಲೇ ಇದೆ. ಭಾರತೀಯ ಕೈಮಗ್ಗದ ಮೂಲ ಅರ್ಥವೆಂದರೆ ಸಂಪ್ರದಾಯಗಳನ್ನು ಹಾಗೇ ಇಟ್ಟುಕೊಂಡು ವಿನ್ಯಾಾಸಗಳನ್ನು ರಚಿಸುವುದು. ಇದೇ ಕಾರಣಕ್ಕೆೆ ಈ ವಲಯವು ಯಾವಾಗಲೂ ಬೇಡಿಕೆಯಲ್ಲಿದೆ. ಹಿಂದಿನ ಕಾಲದಲ್ಲಿ ನೇಕಾರರು, ಕಸೂತಿ ಮತ್ತು ಮುದ್ರಕರು ತಮ್ಮ ಕೌಶಲದಿಂದ ಕೈಯಾರೆ ಅದ್ಭುತಗಳನ್ನು ಮಾಡುತ್ತಿಿದ್ದರು. ಆದರೆ, ಈ ವಲಯವು ಅಭಿವೃದ್ಧಿಿಯ ಕಾರ್ಯಗಳನ್ನು ಸರಳಗೊಳಿಸುವ ಉದ್ದೇಶದಿಂದ ವಿವಿಧ ಯಂತ್ರಗಳಿಗೆ ಜನ್ಮ ನೀಡಿದೆ. ಪ್ರಾಾಚೀನ ಕಾಲದಿಂದ ಇಲ್ಲಿಯವರೆಗೆ, ಭಾರತೀಯ ಕೈಮಗ್ಗವು ದೇಶಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ದಿಕ್ಕಿಿನಲ್ಲಿ ಸ್ಥಿಿರವಾಗಿ ಪ್ರಯಾಣಿಸಿದೆ. ವಿಶ್ವದ ಎರಡನೇ ಅತಿದೊಡ್ಡ ವಲಯವಾಗಿದ್ದು, ಭಾರತದಲ್ಲಿ 60 ಲಕ್ಷಕ...