ಸುವರ್ಣ ವರ್ಷದ ನೆನಪು ಅಮೃತ ಘಳಿಗೆಯಲ್ಲಿ

 ये शुभ दिन है हम सबका

लहरा लो तिरंगा प्यारा 🇮🇳

ನಮ್ಮ ದೇಶದ ಸ್ವತಂತ್ರ ಹೋರಾಟದ ಇತಿಹಾಸ ನಮ್ಮ ಪಠ್ಯದಲ್ಲಿ ಹಾಗು ಸಿನೆಮಾಗಳಲ್ಲಿ ನೋಡಿದ್ದೇವೆ. ನಮ್ಮ ಸ್ವತಂತ್ರ ಹೋರಾಟದ ಕಥೆಗಳು ನಮ್ಮನ್ನು ಭಾವುಕರನ್ನಾಗಿಸುವುದರ ಜೊತೆಗೆ ನಮ್ಮಲ್ಲಿ ಆಕ್ರೋಶವನ್ನು ಉಂಟುಮಾಡುತ್ತದೆ. ಆದರೆ ಭಾರತ ಈಗೆ ಪ್ರಪಂಚವನ್ನೇ ಎದುರಿಸಿ ಎಲ್ಲ ಕ್ಷೇತ್ರದಲ್ಲೂ ಬೃಹದ್ಸಾಧನೆ ಮಾಡುತ್ತಲೇಯಿದೆ. ಆಗಸ್ಟ್ ೧೫ ಹತ್ತಿರ ಬಂದಂತೆ ನಮ್ಮಲಿ ದೇಶ ಪ್ರೇಮ ಹೆಚ್ಚಾಗಿ ಹುಚ್ಚಾಗುತ್ತೇವೆ. ಆದರೆ ಈ ಬಾರಿ ''ಹರ್ ಘರ್ ತಿರಂಗ'' ಅಭಿಯಾನ ಒಂದು ವಿಶೇಷ ವಿಚಿತ್ರ ಭಾವನೆ ನಮ್ಮೆಲ್ಲರ ಮನದಲ್ಲಿ ಮೂಡಿಸುತು. ಎಲ್ಲರು ಹೋರಾಡಿದ ಭಾರತೀಯರೆಂಬ ಹೆಮ್ಮ ಸಹಜವಾಗಿಯೇ ಮೂಡಿತು. ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಲಿಲ್ಲವಾದರೂ ಅದರ ಶಾಲೆಯ ಆಚರಣೆಯ ಸಂಭ್ರಮದಲ್ಲಿ ಭಾಗಿಯಾಗಿದ್ದೆ ಅಂತ ಹೆಮ್ಮೆಯಿಂದೆ ಹೇಳಿಕೊಳ್ಳುತ್ತೇನೆ. ''ಏ ಮೇರೇ ವತನ್ ಕೆ ಲೋಗೋ ಝರ ಆಂಖ ಮೇ ಭರಲೋ ಪಾನಿ'' ಈಹಾಡು ನಾನು ಮೊದಲ ಬಾರಿಗೆ ಯಾವಾಗ ಕೇಳಿದ್ದೇನೋ ಗೊತ್ತಿಲ್ಲ ಆದರೆ ಎಂಟನೆಯ ತರಗತಿಯಲ್ಲಿ ಸ್ವಾತಂತ್ರ ದಿನದ ಅಂಗವಾಗಿ ನಡೆಯಲಿದ್ದ ಕಾರ್ಯಕ್ರಮಕ್ಕೆ ನಮ್ಮ ಶಾಲೆ ಆಯ್ಕೆ ಆಗಿದ್ದು ಒಂದು ದೊಡ್ಡ ಸುದ್ದಿ. ಈ ಕಾರ್ಯಕ್ರಮ ನಮ್ಮ ಶಾಲೆಯ ಕ್ರೀಡಾ ಮೈದಾನದಲ್ಲ! ಮೈಸೂರಿನ ಪ್ರತಿಷ್ಠಿತ ಬನ್ನಿ ಮಂಟಪದಲ್ಲಿ. ಏಕೆಂದರೆ ಆ ವರ್ಷ ಸ್ವಾತಂತ್ರ ಸಿಕ್ಕ ಸುವರ್ಣ ವರುಷ ಅಂದರೆ 1997. ಮೈಸೂರು ಕೂಡ ದೊಡ್ಡ ಪ್ರಮಾಣದಲ್ಲಿ ತಯ್ಯಾರಿ ನಡೆಸಿತ್ತು. ನಗರದ ಸಚಿವರು ಮತ್ತು ಗಣ್ಯರು ಅಲ್ಲಿ ನೆರೆದು ಅಧಿಕೃತ ಧ್ವಜಾರೋಹಣ ಸಮಾರಂಭಕ್ಕೆ ವೇದಿಕೆ ಸಜ್ಜಾಗುತ್ತಿತ್ತು. ನಮಗೆ ಈವೆಲ್ಲರ ಅರಿವಿರಲಿಲ್ಲ.ತಿಂಗಳ ಮುಂಚಿತವಾಗಿಯೇ ಇಡೀ ಶಾಲೆಯ ಮಕ್ಕಳಿಗೆ ನೃತ್ಯಾಭ್ಯಾಸ. ನಮಗೆ ಖುಷಿನೋ ಖುಷಿ. ಯಾಕಂದ್ರೆ ಪಾಠವಿಲ್ಲ ಹೋಂ ವರ್ಕ್ ಇಲ್ಲ. ಅಷ್ಟೇ ಅಲ್ಲ ಎಲ್ಲಾ ಮಕ್ಕಳಿಗೂ ಬಾದಾಮಿ ಹಳದಿಯ ಚೂಡಿ ದಾರ್ ಸಮವಸ್ತ್ರ ಈ ನೃತ್ಯ ಪ್ರದರ್ಶನದ ಸಲುವಾಗು. ನಮ್ಮ ಶಾಲೆಯ ಆಡಿಟೋರಿಯಂ ಅನ್ನು ಒಂದು ಪುಟ್ಟ ಕಾರ್ಖಾನೆಯನ್ನಾಗಿ ಪರಿವರ್ತಿಸಿ ೧೦-೨೦ ದರ್ಜಿಯನ್ನು ಕರೆತಂದು ನಮ್ಮ ಅಳತೆಯ ಪ್ರಕಾರ ಚೂಡಿ ದಾರ್ ಹೋಲಿಸಲಾಯಿತು. ಇಡೀ ದಿನ ಮೈದಾನದಲ್ಲಿ ಡಾನ್ಸ್ ಪ್ರಾಕ್ಟೀಸ್ ! 2-3 ತಿಂಗಳು ಬೆಳಗಿನಿಂದ ಸಂಜೆಯತನಕ ''ಏ ಮೇರೇ ವತನ್ ಕೆ ಲೋಗೋ ಝಾರ ಆಂಖ ಮೇ ಭರಲೋ ಪಾನಿ''!. ಎಲ್ಲಾ ಮಕ್ಕಳಿಗೂ ಬಾಯಿಪಾಠ. ನಮ್ಮ ಹಿಂದಿ ಬಹಳ ಶುದ್ಧವಾದ ಕರಣ ಪದಗಳ ಅರ್ಥ ಸರಿಯಾಗಿ ತಿಳಿಯದೆ ಬರಿ ಕುಣಿದ್ದಾಯ್ತು. ಕನ್ನಡದ ಹಾಡು ಬದಲು ಹಿಂದಿ ಹಾಡು ಯಾಕೆ ಹಾಡಿನ ಅರ್ಥ ಪೂರ್ತಿಯಾಗಿ ತಿಳಿಯುವ ತಿಳುವಳಿಕೆ ಕೂಡ ಇರಲಿಲ್ಲ,ಯಾರನ್ನಾದರೂ ಕೇಳೋಣ ಅಂತ ನಮ್ಮ ತಲೆಗೆ ಬರಲೇ ಇಲ್ಲ. ಆದರೆ ಈ ದಿನಗಳು ಮಾತ್ರ ಮನಸ್ಸಿನಲ್ಲಿ ಹಸಿರಾಗಿ ಉಳಿದಿದೆ. ಭಾರತದ ನಕ್ಷೆ ಮಾಡಿ ಎಲ್ಲ ಮಕ್ಕಳನ್ನು ಅದ್ರೊಳಗೆ ನಿಲ್ಲಿಸಿ ಒಂದು ರಾಜ್ಯದಿಂದ ಮತ್ತೊಂದಕ್ಕೆ ಕುಣಿಯುತ್ತ ಹೋಗೋದು.ಮೈದಾನಲ್ಲಿ NCC ಕ್ಯಾಡೆಟ್ಸ್ ಸೈನಿಕರಾಗಿ ಗಡಿಯಲ್ಲಿ ನಕಲಿ ಬಂದೂಕು ಗುಂಡಿನ ಸದ್ದು, ಅಶ್ರುವಾಯು ಎಲ್ಲವೂ ಸಮರದ ನೃತ್ಯ ನಾಟಕ ರೂಪಕವಾಗಿ ನೈಜ ದೃಶ್ಯಾವಳಿ ಸೃಷ್ಟಿಸಿತ್ತು. ನಮ್ಮ ನೃತ್ಯ ಪ್ರದರ್ಶನಕ್ಕೆ ನಮ್ಮ ಶಾಲೆಗೆ ಪ್ರಥಮ ಸ್ಥಾನ! ಅಷ್ಟೇ ಅಲ್ಲ .. ಇದೇ ಮತ್ತೆ ರಿಪೀಟ್ ದಸರಾ ಉತ್ಸವಕ್ಕೆ. ನಮಗೆ ಮಜಾ.. ಓದಿಲ್ಲ ಬರಿಯಿಲ್ಲ ! ಈ ಹಾಡು ಕೆಲ ವರಷುಗಳ ಹಿಂದೆ ಮತ್ತೆ ಕೇಳಿದೆ ಮೈ ಝಂಮ್ ಅಂತು! ಕವಿ ಪ್ರದೀಪ್ ಮನಸ್ಸಿನ್ನಲ್ಲಿ ಅದೆಷ್ಟು ದುಃಖ ರೋದನೆ! 1962 ರಲ್ಲಿ ಭಾರತ ಚೀನಾ ನಡುವಿನ ಯುದ್ಧದಲ್ಲಿ ಹುತಾತ್ಮರಾದ ವೀರ ಸೇನಾನಿಗಳಿಗೆ ಶ್ರದ್ಧಾಂಜಲಿ ರೂಪದಲ್ಲಿ ಹೊರಬಂದ ಅಕ್ಷರ ಕಂಬನಿ. ಈ ಹಾಡನ್ನು ರಾಷ್ಟ್ರ ಗೀತೆಯಷ್ಟೇ ಸರಾಗವಾಗಿ ಹಾಡಬಲ್ಲ ನಾನು ಅರ್ಥಗೊತಿಲ್ಲದೆ ಬಡಬಡಿಸುತ್ತಿದ್ದೆ. ಈ ಗೀತೆಯ ಹಿನ್ನೆಲೆ ತಿಳಿದಿರಲಿಲ್ಲ. ಬಹಳಷ್ಟು ರೋಚಕ ಕಥೆಗಳಿವೆ. ಇವೆಲ್ಲವೂ ಈಗ ಬಹುಷಃ ಮುಖ್ಯವಲ್ಲ. ಆದರೆ 1963 ಗಣತಂತ್ರ ದಿನದ ಕಾರ್ಯಕ್ರಮದಲ್ಲಿ ಹಾಡಿದ ಲತಾ ಮಂಗೇಶ್ಕರ್ ಅವರಿಗೆ ಈ ಹಾಡಿನ ಯಶಸ್ಸಿನ ಮೇಲೆ ನಂಬಿಕೆಯಿರಲಿಲ್ಲ ಯಾಕೆಂದರೆ ಈಹಾಡು ಯಾವುದೇ ಸಿನಿಮಾಕ್ಕೆ ಬಳಸಿರಲಿಲ್ಲ.ಆದರೆ ಜವಾಹರ್ ಲಾಲ್ ನೆಹರು ಅವರ ಪ್ರತಿಕ್ರಿಯೆ ಹಾಗು ಪದಗಳ ಸೂಕ್ಷ್ಮ ಹಾಗು ದೇಶಭಕ್ತಿಯ ಭಾವನೆ ಈ ಹಾಡನ್ನು ತಕ್ಷಣವೇ ಜನಪ್ರಿಯ ಮಾಡಿತು. ಈ ಹಾಡು ಈ ಪ್ರಸ್ತುತ ದಿನಕ್ಕೂ ಅಳವಡಿಸುತ್ತದೆ. ಪ್ರಪಂಚದ ಎಲ್ಲೋ ಮೂಲೆಯಲ್ಲಿ ಇಂತಹ ಪರಿಸ್ಥಿತಿ ಇದ್ದೇಇದೆ. ಆದರೆ ನಾವು ಆಚರಿಸಬಹುದಾದ ಎಷ್ಟೋ ಹೆಮ್ಮೆಯ ವಿಷಯಗಳು ಇವೆ. ಭಾರತದ ಹಿರಿಮೆ ಗರಿಮೆಯ ಬಗ್ಗೆ ಮಾತಾಡಲು ನಾವು ಹಂಜರಿದಿದ್ದರೆ ನಾವು ಎಲ್ಲೇ ಇದ್ದರೂ ಅದೇ ನಮ್ಮನ್ನು ಮತ್ತಷ್ಟು ಭಾರತದ ಸಮೀಪ ಕರೆದೊಯ್ಯುತ್ತದೆ. ಈಗ ಪ್ರತಿಬಾರಿ ಈ ಹಾಡು ಕೇಳಿದಾಗ ನನಗೆ ನಮ್ಮ ಶಾಲೆಯ ಆ ಅಮೃತ ದಿನಗಳು ಅಜಾದಿಯ ಮಹೋತ್ಸವ ಎಲ್ಲಾ ಕಣ್ಣ ಮುಂದೆ ಬರುತ್ತದೆ. ಭಾರತದ ಮೇಲೆ ಮತ್ತಷ್ಟು ಪ್ರೀತಿ ಗೌರವ ಹೆಚ್ಚಾಗುತ್ತದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸನಾತನ ''ಸುಧರ್ಮ''

E-motional !!!

ಮಲ್ಲಿಗೆಯ ಜಿಜ್ಞಾಸೆ