ಗುಟ್ಟಾಟ ಹುಡುಗಾಟ ಕೊನೆಗೆ ಬೊಬ್ಬಾಟ
ನಾಕಂಡಂತೆ ಬರಿ ಬಣ್ಣ ಎರಚೋದು ಮತ್ತು ಹೆಣ್ಣು ಮಕ್ಕಳು ಬೀದಿಗಿಳಿದು ಬಣ್ಣ ಆಡುವ ಸ್ವತಂತ್ರ ಇರುವುದಿಲ್ಲ ಅಷ್ಟೇ ಅಲ್ವಾ ..? ಬರೀ ಹುಡುಗರು ಆಡೋದನ್ನು ನೋಡಿ ಹೊಟ್ಟೆ ಕಿಚ್ಚು ಪಡುತ್ತಾ , ಮತ್ತೆ ಮತ್ತೆ ಅಮ್ಮನ ಕೇಳ್ತಿದ್ದೆ ನಾನ್ಯಾಕೆ ಬಣ್ಣ ಅಡೋಹಾಗಿಲ್ಲ? ಮನೆಯೊಳಗೇ ಯಾಕೆ ಬಣ್ಣ ಎರಚೋಹಾಗಿಲ್ಲ ? ಬರಿ ಪ್ರಶ್ನೆಗಳು. ಆಗ ನನ್ನ ತಂದೆ ಅವರ ಚಿಕ್ಕವರು ಇರುವಾಗ ಏನೆಲ್ಲಾ ಕಿಡಿಗೇಡಿ ಕೆಲಸ ಮಾಡುತ್ತಿದ್ದರು ಅಂತ ಹೇಳ್ತಾ ಇದ್ದಾಗ, ನಾನು ಅಷ್ಟು ಶಿಸ್ತೀನಿ ಮನುಷ್ಯ ,ನಾವು ಕೆಟ್ಟ ಕೆಲಸ ಮಾಡಿದ್ರೆ ಬಯ್ಯುವ ತಂದೆ ತಾವು ಮಾಡಿದನ್ನು ಎಷ್ಟು ಹೆಮ್ಮೆಯಿಂದ ಹೆಲ್ಹೋಳ್ಳುತ್ತಿದರೆ ಅಂತಾ ಆಶ್ಚರ್ಯ ಪಟ್ಟಿದ್ದೆ. ಶಿವರಾತ್ರಿ ನಂತರ ೭-೮ ವರ್ಷದಿಂದ ಹಿಡಿದು ದೊಡ್ಡಹುಡುಗರು (ಬೀದಿ ಕಾಮಣ್ಣ ಅಂತಾ ಅಂತಾರೆ) ಮನೆ ಮನೆ ಹೋಗಿ ''ಕಾಮಣ್ಣ ಮಕ್ಳು ಬಂದೀವಿ, ಏನಾರ ಕೊಡ್ರಿ'' ಅಂತಾ ಕಿರುಚುತ್ತಾ , ಹಳೆ ಬಟ್ಟೆ , ಕಟ್ಟಿಗೆ, ರದ್ದಿ ಎಲ್ಲವನ್ನು ಕಲೆಹಾಕಲು ಶುರು ಮಾಡುತ್ತಾರೆ. ಆ ಗುಂಪಿನಲ್ಲಿರುವ ಪುಟಾಣಿಗಳ ಕೆಲಸ ಯಾವ ಮನೆಯ ಹಿತ್ತಲಿನಲ್ಲಿ ಏನಾದ್ರು ಸಿಗುತ್ತಾ ಅಂತಾ ನೋಡಿ ಅದನ್ನು ಕಳ್ಳತನ ಮಾಡಿ, ಒಂದು ರಹಸ್ಯವಾದ ಜಾಗ ಹುಡುಕಿ ಎಲ್ಲ ವಸ್ತುಗಳನ್ನು ಅಲ್ಲಿ ಮುಚ್ಚಿಡುವುದು. ಈ ಪಿತೂರಿಯ ಮಜಾ ಏನೆಂದರೆ ಬೇಡಿ ಪಡೆಯೋಕಿಂತ ತುಡುಗು ಮಾಡುವುದರಲ್ಲಿರುವುದು. ನನ್ನ ತಂದೆ ಸೋದರಸಂಧಿಗಳೆಲ್ಲ ಚಿಕ್ಕವರಿದ್ದಾಗ ಇಂತಹ ಘನ...