ರಾಜಸ್ಥಾನಿ ಚಿತ್ರಕಲೆ "ಪಿಚ್ಚವಾಯಿ"
ನಮ್ಮ ವಿಶಾಲ ದೇಶದ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಚೈತನ್ಯವನ್ನು ಕಲೆ ಮತ್ತು ವಿವಿಧ ರೀತಿಯ ಕರಕುಶಲ ವಸ್ತುಗಳು ಮೂಲಕವೂ ಚಿತ್ರಿಸಲಾಗುತ್ತದೆ.ಪುರಾಣದ ಸನ್ನಿವೇಶಗಳನ್ನು ಹಾಗು ನಂಬಿಕೆ, ಭಕ್ತಿ ,ಶ್ರದ್ದೆ ,ಜೀವನ ಶೈಲಿ ಎಲ್ಲವು ಚಿತ್ರಗಳ ,ಬಣ್ಣಗಳ ಹಾಗು ಕಥೆಗಳ ಮೂಲಕ ಜನರಿಂದ ಜನಕ್ಕೆ ,ಪೀಳಿಗೆಯಿಂದ ಪೀಳಿಗೆಗೆ ಮುಂದುವರೆಸಲಾಗುತ್ತದೆ. ಜಾನಪದ ಹಾಡುಗಳು ಬಾಯಿಂದ ಬಾಯಿಗೆ ತಲಪುವಂತೆ, ಜಾನಪದ ಚಿತ್ರಕಲೆ ಹಾಗು ಬುಡಕಟ್ಟು ಜನಾಂಗದ ಕಲೆಗಳು ಕೈಯಿಂದ ಕೈಯಿಗೆ ಸಂಚರಿಸಿ ವಿವಿದೆಡೆ ಹರಡುತ್ತದೆ. ಕೆಲ ಬಾರಿ ಸಾಂಪ್ರದಾಯಿಕ ಚಿತ್ರಕಲೆಗಳ ಬಣ್ಣ ಹಾಗು ಮತ್ತಿತರ ಸಾಮಗ್ರಿಗಳ ಎಲ್ಲೆಡೆ ಸಿಗದ ಕಾರಣ, ಸಂಶ್ಲೇಷಿತ ವಸ್ತುಗಳ ಉಪಯೊಗವಾಗಿತ್ತಿವೆ. ನಮ್ಮ ದೈತ್ಯ ರಾಷ್ಟ್ರದ ಉದ್ದಗಲಕ್ಕೂ, ಪ್ರತಿ ಪ್ರದೇಶದಲ್ಲೂ ಅದರದೇ ಆದ ಜಾನಪದ ಮತ್ತು ಬುಡಕಟ್ಟು ಸಮುದಾಯದ ಕಲೆ ವೈಶಿಷ್ಟ್ಯತೆ ಇರುವುದು ಒಂದು ಅದ್ಭುತವೇ . ಭಾಷೆಯೇ ಶ್ರೀಮಂತಿಕೆ ಇದ್ದರು ಒಮ್ಮೊಮ್ಮೆ ಅದು ಜನರ ಜೀವನ ಶೈಲಿಯನ್ನು ಹೊರದೇಶಕ್ಕೆ ತಲುಪಿಸುವುದರಲ್ಲಿ ಸಫಲವಾದರೂ ಜನರ ಮೆಚ್ಚುಗೆಗೆ ಪಾತ್ರವಾಗುವುದರಲ್ಲಿ ಸಾಫಲ್ಯತೆ ಪಡೆಯದಿರಬಹುದು .ಏಕೆಂದರೆ ಅದರ ಅನುವಾದವಾಗಬೇಕು. ಆದರೆ ಚಿತ್ರಕಲೆ, ಸಂಗೀತ ,ನೃತ್ಯ ಇವುಗಳಿಗೆ ಭಾಷೆಯ ತಡೆಗೋಡೆ ಇಲ್ಲ. ಯಾರು ಬೇಕಾದರೂ ನೋಡಿ ಆನಂದಿಸಿ ಪ್ರೋತ್ಸಾಹಿಸಬಹುದು. ಕೆಲವು ದಶಕಗಳ ಹಿಂದೆ ಕೇವಲ ಸಿನೆಮಾ ...